ಹಿಂದಿನ ಪ್ರತಿಧ್ವನಿಗಳು: ಹೊಸ ಪ್ರಕ್ಷುಬ್ಧತೆಯಲ್ಲಿ ಕಿರುಕುಳ ನೆನಪಿಸಿಕೊಂಡ ಬಾಂಗ್ಲಾದೇಶಿ ಹಿಂದೂಗಳು

ಭಾರತದ ಸ್ವಾತಂತ್ರ್ಯದ ಬಳಿಕ ಬಾಂಗ್ಲಾದೇಶದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯ ಅಲೆಗಳು ಪಕ್ಕದ ರಾಜ್ಯವಾದ ಪಶ್ಚಿಮ ಬಂಗಾಳದ ಮೇಲೆ ಪ್ರಭಾವ ಬೀರುತ್ತಿವೆ. ವಿಭಜನೆಯ ಪ್ರಕ್ಷುಬ್ಧತೆ ಪರಿಸ್ಥಿತಿ ಬಾಂಗ್ಲಾದೇಶದಲ್ಲಿ ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿತು. ಭಾರತದ ಪಶ್ಚಿಮ ಬಂಗಾಳ, ತ್ರಿಪುರಾ, ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ನಿರಾಶ್ರಿತರು ಆಶ್ರಯ ಪಡೆದರು.

ಹಲವು ಜೀವನವನ್ನು ಪುನರ್ ಕಟ್ಟಿಕೊಳ್ಳುವ ಭರವಸೆಯೊಂದಿಗೆ ಬಂದರು. ಆದರೆ ಶಾಶ್ವತವಾಗಿ 'ನಿರಾಶ್ರಿತರು' ಎಂಬ ಹಣೆಪಟ್ಟಿ ಕಟ್ಟಿಕೊಂಡರು. ದಶಕಗಳ ಬಳಿಕ ಬಾಂಗ್ಲಾದೇಶ ಹೊಸ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಅಲ್ಲಿನ ಅಲ್ಪಸಂಖ್ಯಾತರು ಅಸುರಕ್ಷಿತ ಭಾವನೆಯಲ್ಲಿದ್ದಾರೆ. ಬೆಂಗಾಳಿ ಹಿಂದೂಗಳು ಕಳವಳವನ್ನು ವ್ಯಕ್ತಪಡಿಸುತ್ತಿದ್ದು, ಅಲ್ಪಸಂಖ್ಯಾತರ ರಕ್ಷಣೆ, ಹಕ್ಕುಗಳಿಗಾಗಿ ಪಕ್ಕದ ದೇಶವನ್ನು ಒತ್ತಾಯಿಸುತ್ತಿದ್ದಾರೆ.

ಹಿಂದಿನ ಕಹಿ ದಿನಗಳ ನೆನಪುಗಳು

ಒನ್ ಇಂಡಿಯಾ ಹಲವಾರು ಬೆಂಗಾಳಿ ಹಿಂದೂಗಳ ಜೊತೆ ಮಾತುಕತೆ ನಡೆಸಿದೆ. ಇವರು ಹಿಂದಿನ ದೌರ್ಜನ್ಯಗಳಿಗೆ ಸಾಕ್ಷಿಯಾದವರು. ಅವರ ಮಾತುಗಳಲ್ಲಿನ ಕಠೋರತೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಎದುರಿಸಿದ ಸವಾಲುಗಳ ಚಿತ್ರಣವನ್ನು ನೀಡಿದೆ.

ಸುಶೀಲ್ ಗಂಗೋಪಾಧ್ಯಾಯ 1971ರಲ್ಲಿ ಭಾರತಕ್ಕೆ ಓಡಿಬಂದರು. ಬಾಂಗ್ಲಾದೇಶದ ನೊಖಾಲಿ ಜಿಲ್ಲೆಯಲ್ಲಿ ಅವರ ಸಮೃದ್ಧ ಜೀವನದ ದಿನಗಳನ್ನು ಮೆಲುಕು ಹಾಕಿದರು. "ನಮ್ಮದು ದೊಡ್ಡ ಕುಟುಂಬ ಮತ್ತು ವಿಶಾಲವಾದ ಭೂಮಿ ಇತ್ತು. ಆದರೆ ವಿಮೋಚನಾ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಸೇನೆ ಮತ್ತು ರಜಾಕರು ದಾಳಿ ಮಾಡಿದರು. ಮನೆಯನ್ನು ಸುಟ್ಟರು ಮತ್ತು ಹಲವರನ್ನು ಕ್ರೂರವಾಗಿ ಹತ್ಯೆ ಮಾಡಿದರು" ಎಂದು ಹೇಳುವಾಗ ಕಣ್ಣಂಚಲ್ಲಿ ನೀರು ತುಂಬಿತ್ತು. ಸ್ವಾತಂತ್ರ್ಯದ ನಂತರ ಬಹುಸಂಖ್ಯಾತರ ನಿರಂತರ ಹಗೆತನದ ಕಾರಣ ಬಲವಂತವಾಗಿ ಭಾರತದಲ್ಲಿ ಶಾಶ್ವತ ನಿರಾಶ್ರಿತರಾಗುವಂತೆ ಆಯಿತು.

Echoes Of The Past Bangladeshi Hindus Recall Persecution Amid Renewed Turmoil
Photo Credit: Sushil Gangopadhyay

ಸದ್ಯದ ಪರಿಸ್ಥಿತಿಯನ್ನು ಹೇಳುತ್ತಾ ಸುಶೀಲ್ ಬಹಳ ವೇದನೆ ವ್ಯಕ್ತಪಡಿಸಿದರು. "ಸದ್ಯದ ಬಾಂಗ್ಲಾದೇಶದ ಪರಿಸ್ಥಿತಿ ಹೃದಯ ವಿದ್ರಾವಕವಾಗಿದೆ. ಗರ್ಭಿಣಿ ಮಹಿಳೆಯ ಹೊಟ್ಟೆಗೆ ಒದೆಯಲಾಗುತ್ತಿರುವ ವಿಡಿಯೋವನ್ನು ನೋಡಿದೆ. ಇಂತಹ ಕ್ರೂರತ್ವ ಉಹೆಗೂ ನಿಲುಕದ್ದು, ಭಾರತೀಯನಾಗಿ ನಾನು ನಮ್ಮ ಪಕ್ಕದ ಸಹೋದರರನ್ನು ರಕ್ಷಣೆ ಮಾಡುವಂತೆ ಬೇಡಿಕೆ ಇಡುವೆ. ಹಿಂದೂಗಳನ್ನು ಅಲ್ಲಿ ಇದೇ ರೀತಿ ನಡೆಸಿಕೊಂಡರೆ ನಾವು ಕ್ವಿಟ್ ಇಂಡಿಯಾ ಮಾದರಿ ಚಳವಳಿಯನ್ನು ಬಾಂಗ್ಲಾದಲ್ಲಿ ನೋಡಬೇಕಾಗಬಹುದು" ಎಂದರು.

ಅವರ ನೆನಪಿನಲ್ಲಿ ಎದ್ದು ಕಾಣುವ ಹಲವು ಅಂಶಗಳಿವೆ, "ನನಗೆ 10 ರಿಂದ 12 ವರ್ಷ. ರಜಾಕರು ನಮ್ಮನ್ನು ಹಿಂಸಿಸಿದರು. ನಮ್ಮ ತಾಯಂದಿರ ಹಕ್ಕುಗಳನ್ನು ಉಲ್ಲಂಘಿಸಿ ಪುರುಷರ ದೇಹಗಳನ್ನು ನದಿಗೆ ಎಸೆದರು. ಹಲವು ಮಹಿಳೆಯರ ಮೇಲೆ ಪಾಕಿಸ್ತಾನ ಸೇನೆ ದೌರ್ಜನ್ಯ ನಡೆಸಿತು. ಹಲವಾರು ವರ್ಷಗಳ ಬಳಿಕ ಅವರ ಚರ್ಮದ ಮೇಲೆ ಅದರ ಕಲೆ ಇದೆ".

ಮತ್ತೊಂದು ಕಠೋರವಾದ ಕಥೆಯನ್ನು ಬಿಚ್ಚಿಟ್ಟರು ಬಂಗಾನ್‌ನ ಅಮೀನಾ ದಾಸ್, ಬಾಂಗ್ಲಾದೇಶದಿಂದ ಪಲಾಯನ ಮಾಡುವಾಗ ಅವರು ಗರ್ಭಿಣಿಯಾಗಿದ್ದರು. ಆ ದಿನದ ನೆನಪುಗಳನ್ನು ಮಾಡಿಕೊಂಡ ಅವರು, "ನನ್ನ ಮಗ ಚಿಕ್ಕವನಾಗಿದ್ದ, ನನ್ನ ಮಗಳು ಹೊಟ್ಟೆಯಲ್ಲಿದ್ದಳು, ದೇಶವು ಸಂಘರ್ಷದಲ್ಲಿ ಮುಳುಗಿತ್ತು, ಮನೆಗಳನ್ನು ಸುಟ್ಟು ಹಾಕಲಾಯಿತು. ಭಯದಿಂದ ನನ್ನ ಮಾವ ನಮ್ಮನ್ನು ಭಾರತಕ್ಕೆ ಕಳುಹಿಸಿದರು. ಅಲ್ಲಿ ನಡೆದ ಹಿಂಸಾಚಾರ ಅದರಲ್ಲೂ ಪುರುಷರ ಮೇಲೆ ಆದ ದೌರ್ಜನ್ಯ ಅಳಿಸಲಾಗದಂತೆ ಅಚ್ಚೊತ್ತಿದೆ. "ನಾನು ಬಾಂಗ್ಲಾದೇಶಕ್ಕೆ ಕೆಲವು ಬಾರಿ ಭೇಟಿ ನೀಡಿದ್ದೇನೆ, ಆದರೆ ಅಲ್ಲಿ ಮತ್ತೆ ವಾಸಿಸುವ ಆಲೋಚನೆಯನ್ನು ನಾನು ಮಾಡಲಾರೆ"

Echoes Of The Past Bangladeshi Hindus Recall Persecution Amid Renewed Turmoil
Photo Credit: Anima Das

ಗಡಿಯಲ್ಲಿರುವ ಹಲವಾರು ವ್ಯಕ್ತಿಗಳು ಇದೇ ತರವಾದ ಭಾವನೆಗಳನ್ನು ಹೊಂದಿದ್ದಾರೆ. ಹಲವಾರು ಜನರು ಧಾರ್ಮಿಕ ಕಿರುಕುಳ ಎದುರಿಸಿದರು. ತಮ್ಮ ಪೂರ್ವಜರ ಮನೆ ಮತ್ತು ನೆನಪುಗಳನ್ನು ಬಿಟ್ಟು ಬಂದರು. ಸ್ಥಳಾಂತರದ ಸಮಯದಲ್ಲಿ ತೋಡಿಕೊಳ್ಳಲಾಗದ ನೋವನ್ನು ಎದುರಿಸಿದರು. ಭಾರತದಲ್ಲಿ ಸುರಕ್ಷತೆ ಇದೆ, ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ಸಲಹೆ ಎಂದರೆ ಬಂದು ಇಲ್ಲಿ ನಿರಾಶ್ರಿತರಾಗಿ ಆಶ್ರಯ ಪಡೆಯಿರಿ.

ಒನ್ ಇಂಡಿಯಾ ಜೊತೆ ಮಾತನಾಡಿದ ಹರ್ದನ್‌ ಬಿಸ್ವಾಸ್ ಮಾತನಾಡಿದರು ಅವರ ತಂದೆ ಬಾಂಗ್ಲಾದೇಶದಿಂದ ವಲಸೆ ಬಂದವರು. ನಿರಂತರವಾಗಿ ನಡೆಯುವ ಕಿರುಕುಳ ಹಿಂದೂ ಸಮುದಾಯವನ್ನು ಆತಂಕದಲ್ಲಿ ಇರುವಂತೆ ಮಾಡಿದೆ. ಅಲ್ಲದೇ ತವರು ನೆಲವನ್ನು ಬಿಟ್ಟು ಭಾರತಕ್ಕೆ ಬಂದು ನಿರಾಶ್ರಿತರಾಗಿ ಇರುವಂತೆ ಒತ್ತಾಯಿಸುತ್ತಿದೆ. ಹಿಂದೂಗಳು ಐತಿಹಾಸಿಕವಾಗಿ ಸ್ವಾತಂತ್ರ್ಯದಿಂದ ವಿಮೋಚನಾ ಯುದ್ಧದ ತನಕ ಬಾಂಗ್ಲಾದೇಶದಲ್ಲಿ ಸವಾಲುಗಳನ್ನು ಎದುರಿಸಿದ್ದಾರೆ. ಹಲವರು ಅಲ್ಲೇ ಇರುವ ಆಯ್ಕೆ ಬಯಸಿದರು, ಆದರೆ ಪದೇ ಪದೇ ಅಪಾಯ ಎದುರಿಸುತ್ತಿದ್ದಾರೆ".

1956ರಲ್ಲಿ ಭಾರತಕ್ಕೆ ಬಂದ ಪರೇಶ್ ದಾಸ್ ಮನಸ್ಸು ಘಾಸಿಗೊಳಿಸುವ ಅನುಭವ ಹಂಚಿಕೊಂಡರು. "ನನ್ನ ಕಣ್ಣಮುಂದೆಯೇ ನನ್ನ ಅಜ್ಜನನ್ನು ಹತ್ಯೆ ಮಾಡಲಾಯಿತು. ನಾನು ಆತಂಕದಲ್ಲಿ ನಮ್ಮ ಭೂಮಿಯನ್ನು ಬಿಟ್ಟೆವು, ನನ್ನ ಪಕ್ಕದಲ್ಲಿದ್ದ ಸಂಬಂಧಿಕನ ಮೇಲೆ ದೌರ್ಜನ್ಯ ಮಾಡಿದರು. ನಾವು ಈಗ ಭಾರತದಲ್ಲಿ ಶಾಂತಿಯಿಂದ ಬಾಳುತ್ತಿದ್ದೇವೆ. ನೊಖಾಲಿಗೆ ವಾಪಸ್ ಆದ ಸಂಬಂಧಿಗಳು ಈಗಲೂ ಬೆದರಿಕೆ ಎದುರಿಸುತ್ತಿದ್ದಾರೆ. ತಿಂಗಳುಗಳ ಹಿಂದೆ ಜೀವ ಅಥವ ಆಸ್ತಿ ಎಂಬ ಎರಡು ಆಯ್ಕೆ ನೀಡಲಾಯಿತು. ಭೂ ವ್ಯಾಜ್ಯದಲ್ಲಿ ನನ್ನ ಚಿಕ್ಕಪ್ಪನನ್ನು ಹತ್ಯೆ ಮಾಡಲಾಯಿತು".

Echoes Of The Past Bangladeshi Hindus Recall Persecution Amid Renewed Turmoil
Photo Credit: Paresh Das

ಮಧ್ಯಸ್ಥಿಕೆಗಾಗಿ ಮನವಿ

ನ್ಯೂ ಟೌನ್ ಸಮೀಪದ ನಿವಾಸಿ ರಶೋಮಿ ಬಿಸ್ವಾಸ್ 1971ಕ್ಕೂ ಮೊದಲು ಆದ ಕಿರುಕುಳ ನೆನಪಿಸಿಕೊಂಡರು, "ಸ್ವಾತಂತ್ರ್ಯ ನಂತರವೂ ಹಿಂದೂವಾಗಿ ಇರುವುದು ಅಪರಾಧ. ಪಾಕಿಸ್ತಾನ ಸೇನೆ ಮತ್ತು ಜಮಾತ್ ಪಡೆಗಳ ಗುರಿಗೆ ಬಿಡುವು ಇಲ್ಲ, ಹಿಂದೂಗಳ ಭೂಮಿಯ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ.

Echoes Of The Past Bangladeshi Hindus Recall Persecution Amid Renewed Turmoil
Photo Credit: Rashomoy Biswas

ನಮ್ಮ ಕುಟುಂಬ ರಾತ್ರಿ ಆಹಾರವಿಲ್ಲದೇ ಬಚ್ಚಿಟ್ಟುಕೊಂಡಿತ್ತು. ನಾವು ಈಗ ಭಾರತದಲ್ಲಿ ಶಾಂತಿಯಿಂದ ಬದುಕುತ್ತಿದ್ದೇವೆ. ನಮ್ಮ ಹಲವಾರು ಸಂಬಂಧಿಕರು ಬಾಂಗ್ಲಾದೇಶದಲ್ಲಿಯೇ ಇದ್ದಾರೆ. ನಾವು ಭಾರತವನ್ನು ಮಧ್ಯಸ್ಥಿಕೆಗಾಗಿ ಮನವಿ ಮಾಡುತ್ತೇವೆ. ಹಿಂದೂಗಳು ಭಯವಿಲ್ಲದೇ ಬದುಕುವುದನ್ನು ಖಾತ್ರಿ ಪಡಿಸಿ ಎಂದು".

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+