Economic Survey 2023-24: ಇಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿರುವ ನಿರ್ಮಲಾ ಸೀತಾರಾಮನ್
ದೆಹಲಿ ಜುಲೈ 22: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಧ್ಯಾಹ್ನ 1 ಗಂಟೆಗೆ ಲೋಕಸಭೆಯಲ್ಲಿ 2023-24 ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ನಾಳೆ ಕೇಂದ್ರ ಬಜೆಟ್ ಮಂಡನೆ ಆಗಲಿದೆ.
ಸಾಮಾನ್ಯವಾಗಿ, ಆರ್ಥಿಕ ಸಮೀಕ್ಷೆ ಜನವರಿ 31ರಂದು ಹೊರಬರುತ್ತವೆ. ಇದನ್ನು ವಿತ್ತ ಸಚಿವರು ಕೇಂದ್ರ ಬಜೆಟ್ ಮುನ್ನಾ ದಿನ ಸದನದಲ್ಲಿ ಮಂಡಿಸುತ್ತಾರೆ. ಆದರೆ ಈ ಬಾರಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿದ್ದು, ಭಾರತೀಯ ಆರ್ಥಿಕತೆ ಒಂದು ವಿಮರ್ಶೆ ಎಂಬ ಶೀರ್ಷಿಕೆಯಡಿ ಕಿರು ವರದಿಯನ್ನು ಫೆಬ್ರವರಿಯಲ್ಲಿ ಮಂಡಿಸಿತ್ತು.

ಆರ್ಥಿಕ ಸಮೀಕ್ಷೆಯನ್ನು ಯಾರು ಸಿದ್ಧಪಡಿಸುತ್ತಾರೆ?
ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗ, ಹಣಕಾಸು ಸಚಿವಾಲಯ, ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಆರ್ಥಿಕ ಸಮೀಕ್ಷೆಯನ್ನು ಸಿದ್ಧಪಡಿಸುತ್ತದೆ. ಪ್ರಸ್ತುತ, ವಿ ಅನಂತ ನಾಗೇಶ್ವರನ್ ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದಾರೆ. ಇದು ಅವರ ಎರಡನೇ ಆರ್ಥಿಕ ಸಮೀಕ್ಷೆಯಾಗಿದೆ.
2023-24 ರ ಆರ್ಥಿಕ ಸಮೀಕ್ಷೆಯನ್ನು ಯಾವಾಗ ಪ್ರಸ್ತುತಪಡಿಸಲಾಗುತ್ತದೆ?
2023-24ರ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ಮತ್ತು ರಾಜ್ಯಸಭೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಮಂಡಿಸಲಾಗುವುದು. ಇದರ ನಂತರ, ನಾಗೇಶ್ವರನ್ ಅವರು ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮಧ್ಯಾಹ್ನ 02:30 ಕ್ಕೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

2023-24 ರ ಆರ್ಥಿಕ ಸಮೀಕ್ಷೆಯ PDF ಅನ್ನು ಇಂಡಿಯಾ ಬಜೆಟ್ ಪೋರ್ಟಲ್‌ನಿಂದ ಇಂದು ಮಧ್ಯಾಹ್ನ 2:15-2:30 ರ ಸುಮಾರಿಗೆ ಡೌನ್‌ಲೋಡ್ ಮಾಡಬಹುದು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ರ ಕೇಂದ್ರ ಬಜೆಟ್ ಅನ್ನು ಜುಲೈ 23, ಮಂಗಳವಾರ ಸಂಸತ್ತಿನಲ್ಲಿ ಬೆಳಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ.
ಅರ್ಥ ವ್ಯವಸ್ಥೆಯ ಅಂಕಿ ನೋಟ ಹೀಗಿದೆ:
* ಜಿಡಿಪಿ-ಒಟ್ಟು ದೇಶೀಯ ಉತ್ಪನ್ನ
* ಈ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ ಏಳರಷ್ಟು ಬೆಳವಣಿಗೆಯಾಗುವ ಸಾಧ್ಯತೆ ಇದೆ. ಆರ್‌ಬಿಐ ಜಿಡಿಪಿ ಬೆಳವಣಿಗೆ ದರ ಶೇ 7.2 ಎಂದು ಅಂದಾಜಿಸಿದೆ.
* ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುನ್ಸೂಚನೆಯಲ್ಲಿ ಭಾರತದ ಆರ್ಥಿಕತೆಯನ್ನು ಶೇಕಡ 6.8 ರಿಂದ 7ಕ್ಕೆ ಏರಿಸಿದೆ. ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಶೇಕಡ 7 ಎಂದು ಹೇಳಿದೆ.
* ತೆರಿಗೆ ಸಂಗ್ರಹ: ಜುಲೈ 11ರ ತನಕ ಒಟ್ಟು ತೆರಿಗೆ ಸಂಗ್ರಹ ಶೇ.23.24ರಷ್ಟು ಏರಿಕೆಯಾಗಿ /span>6.45 ಲಕ್ಷ ಕೋಟಿ ಆಗಿದೆ.
* ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹ ಚೆನ್ನಾಗಿದ್ದು, ಜುಲೈ11ರ ತನಕದ ನಿವ್ವಳ ನೇರ ತೆರಿಗೆ ಸಂಗ್ರಹವು ಶೇ. 19.54 ಏರಿ 5.74 ಲಕ್ಷ ಕೋಟಿಗೆ ತಲುಪಿದೆ.
ಆರ್ಥಿಕ ಸಮೀಕ್ಷೆ 2023-24: ಏನನ್ನು ನಿರೀಕ್ಷಿಸಬಹುದು?
ವಿತ್ತೀಯ ಕೊರತೆ: ಇದು ಭಾರತದ ವಿತ್ತೀಯ ಕೊರತೆಯ ಬಗ್ಗೆ ವಿವರವಾದ ಒಳನೋಟಗಳನ್ನು ಸಹ ಹಂಚಿಕೊಳ್ಳುತ್ತದೆ. 2024-25 ರ ಮಧ್ಯಂತರ ಬಜೆಟ್‌ನಲ್ಲಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ವಿತ್ತೀಯ ಕೊರತೆಯನ್ನು ಶೇಕಡಾ 5.1 ಕ್ಕೆ ನಿಗದಿಪಡಿಸಲಾಗಿದೆ. ಆರ್‌ಬಿಐನ 2.1 ಲಕ್ಷ ಕೋಟಿ ಹೆಚ್ಚುವರಿ ವರ್ಗಾವಣೆ ಮತ್ತು ಬಲವಾದ ತೆರಿಗೆ ಸಂಗ್ರಹಗಳ ನಡುವೆ ಪ್ರಸ್ತುತ ಹಣಕಾಸು ವರ್ಷದಲ್ಲಿ ಇದು ಶೇಕಡಾ 5 ಕ್ಕೆ ಕಡಿಮೆಯಾಗುವ ನಿರೀಕ್ಷೆಯಿದೆ.
ಉದ್ಯೋಗ, ಕೃಷಿ, ಕೈಗಾರಿಕಾ ಕಾರ್ಯಕ್ಷಮತೆ, ರಫ್ತು ಮತ್ತು ಆಮದುಗಳು, ಹೂಡಿಕೆಯ ವಾತಾವರಣ, ಸುಸ್ಥಿರತೆ, ಸಾಮಾಜಿಕ ವಲಯದ ಯೋಜನೆಗಳು ಮತ್ತು ಸರ್ಕಾರದ ಸುಧಾರಣೆಗಳಿಗೆ ಒತ್ತು ನೀಡುವ ಸಾಧ್ಯತೆ ಇದೆ.
ಬಜೆಟ್ ನಿರೀಕ್ಷೆಗಳೇನು?
* ರಾಜ್ಯದಲ್ಲಿ ವಿವಿಧ ಹಂತಗಳಲ್ಲಿರುವ ನೀರಾವರಿ ಯೋಜನೆಗಳಿಗೆ ಅನುಮತಿ ಮತ್ತು ಅನುದಾನ, ಹೊಸ ಮಾರ್ಗಗಳ ನಿರ್ಮಾಣ ಮತ್ತು ಇರುವ ಮಾರ್ಗಗಳ ಮೇಲ್ದರ್ಜೆಗೆ ಕ್ರಮ, ಬೆಂಗಳೂರಿನ ಸಂಚಾರ ದಟ್ಟಣೆ ನಿರ್ವಹಣೆಗೆ ಅಗತ್ಯವಿರುವ ಉಪನಗರ ರೈಲು ಹಾಗೂ ವರ್ತುಲ ರೈಲು ಯೋಜನೆ ಹೀಗೆ ಹತ್ತಾರು ನಿರೀಕ್ಷೆಗಳಿದ್ದು ರಾಜ್ಯದಿಂದ ರಾಜ್ಯಸಭೆಗೆ ಪ್ರವೇಶಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಮೇಲೆ ರಾಜ್ಯ ಭಾರೀ ನಿರೀಕ್ಷೆಯನ್ನಿಟ್ಟಿದೆ.
* ಮಂಗಳೂರಿನ ರೈಲ್ವೆ ಜಾಲವನ್ನು ನೈಋತ್ಯ ರೈಲ್ವೇಗೆ ಸೇರಿಸಬೇಕು ಎಂಬ ಬೇಡಿಕೆಯ ಬಗ್ಗೆ ಈ ಬಜೆಟ್‌ನಲ್ಲಿ ಪ್ರಸ್ತಾವವಾಗಬಹುದು ಎಂಬ ನಿರೀಕ್ಷೆ ಇದೆ.
* ಬೆಂಗಳೂರು-ಮೀರಜ್ ನಡುವೆ ವಿದ್ಯುದೀಕರಣ
* ಭದ್ರಾ ಮೇಲ್ಡಂಡೆಗೆ ಅನುದಾನ ನೀಡುವ ನಿರೀಕ್ಷೆ
* ಮೇಕೆದಾಟು, ಕಳಸಾ, ಎತ್ತಿನಹೊಳೆ ಬಗ್ಗೆ ಪ್ರಸ್ತಾಪವಾಗುವ ಸಾಧ್ಯತೆ
* ಚೆನ್ನೈ ಬೆಂಗಳೂರು ಎಕ್ಸಪ್ರೆಸ್ ಹೈವೇ ಕಾಮಗಾರಿಯ ತ್ವರಿತ ಪ್ರಗತಿಗೆ ತಕ್ಕಷ್ಟು ಅನುದಾನ ನಿರೀಕ್ಷೆಗಳಿವೆ.
* ಸಿರಿಧಾನ್ಯಕ್ಕೆ ಪ್ರೋತ್ಸಾಹ ಅನುದಾನ
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications