ಚುಟುಕು ಸುದ್ದಿ: ವಾರಣಾಸಿಯಲ್ಲಿ ಧರಣಿ ಕೈ ಬಿಟ್ಟ ಬಿಜೆಪಿ
ಬೆಂಗಳೂರು, ಮೇ.7: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
5.20: ನರೇಂದ್ರ ಮೋದಿ ಅವರು BHU ಕ್ಯಾಂಪಿಸಿನಲ್ಲಿ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
5.05: ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷ ವಿಎಸ್ ಸಂಪತ್ ರಿಂದ ಸುದ್ದಿಗೋಷ್ಠಿ, ಬಿಜೆಪಿ ಪ್ರಶ್ನೆಗಳಿಗೆ ಉತ್ತರ, ಯಾವುದೇ ಪಕ್ಷದ ಪ್ರಭಾವಕ್ಕೆ ಒಳಗಾಗಿಲ್ಲ ಎಂದು ಸ್ಪಷ್ಟನೆ.
4.45: ವಾರಣಾಸಿಯ ರೊಹಣಿಯಾದಲ್ಲಿ ಮೋದಿ ಭಾಷಣ. ಧರಣಿ ಕೈ ಬಿಟ್ಟ ಬಿಜೆಪಿ.
4.15: ರಾಹುಲ್ ಗಾಂಧಿ ಪಶ್ಚಿಮ ಬಂಗಾಳದ ಘಟಲ್ ನಲ್ಲಿ ಚುನಾವಣಾ ಪ್ರಚಾರ.
3.45: ಸೋನಿಯಾ ಗಾಂಧಿ ಅವರಿಂದ ಉತ್ತರಪ್ರದೇಶದ ಕುಷಿನಗರದಲ್ಲಿ ಪ್ರಚಾರ.
2.25: ಉತ್ತರಪ್ರದೇಶದ ಅಜಮ್ ಘರ್ ನಲ್ಲಿ ಮೋದಿ ಭಾಷಣ.
2.00: ಗುಜರಾತ್ ಮಾಡೆಲ್ ಎಂಬುದಿಲ್ಲ. ಇದ್ದರೆ ಅದು ಮೋದಿ ಮಾಡೆಲ್, ಟಾಫಿ ಮಾಡೆಲ್, ಅದಾನಿ ಮಾಡೆಲ್ ಎಂದು ರಾಹುಲ್ ಗಾಂಧಿ ಹೇಳಿಕೆ.

11.15: ಬಿಜೆಪಿ ಡ್ರಾಮಾ ತಂಡವಾಗಿ ಬಿಟ್ಟಿದೆ. ಚುನಾವಣಾ ಸಮಾವೇಶಗಳ ವಿಷಯದಲ್ಲಿ ನಾಟಕವಾಡುವುದು ಅಭ್ಯಾಸವಾಗಿದೆ : ಮಾಯಾವತಿ
11.00: ಗಂಗಾ ಅರತಿ ಮಾಡಲು ಯಾವುದೇ ಅನುಮತಿ ಬೇಕಾಗಿಲ್ಲ, ನರೇಂದ್ರ ಮೋದಿ ಜತೆ ಬಹಿರಂಗ ಚರ್ಚೆಗೆ ಅರವಿಂದ್ ಕೇಜ್ರಿವಾಲ್ ಆಹ್ವಾನ.
10.45 : ವಾರಣಾಸಿಯಲ್ಲಿ ಗಂಗಾ ಆರತಿಗೆ ಅನುಮತಿ ಸಿಕ್ಕರೂ ಗಂಗಾ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದ ಮೋದಿ.
10.30: ಚುನಾವಣಾ ಆಯೋಗದ ವಿರುದ್ಧ ದೆಹಲಿ ಹಾಗೂ ವಾರಣಾಸಿಯಲ್ಲಿ ಬಿಜೆಪಿಯಿಂದ ಪ್ರತಿಭಟನೆ.
9.30: ತಮಿಳುನಾಡಿನ 2 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಆದೇಶ. ಮೇ.10 ರಂದು ಮತ್ತೆ ವೋಟಿಂಗ್.












Click it and Unblock the Notifications