ಅಹ್ಮದ್ ಪಟೇಲ್ ಆಪ್ತರ ಮನೆಗಳ ಮೇಲೆ 'ಇಡಿ' ದಾಳಿ

Subscribe to Oneindia Kannada

ನವದೆಹಲಿ, ನವೆಂಬರ್ 30: ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಆಪ್ತರ ಮನೆಗಳ ಮೇಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮನಿಲಾಂಡ್ರಿಂಗ್ ವಂಚನೆ: ಟಾಪ್ 10 ಪಟ್ಟಿಯಲ್ಲಿ ಜಗನ್ ಗೆ ಕೊನೆ ಸ್ಥಾನ

ಪಟೇಲ್ ಆಪ್ತ ಸಂಜೀವ್ ಮಹಾಜನ್ ಮತ್ತು ಇತರ ಉದ್ಯಮಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಸಂದೇಸಾರಾ ಗ್ರೂಪ್ ಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿಗಳನ್ನು ನಡೆಸಲಾಗಿದೆ.

ED searches properties of Ahmed Patel's close aide

ಮಹಾಜನ್ ಗೆ ಸೇರಿದ ಮಯೂರ್ ವಿಹಾರ್ ಫೇಸ್ 1 ಮತ್ತು ಬಾಬರ್ ರಸ್ತೆಯ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಘನಶ್ಯಾಮ್ ಪಾಂಡೆಯವರಿಗೆ ಸೇರಿದ ದ್ವಾರಕಾ, ಲಕ್ಷ್ಮೀ ಚಂದ್ ಗುಪ್ತಾರಿಗೆ ಸೇರಿದ ಲಕ್ಷ್ಮೀ ನಗರ, ಅರವಿಂದ್ ಗುಪ್ತಾರಿಗೆ ಸೇರಿದ ಗಾಜಿಯಾಬಾದ್ ನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು 'ಇಡಿ' ವಕ್ತಾರರು ಹೇಳಿದ್ದಾರೆ.

ಚೇತನ್ ಮತ್ತು ನಿತಿನ್ ಸಂದೇಸಾರಾಗೆ ಸೇರಿದ ಸಂದೇಸಾರಾ ಗ್ರೂಪ್ ನ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ. ರೂ. 5,383 ಕೋಟಿ ಮೊತ್ತದ ಅನುಮಾನಾಸ್ಪದ ಹಣ ವರ್ಗಾವಣೆ ಪ್ರಕರಣ ಇದಾಗಿದೆ.

ಸಂದೇಸಾರಾ ಗ್ರೂಪ್ ಮಾಲಿಕರು 300ಕ್ಕೂ ಹೆಚ್ಚು ಬೇನಾಮಿ ಆಸ್ತಿಗಳನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Enforcement Directorate on Thursday said its officials were searching the houses and other premises of Sanjeev Mahajan, a close aide of Congress leader Ahmed Patel, and other businessmen in an alleged money laundering case involving the Sandesara Group of companies.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ