ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆಗೂ ಮುನ್ನ ತಡರಾತ್ರಿ ಸಭೆ ನಡೆಸಿದ ಏಕನಾಥ್ ಶಿಂಧೆ!
ಮುಂಬೈ ಜುಲೈ 7: ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಿನ್ನೆ ತಡರಾತ್ರಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ಅಧಿಕಾರ ಹಂಚಿಕೆ ಕುರಿತು ಚರ್ಚಿಸಿದರು. ಅಜಿತ್ ಪವಾರ್ ಅವರ ಒಡೆದು ಹೋದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಬಣ ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರಕ್ಕೆ ಸೇರ್ಪಡೆಯಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಕಂಡು ಬಂದಿದೆ.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಜಿತ್ ಪವಾರ್ ಮಹಾರಾಷ್ಟ್ರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಧ್ಯರಾತ್ರಿ 2 ಗಂಟೆಯವರೆಗೆ ನಡೆದ ಸಭೆಯಲ್ಲಿ ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ನವಿಸ್ ಅವರು ಸಂಪುಟ ವಿಸ್ತರಣೆ ಕುರಿತು ಚರ್ಚಿಸಿದರು.

ಈ ನಡುವೆ ಬುಧವಾರದಂದು ಕ್ರಮವಾಗಿ ಅಜಿತ್ ಮತ್ತು ಶರದ್ ಪವಾರ್ ಕರೆದ ಎರಡೂ ಸಭೆಗಳಿಗೆ ಹಲವಾರು ಶಾಸಕರು ಹೈರಾಗಿದ್ದಾರೆ. ಆ ಆರು ಮಂದಿಯ ಪರಿಚಯ ಹೀಗಿದೆ.
ಸರೋಜ್ ಅಹಿರೆ
ವಯಸ್ಸು: 41
ಕ್ಷೇತ್ರ: ದೇವಾಲಿ (SC)
ನಿಲುವು: ಇವರು ಸಭೆ ಹಾಜರಾಗದಿರಲು ಕೆಲ ಕಾರಣವನ್ನು ನೀಡಿದ್ದಾರೆ. ಇವರು ಪವಾರ್ ಮತ್ತು ಅಜಿತ್ ಇಬ್ಬರನ್ನೂ ಗೌರವಿಸುತ್ತಾರೆ. ಆದರೆ ನನ್ನ ಕ್ಷೇತ್ರದ ಜನರೊಂದಿಗೆ ಮಾತನಾಡಿದ ನಂತರ ತಮ್ಮ ನಿಲುವನ್ನು ನಿರ್ಧರಿಸುವುದಾಗಿ ಅವರು ಹೇಳಿದರು.
ಚಂದ್ರಕಾಂತ್ ಅಲಿಯಾಸ್ ರಾಜು ನಾವಘರೆ
ವಯಸ್ಸು: 41
ಕ್ಷೇತ್ರ: ವಸ್ಮತ್
ನಿಲುವು: ಸ್ಥಳೀಯ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಗೆ ಪ್ರಚಾರ ಮಾಡುತ್ತಿದ್ದು, ಎರಡು ಸಭೆಗಳಿಗೂ ಹಾಜರಾಗಿಲ್ಲ ಎಂದು ನವಘರೆ ಹೇಳಿದರು. ಜುಲೈ 9ರ ನಂತರ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.

ಅತುಲ್ ಬೆನಕೆ
ವಯಸ್ಸು: 42
ಕ್ಷೇತ್ರ: ಜುನ್ನಾರ್
ನಿಲುವು: ಬೆನಕೆಯವರು ಬಿಜೆಪಿಯ ಪರವಾಗಿ ಕಾಣಿಸಿಕೊಂಡರು. ನಂತರ ಅವರು ಬಂಡಾಯವನ್ನು ಘೋಷಿಸಿದರು. ಆದರೆ ಬೆನಕೆ ನಂತರ ಬಂಡಾಯದಿಂದ ಹಿಂದೆ ಸರಿದರು. "ಪವಾರ್ ಕುಟುಂಬದ" ಜೊತೆ ನಿಲ್ಲುವುದಾಗಿ ಹೇಳಿದರು. ಅಂತಿಮ ಕರೆ ತೆಗೆದುಕೊಳ್ಳುವ ಮೊದಲು ನನ್ನ ಕ್ಷೇತ್ರದ ಜನರೊಂದಿಗೆ ಸಮಾಲೋಚನೆ ನಡೆಸುತ್ತೇನೆ ಎಂದು ಬೆನಕೆ ಹೇಳಿದರು.
ದೌಲತ್ ದರೋಡ
ವಯಸ್ಸು: 55
ಕ್ಷೇತ್ರ: ಶಹಾಪುರ (ಎಸ್‌ಟಿ)
ನಿಲುವು: ಶರದ್ ಪವಾರ್ ಕರೆದ ಸಭೆಗೆ ಹಾಜರಾಗದಿದ್ದರೂ, ದರೋಡಾ ಅವರು ಹಿರಿಯ ನಾಯಕನನ್ನು ಬೆಂಬಲಿಸುವುದಾಗಿ ಮತ್ತು ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿರುವ ಸರ್ಕಾರದಲ್ಲಿ ಭಾಗವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಶುತೋಷ್ ಕಾಳೆ
ವಯಸ್ಸು: 37
ಕ್ಷೇತ್ರ: ಕೋಪರಗಾಂವ
ನಿಲುವು: ಇನ್ನೂ ಸ್ಪಷ್ಟಪಡಿಸಿಲ್ಲ.
ನವಾಬ್ ಮಲಿಕ್
ವಯಸ್ಸು: 64
ಕ್ಷೇತ್ರ: ಅನುಶಕ್ತಿನಗರ
ನಿಲುವು: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮಲಿಕ್ ಕೆಲ ದಿನಗಳಿಂದ ಜೈಲಿನಲ್ಲಿರುವುದರಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ.
ಇದರಿಂದಾಗಿ ಅಜಿತ್ ಪವಾರ್ ಅವರು ಆಡಳಿತಾರೂಢ ಸಮ್ಮಿಶ್ರಕ್ಕೆ ಎಂಟ್ರಿ ಕೊಡುವುದರಿಂದ ಶಾಸಕರಿಗೆ ಅನಾನುಕೂಲವಾಗಿದೆ ಎಂಬ ವರದಿಗಳು ಕೇಳಿ ಬಂದಿವೆ. ಇದನ್ನು ಶಿಂಧೆ ಶಿಬಿರ ನಿರಾಕರಿಸಿದ್ದು ನಂತರ ತಡರಾತ್ರಿಯ ಚರ್ಚೆಗಳು ನಡೆದಿದೆ. ಇದರಿಂದ ಶಿಂಧೆ ಚುರ್ಚಿಗೆ ಕುತ್ತು ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಏಕನಾಥ್ ಶಿಂಧೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಯಾವುದೇ ಯೋಚನೆ ಇಲ್ಲ ಎಂದು ಪಕ್ಷ ಪ್ರತಿಪಾದಿಸಿದೆ.
"ನಾವು ರಾಜೀನಾಮೆ ನೀಡುವವರಲ್ಲ, ಯಾವುದೇ ಆರೋಪಗಳನ್ನು ತೆಗೆದುಕೊಳ್ಳುವವರಲ್ಲ. ಅವರ ನಾಯಕತ್ವವು ಎಲ್ಲರನ್ನು ಕರೆದುಕೊಂಡು ಹೋಗಲು ತಾಳ್ಮೆಯಿಂದಿರಬೇಕು. ನಿನ್ನೆ ಎಲ್ಲಾ ಶಾಸಕರು, ಸಂಸದರು ಏಕನಾಥ್ ಶಿಂಧೆ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದೆಲ್ಲ (ಅಸಮಾಧಾನದ ವರದಿಗಳು) ಏಕನಾಥ್ ಶಿಂಧೆ ಅವರನ್ನು ಕೆಣಕಲು ಮಾಡಲಾಗುತ್ತಿದೆ" ಎಂದು ಶಿವಸೇನೆ ನಾಯಕ ಉದಯ್ ಸಮಂತ್ ಹೇಳಿದ್ದಾರೆ.
ಏಕನಾಥ್ ಶಿಂಧೆ ಕೂಡ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಅಲ್ಲಗಳೆದಿದ್ದಾರೆ. "ಈಗ ನಮ್ಮ ಸರ್ಕಾರವು ಮೂರು ಪಕ್ಷಗಳಿಂದ ಮಾಡಲ್ಪಟ್ಟಿದೆ, ನಮ್ಮ ಶಾಸಕರ ಬಲ 200 ಕ್ಕಿಂತ ಹೆಚ್ಚಿದೆ. ನಮ್ಮ ಸರ್ಕಾರವು ಬಲಗೊಳ್ಳುತ್ತಿದೆ. ನಮಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಬೆಂಬಲವಿದೆ" ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದರು.
ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ರಾಜ್ಯ ಸರ್ಕಾರಕ್ಕೆ ಸೇರ್ಪಡೆಯಾದ ನಂತರ ಶಿವಸೇನೆಯ ಕೆಲವು ಶಾಸಕರು ಕಳವಳ ವ್ಯಕ್ತಪಡಿಸಿದ್ದಾರೆ. 'ಮುಖ್ಯಮಂತ್ರಿ ಆಗಬೇಕು' ಎಂದು ಅಜಿತ್ ಪವಾರ್ ಹೇಳಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಎನ್‌ಸಿಪಿಯ ಹಿರಿಯ ನಾಯಕ ಶರದ್ ಪವಾರ್ ನಿನ್ನೆ ತಮ್ಮ ಸೋದರಳಿಯ ಅಜಿತ್ ಪವಾರ್ ಮತ್ತು ಮಾಜಿ ಉನ್ನತ ಸಹಾಯಕ ಪ್ರಫುಲ್ ಪಟೇಲ್ ಸೇರಿದಂತೆ 12 ಬಂಡಾಯಗಾರರನ್ನು ಉಚ್ಚಾಟಿಸಿದ್ದಾರೆ. ದೆಹಲಿಯಲ್ಲಿ ಶರದ್ ಪವಾರ್ ಅವರ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಅಜಿತ್ ಪವಾರ್ ಬಣದಿಂದ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಪಡೆಯಿತು, ಇದು "ಯಾವುದೇ ಕಾನೂನು ಪವಿತ್ರತೆಯನ್ನು ಹೊಂದಿಲ್ಲ" ಎಂದು ಹೇಳಿದೆ.












Click it and Unblock the Notifications