ಜನಸೇನಾ ಪಕ್ಷದಿಂದ ಲೋಕಸಭೆಗೆ ಸ್ಪರ್ಧೆ ಇಲ್ಲ
ಬೆಂಗಳೂರು, ಮಾ.28: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ. ಸೋನಿಯಾ ಗಾಂಧಿ ವಿರುದ್ಧ ಉಮಾ ಭಾರತಿ ಕಣಕ್ಕಿಳಿಯುವ ಸುದ್ದಿಯ ನಂತರ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಸ್ಪರ್ಧಿಸುವ ಸುದ್ದಿ ಬಂದಿದೆ.
6.15: ತೆಲುಗು ನಟ ಪವನ್ ಕಲ್ಯಾಣ್ ಸ್ಥಾಪಿತ ಜನ ಸೇನಾ ಪಕ್ಷದಿಂದ ಲೋಕಸಭೆ ಚುನಾವಣೆಯಲ್ಲಿ ಯಾವ ಅಭ್ಯರ್ಥಿಯೂ ಸ್ಪರ್ಧೆಗಿಳಿಯುತ್ತಿಲ್ಲ ಎಂದು ಪವನ್ ಕಲ್ಯಾಣ್ ಸ್ಪಷ್ಟನೆ. ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲಿಸುವ ಭರವಸೆ
6.00: ಪಕ್ಷದಿಂದ ಯಾವುದೇ ಸೂಚನೆ ಬರದಿದ್ದರೆ ಎಂದಿನಂತೆ ಝಾನ್ಸಿ ಕ್ಷೇತ್ರದಿಂದಲೇ ಸ್ಪರ್ಧೆ: ಉಮಾಭಾರತಿ

12.35: ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರಿಗೆ ದೇಶದ ಚುಕ್ಕಾಣಿ ಹಿಡಿಯುವ ಆತುರ ಹೆಚ್ಚಾಗಿದೆ. ಮಾತಿನ ಹಿಡಿತ ತಪ್ಪುತ್ತಿದ್ದಾರೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ.
11.40: ನರೇಂದ್ರ ಮೋದಿಯನ್ನು ಕತ್ತರಿಸಿ ತುಂಡು ತುಂಡು ಮಾಡುತ್ತೇನೆ ಎಂದ ಸಹರಣ್ ಪುರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಹೇಳಿದ್ದಾರೆ ಎಂದು ರಾಷ್ಟ್ರೀಯ ಟಿವಿ ಮಾಧ್ಯಮಗಳಲ್ಲಿ ವರದಿಯಾಗಿದೆ. [ವಿವರ, ವಿಡಿಯೋ ಇಲ್ಲಿ ನೋಡಿ]
* ಮಸೂದ್ ಹೇಳಿಕೆ ಬಗ್ಗೆ ಮೌಲಾನಾ ಖಾಲೀದ್ ಮಸೂದ್ ಪ್ರತಿಕ್ರಿಯೆ :
Its uncivilized language,such hate comments have no place in politics-Maulana Khalid Rashid on Imran Masood pic.twitter.com/APz2waAshs
— ANI (@ANI_news) March 28, 2014 11.00: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಕೋರಿಕೆ ಮೇರೆಗೆ ಸುಬ್ರಮಣ್ಯಂ ಸ್ವಾಮಿ ಮಾ.30ಕ್ಕೆ ಬೆಂಗಳೂರಿಗೆ ಆಗಮನ.
10.30: ಮೇನಕಾ ಗಾಂಧಿ ವಿರುದ್ಧ ವಿಶ್ವ ಹಿಂದೂ ಪರಿಷತ್ ಆರೋಪ. ಫಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿ ಅವರು ಸ್ಥಳೀಯ ದೇಗುಲದ ಅರ್ಚಕರೊಬ್ಬರಿಗೆ ಅಪಮಾನ ಮಾಡಿದ್ದಾರೆ. ಅವರು ಕ್ಷಮೆಯಾಚಿಸಲಿ ಎಂದು ವಿಎಚ್ ಪಿ ಆಗ್ರಹ.

10.15: ರಕ್ಷಣಾ ಸಚಿವ ಎಕೆ ಅಂಟನಿ ವಿರುದ್ಧ ಹೇಳಿಕೆ ನೀಡಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕ್ಷಮೆಯಾಚಿಸುವಂತೆ ಕಾಂಗ್ರೆಸ್ ಆಗ್ರಹ
9.45: ಎನ್ ಡಿಎ ಅಧಿಕಾರಕ್ಕೆ ಬಂದ ಮೇಲೆ ಯಾರು ಉಪಪ್ರಧಾನಿಯಾಗಬೇಕು ಎಂಬುದರ ಬಗ್ಗೆ ಬಿರುಸಿನ ಚರ್ಚೆ ನಡೆದಿದೆ. ಅಕಾಲಿದಳ ಅರುಣ್ ಜೇಟ್ಲಿ ಅವರ ಹೆಸರು ಹೇಳಿದರೆ, ಮಧ್ಯಪ್ರದೇಶದ ಸಚಿವ ಸುರೇಂದ್ರ ಅವರು ಸುಷ್ಮಾ ಅವರು ಉಪ ಪ್ರಧಾನಿಯಾಗಲಿ ಎಂದಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
9.20: ಚುನಾವಣಾ ಪ್ರಚಾರದ ಉದ್ದೇಶಗಳಿಗೆ ಮಕ್ಕಳನ್ನು ಬಳಸಿಕೊಳ್ಳುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಕೋರಿ ಮಹಾರಾಷ್ಟ್ರ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದೆ.

9.00: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಎದುರಿಸುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕಾರ್ ಗೆ ಚುನಾವಣಾ ಆಯೋಗದಿಂದ ಕ್ಲೀನ್ ಚಿಟ್ ಸಿಕ್ಕಿದೆ.
8.30: ಲಕ್ನೋದಲ್ಲಿ ರಾಜನಾಥ್ ಸಿಂಗ್ ವಿರುದ್ಧ ನಿಲ್ಲಿಸಿದ್ದ ಸಮಾಜವಾದಿ ಪಕ್ಷದ ಅಬ್ಯರ್ಥಿ ಬದಲು. ಯುಪಿ ಸಚಿವ ಅಭಿಷೇಕ್ ಮಿಶ್ರಾ ಬದಲಿಗೆ ಅಶೋಕ್ ವಾಜಪೇಯಿ ಕಣಕ್ಕೆ.












Click it and Unblock the Notifications