ಚುಟುಕು: ಜಸ್ವಂತ್ ಸಿಂಗ್ ಮಗ ಪಕ್ಷದಿಂದ ಅಮಾನತು
ಬೆಂಗಳೂರು, ಏ.11: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
10.40: ಟಿಕೆಟ್ ಸಿಗದೆ ಬಂಡಾಯವೆದ್ದ ಜಸ್ವಂತ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕ ಜಸ್ವಂತ್ ಸಿಂಗ್ ಅವರ ಮಗ ಮನವೇಂದ್ರ ಸಿಂಗ್ ಅವರನ್ನು ಬಿಜೆಪಿ ತನ್ನ ಪಕ್ಷದಿಂದ ಉಚ್ಚಾಟನೆ ಮಾಡಿದೆ.
10.15: ರೇಪ್ ಬಗ್ಗೆ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಎಸ್ಪಿ ನಾಯಕ ನರೇಶ್ ಅಗರವಾಲ್ ಸಮರ್ಥನೆ ಮಾಡಿಕೊಂಡಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ನನ್ನ ತಂದೆ ಯಾವ ಸಂದರ್ಭದಲ್ಲಿ ಹೀಗೆ ಹೇಳಿದರೋ ನನಗೆ ಗೊತಿಲ್ಲ ಎಂದಿದ್ದಾರೆ.

10.00: ಕೇಂದ್ರ ಸಚಿವ ಬೇನಿ ಪ್ರಸಾದ್ ವರ್ಮ ಅವರಿಗೆ ನೀತಿ ಸಂಹಿತೆ ಉಲ್ಲಂಘನೆ ಆರೋಪ.
9.45: ದೆಹಲಿ ಅಧಿಕಾರ ತ್ಯಜಿಸಿದ್ದು ದೊಡ್ಡ ಮಿಸ್ಟೇಕ್ ಎಂದು ಒಪ್ಪಿಕೊಂಡ ಎಎಪಿ ಅರವಿಂದ್ ಕೇಜ್ರಿವಾಲ್. ಅರವಿಂದ್ ಕೇಜ್ರಿವಾಲ್ ಮುಖ್ತಾರ್ ಅನ್ಸಾರಿ ಜತೆ ಕೈ ಜೋಡಿಸಿದ್ದಾರೆ. ವಾರಣಸಿಯಿಂದ ಸ್ಪರ್ಧೆಯಿಂದ ಅನ್ಸಾರಿ ಹಿಂದೆ ಸರಿದಿದ್ದಾರೆ.












Click it and Unblock the Notifications