ಉಪ ಸಭಾಪತಿ ಚುನಾವಣೆ: ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲ ಎಷ್ಟಿದೆ?
ರಾಜ್ಯಸಭೆ ಉಪಾಧ್ಯಕ್ಷರ ಆಯ್ಕೆ ಹೊಣೆಯನ್ನು ಎನ್ಡಿಎ ಹೊತ್ತುಕೊಂಡಿದೆ. ರಾಜ್ಯಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಈಗ ಸಂಖ್ಯಾಬಲದ ಪ್ರಭಾವದಿಂದ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರೂ, ಒಂದೆರಡು ಸಣ್ಣಪುಟ್ಟ ಪಕ್ಷಗಳ ಬೆಂಬಲ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಿಜೆಡಿ ಅಥವಾ ಎಐಎಡಿಎಂಕೆ ಬೆಂಬಲದ ನಿರೀಕ್ಷೆಯಿದೆ.
ಡಿಸೆಂಬರ್ 17, 1969 ರಿಂದ ಏಪ್ರಿಲ್ 1, 1972ರ ಅವಧಿಯಲ್ಲಿ ಬಿಡಿ ಖೋಬ್ರಾಗಡೆ(ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ) ಅವರು ಉಪಾಧ್ಯಕ್ಷರಾಗಿದ್ದು ಬಿಟ್ಟರೆ, ಕಾಂಗ್ರೆಸ್ ಅಭ್ಯರ್ಥಿಗೆ ಉಪಾಧ್ಯಕ್ಷ ಸ್ಥಾನ ಲಭಿಸುತ್ತಾ ಬಂದಿದೆ.
ಗೆಲ್ಲಲು ಎಷ್ಟು ಮತ ಬೇಕು?: 245 ಸಂಖ್ಯಾಬಲದ ಸದನದಲ್ಲಿ ಅಭ್ಯರ್ಥಿಯು ಗೆಲ್ಲಲು 122 ಮತಗಳು ಬೇಕಾಗುತ್ತದೆ. ಬಿಹಾರದ ಒಂದು ಸ್ಥಾನ ಖಾಲಿ ಇದೆ.

ಬಿಜೆಪಿ 71 ಸಂಖ್ಯಾಬಲ ಹೊಂದಿದ್ದು ಹಾಗೂ ಮಿತ್ರಪಕ್ಷಗಳ ನೆರವಿನಿಂದ 115 ಸಂಖ್ಯೆ ತಲುಪಬಹುದಾಗಿದೆ. ಹೀಗಾಗಿ, ಎಐಎಡಿಎಂಕೆಯ 13 ಸದಸ್ಯರ ಬೆಂಬಲದ ನಿರೀಕ್ಷೆಯಿದೆ.
ಇದಲ್ಲದೆ, ಬಿಜೆಡಿಯ 9 ಸದಸ್ಯರ ನೆರವು ಸಿಕ್ಕರೆ, ಬಿಜೆಪಿ ಅಭ್ಯರ್ಥಿಗೆ ಜಯ ಲಭಿಸಲಿದೆ. ತೆಲುಗು ದೇಶಂ ಪಾರ್ಟಿ 6 ಜನ ಸದಸ್ಯರನ್ನು ಹೊಂದಿದ್ದು, ಈಗ ಎನ್ಡಿಎ ಮೈತ್ರಿಕೂಟದಿಂದ ದೂರಾಗಿದ್ದು, ವಿಪಕ್ಷಗಳು ಟಿಡಿಪಿ ಬೆಂಬಲದ ನಿರೀಕ್ಷೆಯಲ್ಲಿದ್ದು, 117 ಮತಗಳನ್ನು ಹೊಂದಲಿದೆ.
ಯುಪಿಎ ಪರ 112 ಮತಗಳಿವೆ, ಎನ್ಡಿಎ 90 +42(ಇನ್ನೂ ನಿರ್ಧಾರವಾಗದ ಸದಸ್ಯರು) ಹೊಂದಿದೆ.
| Rajya Sabha Strength | 245 |
| Vacant Seats | 01 |
| Magic Number | 122 |
| NDA | 90 |
| BJP | 73 |
| BPF | 01 |
| JD(U) | 06 |
| Nominated | 04 |
| NPF | 01 |
| RPI (A) | 01 |
| SAD | 03 |
| SDF | 01 |
| Joint opposition | 112 |
| Aam Aadmi Party | 03 |
| Trinamool Congress | 13 |
| Bahujan Samaj Party | 04 |
| Communist Party of India | 02 |
| Communist Party of India (M) | 05 |
| Dravida Munnetra Kazhagam | 04 |
| Congress | 50 |
| Indian Union Muslim League | 01 |
| JD(S) | 01 |
| Kerala Congress (M) | 01 |
| Nationalist Congress Party | 04 |
| Rashtriya Janata Dal | 05 |
| Samajwadi Party | 13 |
| Telegu Desam Party | 06 |
| Undecided | 42 |
| AIADMK | 13 |
| BJD | 09 |
| Independents | 06 |
| TRS | 06 |
| Shiv Sena | 03 |
| YSRCP | 02 |
| PDP | 02 |
| INLD | 01 |
| Vacant | 01 |












Click it and Unblock the Notifications