ಚುಟುಕು: ಮೋದಿ ವಿರುದ್ಧ ಮತ್ತೊಬ್ಬ ಎಲೆಕ್ಷನ್ ಕಿಂಗ್

ಬೆಂಗಳೂರು, ಏ.23: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

10.25: ವಾರಣಾಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿದಿರುವ ನರೇಂದ್ರನಾಥ್ ದುಬೆ ಎಂಬ ಪಕ್ಷೇತರ ಅಭ್ಯರ್ಥಿ ಮತಯಾಚನೆ ಸಂದರ್ಭದಲ್ಲಿ ನನಗೆ ವೋಟು ಹಾಕಬೇಡಿ ಎನ್ನುತ್ತಿದ್ದರಂತೆ. ಅತಿ ಹೆಚ್ಚು ಬಾರಿ ಸೋಲು ಕಂಡ ಅಭ್ಯರ್ಥಿ ಎಂಬ ದಾಖಲೆ ಹೊಂದಿರುವ ತಮಿಳುನಾಡಿನ ಪದ್ಮರಾಜನ್ ದಾಖಲೆ ಮುರಿಯಲು ದುಬೆ ಯತ್ನಿಸುತ್ತಿದ್ದಾರೆ.ಪದ್ಮರಾಜನ್ ಕೂಡಾ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. [ಮೋದಿಗೆ ಎಲೆಕ್ಷನ್ ಕಿಂಗ್ ಸವಾಲು]

10.15: ದ್ವೇಷ ಕಾರುವ ಭಾಷಣ ಮಾಡಿರುವ ಬಿಜೆಪಿ ಧುರೀಣ ಗಿರಿರಾಜ್ ಸಿಂಗ್ ಅವರು ಬಿಹಾರ ಮತ್ತು ಜಾರ್ಖಂಡ್ ‌ನಲ್ಲಿ ಚುನಾವಣಾ ಪ್ರಚಾರ ನಡೆಸುವುದರ ಮೇಲೆ ಚುನಾವಣಾ ಆಯೋಗ ಮಂಗಳವಾರ ನಿಷೇಧ ಹೇರಿದೆ.

Election news in kannada

10.00: ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರು 1981ರಲ್ಲಿ ತಾನು ಮೊದಲ ಪತ್ನಿಗೆ ವಿಚ್ಛೇದನ ನೀಡಿರುವುದಾಗಿ ಮೊತ್ತಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ. ಬಿಹಾರದ ಹಜೀಪುರ ಕ್ಷೇತ್ರದಿಂದ ಪಾಸ್ವಾನ್ ಸ್ಪರ್ಧಿಸುತ್ತಿರುವ ಪಾಸ್ವಾನ್ ಅವರು ಈ ರೀತಿ ಘೋಷಿಸಿದ್ದಾರೆ.

9.45: ರಾಹುಲ್ ಚೆನ್ನಾಗಿ ಪ್ರಚಾರ ಮಾಡುತ್ತಿದ್ದಾರೆ. ಸಾಕಷ್ಟು ಪ್ರವಾಸ ಮಾಡುತ್ತಿದ್ದಾರೆ, ಅನೇಕ ರ್ಯಾಲಿಗಳಲ್ಲಿ ಭಾಷಣ ಮಾಡುತ್ತಿದ್ದಾರೆ. ಮುಂದೆ ಉತ್ತಮ ನಾಯಕರ ತಂಡವೊಂದು ರಾಹುಲ್ ಅಡಿ ಕೆಲಸ ಮಾಡಲಿದೆ ಎಂದು ಪವಾರ್ ಹೇಳಿದ್ದಾರೆ.
9.30: ಬಿಜೆಪಿ 272 ಪ್ಲಸ್ ಸ್ಥಾನ ಗೆಲ್ಲುವುದು ಕನಸಿನ ಮಾತು. ಎನ್ ಸಿಪಿ ಎಂದಿಗೂ ಬಿಜೆಪಿ ಜತೆ ಕೈಜೋಡಿಸುವ ಯೋಚನೆ ಮಾಡಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ.
9.15: ಪ್ರಿಯಾಂಕಾ ಗಾಂಧಿ ಹೇಳಿಕೆಯನ್ನು ಅಲ್ಲಗೆಳೆದ ಅರುಣ್ ಜೇಟ್ಲಿ, ವೈಯಕ್ತಿಕ ವಾಕ್ಸಮರ ನಡೆಸುತ್ತಿರುವುದು ಬಿಜೆಪಿಯಲ್ಲ ಕಾಂಗ್ರೆಸ್ ಎಂದಿದ್ದಾರೆ.ಪತಿ ವಾಧ್ರಾ ಪರ ವಾಗ್ದಾಳಿ ನಡೆಸುವುದನ್ನು ಪ್ರಿಯಾಂಕಾ ಗಾಂಧಿ ಖಂಡಿಸಿದ್ದರು.

9.00: ಮೋದಿ ಪ್ರಧಾನಿಯಾದರೆ ಆರು ತಿಂಗಳಲ್ಲಿ ಪಾಕಿಸ್ತಾನವನ್ನು ನಾಶ ಮಾಡುತ್ತಾರೆ ಎಂದು ಶಿವಸೇನೆ ನಾಯಕ ರಾಮದಾಸ್ ಕದಂ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+