ಶಿವಸೇನೆ ಬಗ್ಗೆ ಚುನಾವಣಾ ಆಯೋಗದ ನಿರ್ಧಾರ: ಉದ್ಧವ್ ಠಾಕ್ರೆ ಹೆಸರಿಸದೆ ರಾಜ್ ಠಾಕ್ರೆ ವ್ಯಂಗ್ಯ!
ಶಿವಸೇನೆ ಬಗ್ಗೆ ಚುನಾವಣಾ ಆಯೋಗದ ನಿರ್ಧಾರ ತೆಗೆದುಕೊಂಡ ಬಳಿಕ ಉದ್ಧವ್ ಠಾಕ್ರೆ ಹೆಸರಿಸದೆ ರಾಜ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಶುಕ್ರವಾರ ಶಿವಸೇನೆ ಕುರಿತು ಕೇಂದ್ರ ಚುನಾವಣಾ ಆಯೋಗದ ನಿರ್ಧಾರದ ನಂತರ, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಅವರು ತಮ್ಮ ಸಂಬಂಧಿ ಉದ್ಧವ್ ಠಾಕ್ರೆ ಅವರನ್ನು ಹೆಸರಿಸದೆ ವ್ಯಂಗ್ಯವಾಡಿದ್ದಾರೆ. ವಾಸ್ತವವಾಗಿ ಶುಕ್ರವಾರ ಚುನಾವಣಾ ಆಯೋಗವು ತನ್ನ ನಿರ್ಧಾರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪಾಳಯವನ್ನು ನಿಜವಾದ ಶಿವಸೇನೆ ಎಂದು ಕರೆಯಿತು. ಹೀಗಾಗಿ 'ಬಿಲ್ಲು ಮತ್ತು ಬಾಣ' ಚಿಹ್ನೆ ಶಿಂಧೆ ಬಣದಲ್ಲಿರುತ್ತದೆ ಎಂದು ಅದು ಹೇಳಿತು. ಇದರ ನಂತರ ರಾಜ್ ಠಾಕ್ರೆ ಅವರು ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಆಡಿಯೊ ಕ್ಲಿಪ್ ಅನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಉದ್ಧವ್ ಠಾಕ್ರೆ ಅವರನ್ನು ಹೆಸರಿಸದೆ ಗುರಿಯಾಗಿಸಿದ್ದಾರೆ.
ಶಿವಸೇನೆ ವರ್ಸಸ್ ಶಿವಸೇನೆ ನಡುವಿನ ಕಾನೂನು ಹೋರಾಟದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಗೆಲುವು ಸಿಕ್ಕಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತೀವ್ರ ಮುಖಭಂಗವಾಗಿದೆ. ಕಳೆದ ದಿನ ಕೇಂದ್ರ ಚುನಾವಣಾ ಆಯೋಗ ಶಿವಸೇನೆಯ ಮೂಲ ಚಿಹ್ನೆಯಾದ ಬಿಲ್ಲು ಬಾಣವನ್ನು ಶಿಂಧೆ ಬಣಕ್ಕೆ ನೀಡುವ ಮೂಲಕ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿದೆ. ತಮ್ಮ ಬಣವನ್ನೇ ನಿಜವಾದ ಶಿವಸೇನಾ ಎಂದು ಪರಿಗಣಿಸಿ ಪಕ್ಷದ ಚುನಾವಣಾ ಚಿಹ್ನೆಯನ್ನು ನೀಡುವಂತೆ ಏಕನಾಥ್ ಶಿಂಧೆ ಬಣ ಹಾಗೂ ಉದ್ಧವ್ ಠಾಕ್ರೆ ಬಣ ಚುನಾವನಾ ಆಯೋಗದ ಮೊರೆ ಹೋಗಿದ್ದವು. ಆಯೋಗ ಅಂತಿಮವಾಗಿ ಬಿಲ್ಲು ಬಾಣ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡಿದೆ.
बाळासाहेबांनी दिलेला ‘शिवसेना’ हा विचार किती अचूक होता ते आज पुन्हा एकदा कळलं.... #शिवसेना #बाळासाहेब_ठाकरे #Legacy pic.twitter.com/FxO3wprUUF
— Raj Thackeray (@RajThackeray) February 17, 2023
ರಾಜ್ ಠಾಕ್ರೆ ಅವರು ಹಂಚಿಕೊಂಡ ಆಡಿಯೋ ಕ್ಲಿಪ್‌ನಲ್ಲಿ ಬಾಳಾಸಾಹೇಬ್ ಠಾಕ್ರೆ ಅವರು ಸಂಪತ್ತು ಮತ್ತು ಪ್ರತಿಷ್ಠೆಯ ಬಗ್ಗೆ ಮಾತನಾಡಿದ್ದಾರೆ. ಈ ಆಡಿಯೋ ಕ್ಲಿಪ್‌ನ ಶೀರ್ಷಿಕೆಯಲ್ಲಿ ರಾಜ್ ಠಾಕ್ರೆ, 'ಬಾಳಾಸಾಹೇಬರು ಶಿವಸೇನೆಗೆ ಸಂಬಂಧಿಸಿದಂತೆ ನೀಡಿದ್ದ ಕಲ್ಪನೆ ಎಷ್ಟು ಸರಿ, ಇಂದು ನನಗೆ ಮತ್ತೆ ಅರ್ಥವಾಗಿದೆ' ಎಂದು ಬರೆದಿದ್ದಾರೆ. ರಾಜ್ ಠಾಕ್ರೆ ಉದ್ಧವ್ ಹೆಸರನ್ನು ಹೇಳದಿದ್ದರೂ, ಇದು ಅವರ ಮೇಲಿನ ನೇರ ವ್ಯಂಗ್ಯ ಎಂದು ಪರಿಗಣಿಸಲಾಗಿದೆ.

'ಹೆಸರು ಕಳೆದುಕೊಂಡರೆ ಕಾಳಸಂತೆಯಲ್ಲಿಯೂ ಸಿಗುವುದಿಲ್ಲ'
30 ಸೆಕೆಂಡುಗಳ ಈ ಆಡಿಯೋ ಕ್ಲಿಪ್‌ನಲ್ಲಿ, ಬಾಳ್ ಠಾಕ್ರೆ ಹೇಳುತ್ತಿದ್ದಾರೆ, 'ಹೆಸರು ಮತ್ತು ಹಣ... ಹಣ ಬರುತ್ತದೆ ಮತ್ತು ಹೋಗುತ್ತದೆ, ಮತ್ತೆ ಮತ್ತೆ ಹಣ ಬರಲೂ ಬಹುದು. ಆದರೆ ಒಮ್ಮೆ ಹೆಸರು ಹೋದರೆ ಮತ್ತೆ ಬರುವುದಿಲ್ಲ. ಹೀಗಾಗಿ ನಿಮ್ಮ ಹೆಸರನ್ನು ಉಳಿಸು.. ಹೆಸರಿನೊಂದಿಗೆ ಖ್ಯಾತಿ ಎಲ್ಲವೂ ಪಡೆದುಕೊ. ಒಂದೊಮ್ಮೆ ಹೆಸರು, ಕೀರ್ತಿ ಹೋದ ಮೇಲೆ ಕಾಳಸಂತೆಯಲ್ಲಿಯೂ ಅದು ಸಿಗುವುದಿಲ್ಲ. ಆದುದರಿಂದ ಹೆಸರು ಮತ್ತು ಕೀರ್ತಿಯನ್ನು ಪವಿತ್ರವಾಗಿರಿಸಿಕೊಳ್ಳಿ' ಎಂದು ಹೇಳಿದರು.

'ಈ ಕಳ್ಳತನಕ್ಕೆ ಮಹಾರಾಷ್ಟ್ರದ ಜನರು ಸೇಡು ತೀರಿಸಿಕೊಳ್ಳುತ್ತಾರೆ'
ಚುನಾವಣಾ ಆಯೋಗದ ನಿರ್ಧಾರದ ನಂತರ, ಉದ್ಧವ್ ಠಾಕ್ರೆ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ, 'ಶಿವಸೈನಿಕರಿಗೆ ತಮ್ಮ ಗುರುತು ಏನು ಎಂದು ತಿಳಿದಿದೆ ಮತ್ತು ಅವರು ಅದಕ್ಕೆ ಬದ್ಧರಾಗಿರುತ್ತಾರೆ. ಏಕನಾಥ್ ಶಿಂಧೆಯವರ ಪಾಳೆಯದಲ್ಲಿರುವವರು ನಿಜವಾದ ಶಿವಸೈನಿಕರಲ್ಲ. ಚುನಾವಣಾ ಆಯೋಗ ನೀಡಿರುವ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಏಕನಾಥ್ ಶಿಂಧೆ ಅವರ ಗುಂಪು ನಮ್ಮ ಚುನಾವಣಾ ಚಿಹ್ನೆಯ ಬಿಲ್ಲು ಬಾಣವನ್ನು ಕದ್ದಿದೆ, ಆದರೆ ಮಹಾರಾಷ್ಟ್ರದ ಜನರು ಈ ಕಳ್ಳತನಕ್ಕೆ ಸೇಡು ತೀರಿಸಿಕೊಳ್ಳುತ್ತಾರೆ. ಇಂದು ನಾವು ಚುನಾವಣಾ ಆಯೋಗ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ' ಎಂದರು.












Click it and Unblock the Notifications