ಚುನಾವಣಾ ಆಯೋಗಕ್ಕೆ ಲಂಚ: ಟಿಟಿವಿ ದಿನಕರನ್ ಗೆ ಜಾಮೀನು
ನವದೆಹಲಿ, ಜೂನ್ 1: ಎಐಎಡಿಎಂಕೆಯ ಎರಡೆಲೆ ಚಿನ್ಹೆ ಪಡೆದುಕೊಳ್ಳಲು ಚುನಾವಣಾ ಆಯೋಗ್ಕಕೆ ಲಂಚ ನೀಡಲು ಹೋಗಿದ್ದ ಶಶಿಕಲಾ ನಟರಾಜನ್ ಆಪ್ತ ಟಿಟಿವಿ ದಿನಕರನ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿದೆ.
ದೆಹಲಿಯ ತಿಸ್ ಹಜಾರಿ ಕೋರ್ಟ್ ದಿನಕರನ್ ಗೆ ಜಾಮೀನು ಮಂಜೂರು ಮಾಡಿದೆ. ದಿನಕರನ್ ಜತೆಗೆ ಅವರ ಆಪ್ತ ಮಲ್ಲಿಕಾರ್ಜುನ್ ಗೂ ಜಾಮೀನು ನೀಡಲಾಗಿದೆ. 5 ಲಕ್ಷ ಬಾಂಡ್ ಹಾಗೂ ಪಾಸ್ಪೋರ್ಟ್ ಒಪ್ಪಿಸುವಂತೆ ಷರತ್ತು ವಿಧಿಸಿ ಕೋರ್ಟ್ ಜಾಮೀನು ನೀಡಿದೆ. [ಎಐಎಡಿಎಂಕೆ ಚಿಹ್ನೆಗಾಗಿ ಲಂಚ, ಪರಮೇಶ್ವರ್ ಆಪ್ತ ಪ್ರಕಾಶ್ ಗೆ ಸಮನ್ಸ್]

ಬುಧವಾರ ಜಾಮೀನಿಗಾಗಿ ಟಿಟಿವಿ ದಿನಕರನ್ ಕೋರ್ಟ್ ಮೊರೆ ಹೋಗಿದ್ದರು. ಆದರೆ ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಇಂದಿಗೆ ಮುಂದೂಡಿತ್ತು. ಇಂದು ಅವರಿಗೆ ಜಾಮೀನು ನೀಡಲಾಗಿದೆ.
ಟಿಟಿವಿ ದಿನಕರನ್, ಮಲ್ಲಿಕಾರ್ಜುನ್ ಹಾಗೂ ಮಧ್ಯವರ್ತಿ ಸುಕೇಶ್ ಚಂದ್ರಶೇಖರ್ ರನ್ನು ಚುನಾವನಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ಯತ್ನಿಸಿದ ಆರೋಪದಲ್ಲಿ ಈ ಹಿಂದೆ ಬಂಧಿಸಲಾಗಿತ್ತು.












Click it and Unblock the Notifications