Get Updates
Get notified of breaking news, exclusive insights, and must-see stories!

ಇಂಡೋನೇಷ್ಯಾ ಭೂಕಂಪದಲ್ಲಿ 162 ಸಾವು, ನೂರಾರು ಮಂದಿಗೆ ಗಾಯ

ಸಿಯಾಂಜೂರ್, ಇಂಡೋನೇಷ್ಯಾ ನವೆಂಬರ್ 21: ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದ್ದು 162 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅವಶೇಷಗಳಡಿಯಲ್ಲಿ ಸಿಲುಕಿರುವವರ ಹುಡುಕಾಟ ಕಾರ್ಯ ಮುಂದುವರೆದಿದೆ.

ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆಯ ಭೂಕಂಪ ಪಶ್ಚಿಮ ಜಾವಾದ ಪರ್ವತದ ಸಿಯಾಂಜೂರ್ ಪಟ್ಟಣದ ಸಮೀಪ ಸಂಭವಿಸಿದೆ. ಈ ಪ್ರದೇಶದಲ್ಲಿ 2.5 ದಶಲಕ್ಷಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಭೂಕಂಪದ ಬಳಿಕ, ಪಶ್ಚಿಮ ಜಾವಾ ಗವರ್ನರ್ ರಿದ್ವಾನ್ ಕಾಮಿಲ್ ಇನ್ಸ್ಟಾಗ್ರಾಮ್‌ನಲ್ಲಿ 162 ಜನರು ಸಾವನ್ನಪ್ಪಿದ್ದಾರೆ ಮತ್ತು 326 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಭೂಕಂಪದಿಂದ ಹಲವು ಕಟ್ಟಡಗಳು ಕುಸಿದಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ರಿದ್ವಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇಂಡೋನೇಷ್ಯಾ "ಪೆಸಿಫಿಕ್ ರಿಂಗ್ ಆಫ್ ಫೈರ್" ಎಂದು ಕರೆಯಲ್ಪಡುತ್ತದೆ. ಇದು ಹೆಚ್ಚು ಭೂಕಂಪನ ಸಕ್ರಿಯ ವಲಯವಾಗಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಭೂಕಂಪಗಳು ಮತ್ತು ಜ್ವಾಲಾಮುಖಿ ಸಂಭವಿಸುತ್ತವೆ. 2,200 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಮತ್ತು 5,300 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ, ಕೆಲವು ಪ್ರದೇಶಗಳಲ್ಲಿ ಭೂಕುಸಿತಗಳು ಸ್ಥಳಾಂತರಿಸುವಿಕೆಯನ್ನು ನಿರ್ಬಂಧಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Earthquake on Java island: 162 dead, hundreds injured

ನೂರಾರು ಸಂತ್ರಸ್ತರು ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ತುರ್ತು ಟೆಂಟ್ ಅಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಯಾಂಜೂರ್‌ನ ನಿವಾಸಿಗಳು ತೆರೆದ ಮೈದಾನಗಳಲ್ಲಿ ಚಾಪೆಗಳ ಮೇಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೂ ಆಂಬ್ಯುಲೆನ್ಸ್ ಆಸ್ಪತ್ರೆಗೆ ಆಗಮಿಸುತ್ತಿದ್ದು, ಹೆಚ್ಚಿನ ಜನರನ್ನು ಆಸ್ಪತ್ರೆಗೆ ಕರೆತರಲಾಗುತ್ತಿದೆ.

ಹವಾಮಾನ ಮತ್ತು ಜಿಯೋಫಿಸಿಕ್ಸ್ ಏಜೆನ್ಸಿ (BMKG) ಪ್ರಕಾರ, 10 ಕಿಮೀ ಆಳದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಹಾನಿಯ ಸಂಪೂರ್ಣ ಪ್ರಮಾಣವನ್ನು ನಿರ್ಧರಿಸಲು ಅಧಿಕಾರಿಗಳು ಇನ್ನೂ ಕೆಲಸ ಮಾಡುತ್ತಿದ್ದಾರೆ. ಸಿಯಾಂಜೂರ್ ಮುಖ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಣಿ ಅವರು ಮೆಟ್ರೊ ಟಿವಿಗೆ ಮಾತನಾಡಿ ಭೂಕಂಪದ ತೀವ್ರತೆಯ ಬಗ್ಗೆ ಹಂಚಿಕೊಂಡಿದ್ದಾರೆ. "ನೋಡ ನೋಡುತ್ತಿದ್ದಂತೆ ಮನೆಗಳ ಗೋಡೆಗಳು ನೆಲಸಮವಾಗಿದೆ. ನನ್ನ ತಾಯಿ ಮತ್ತು ತಂದೆ ಎಲ್ಲಿದ್ದಾರೆಂದು ನನಗೆ ತಿಳಿದಿಲ್ಲ" ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

Earthquake on Java island: 162 dead, hundreds injured

"ಮಕ್ಕಳು ಕೆಳಮಹಡಿಯಲ್ಲಿದ್ದರು. ನಾನು ಮೇಲಕ್ಕೆ ಬಟ್ಟೆ ಒಗೆಯುತ್ತಿದ್ದೆ. ನನ್ನ ಮಕ್ಕಳಲ್ಲಿ ಒಬ್ಬರು ಇನ್ನೂ ಕಾಣೆಯಾಗಿದ್ದಾರೆ" ಎಂದು 48 ವರ್ಷದ ಕುಕು ಅವರು ಹೇಳಿದ್ದಾರೆ.

2004 ರಲ್ಲಿ ಉತ್ತರ ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ 9.1 ತೀವ್ರತೆಯ ಭೂಕಂಪ 14 ದೇಶಗಳಿಗೆ ಅಪ್ಪಳಿಸಿದ ಸುನಾಮಿಯನ್ನು ಪ್ರಚೋದಿಸಿತು. ಹಿಂದೂ ಮಹಾಸಾಗರದ ಕರಾವಳಿಯಲ್ಲಿ 226,000 ಜನರನ್ನು ಕೊಂದಿತು, ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಇಂಡೋನೇಷ್ಯಾದಲ್ಲಿ ಸಾವನ್ನಪ್ಪಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+