ದುಬೈ-ಕೊಚ್ಚಿ ಸ್ಪೈಸ್‌ಜೆಟ್ ವಿಮಾನ ಲ್ಯಾಂಡಿಂಗ್ ವೇಳೆ ಟೈರ್ ಸ್ಫೋಟ, ತಪ್ಪಿದ ಅವಘಡ
ಕೊಚ್ಚಿ, ಜುಲೈ. 04: ಮಂಗಳವಾರ ಕೊಚ್ಚಿಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನ ಲ್ಯಾಂಡಿಂಗ್ ವೇಳೆ ಟೈರ್ ಒಡೆದಿದೆ. ದುಬೈನಿಂದ ಬರುತ್ತಿದ್ದ SG-17 ವಿಮಾನವು ಕೊಚ್ಚಿ ವಿಮಾನ ನಿಲ್ದಾಣವನ್ನು ತಲುಪುವಾಗ ಘಟನೆ ನಡೆದಿದೆ. ಆದರೆ, ವಿಮಾನ ಸುರಕ್ಷಿತವಾಗಿ ನಿಲ್ದಾಣ ತಲುಪಿದೆ. ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ ಎಂದು ವರದಿಯಾಗಿದೆ.
ಏರ್‌ಲೈನ್ ವಕ್ತಾರರ ಪ್ರಕಾರ, ಟೈರ್ ಸ್ಫೋಟದ ಹೊರತಾಗಿಯೂ, ವಿಮಾನವು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದೆ. ಕಣ್ಗಾವಲು ಪ್ರಕ್ರಿಯೆಯ ನಂತರ ಎರಡನೇ ಟೈರ್ ಸ್ಫೋಟಗೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

"ಜುಲೈ 4 ರಂದು, ಸ್ಪೈಸ್‌ಜೆಟ್ ಬೋಯಿಂಗ್ 737 ಕಾರ್ಯಾಚರಣೆಯ ವಿಮಾನ SG-17 ದುಬೈನಿಂದ ಕೊಚ್ಚಿನ್‌ಗೆ ಬರುತ್ತಿತ್ತು. ವಿಮಾನ ಹಾರಾಟದ ನಂತರ ಎರಡನೇ ನಂಬರ್ ಟಯರ್ ಸ್ಫೋಟಗೊಂಡಿರುವುದು ಕಂಡುಬಂದಿದೆ. ಎಲ್ಲಾ ಸಿಸ್ಟಮ್ ಪ್ಯಾರಾಮೀಟರ್‌ಗಳು ಹಾರಾಟದ ಸಮಯದಲ್ಲಿ ಸಾಮಾನ್ಯವಾಗಿದೆ. ಹಾರಾಟ ಮತ್ತು ಲ್ಯಾಂಡಿಂಗ್ ಸುಗಮವಾಗಿತ್ತು" ಎಂದು ವಕ್ತಾರರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಗಮನಾರ್ಹವಾಗಿ, ಸ್ಪೈಸ್ ಜೆಟ್ ದೇಶದಲ್ಲಿ ಅತಿ ಹೆಚ್ಚು ವಿಮಾನಯಾನ ಸಮಸ್ಯೆಗಳನ್ನು ಹೊಂದಿದೆ ಎಂದು ಕಂಡುಬಂದಿದೆ. ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ, ಮೇ ತಿಂಗಳಲ್ಲಿ ದೇಶದ ನಾಲ್ಕು ದೊಡ್ಡ ವಿಮಾನ ನಿಲ್ದಾಣಗಳಾದ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಸಮಯಕ್ಕೆ ಸರಿಯಾಗಿ ನಿರ್ಗಮಿಸಿದ್ದು ಕೇವಲ 61% ವಿಮಾನಗಳು ಎಂದು DGCA ದಾಖಲಿಸಿದೆ. ಹೊಸದಾಗಿ ಆರಂಭಿಸಿರುವ ಆಕಾಶ ಏರ್ ಸಮಯಪಾಲನೆಯಲ್ಲಿ ಅಗ್ರಸ್ಥಾನಕ್ಕೇರಿದೆ.
On July 4, SpiceJet Boeing 737 operated flight SG-17, Dubai (DXB) - Cochin (COK). During post-flight walk around NO 2 tyre was found burst. All system parameters were normal during and post-flight and landing was smooth: SpiceJet Spokesperson pic.twitter.com/TjBhDFrv3b
— ANI (@ANI) July 4, 2023
ವಾಯುಯಾನ ಮಾರುಕಟ್ಟೆಯಲ್ಲಿ ಸಾಂಕ್ರಾಮಿಕ ನಂತರದ ಹೆಚ್ಚುತ್ತಿರುವ ಬೇಡಿಕೆಯು ವಿಮಾನ ಹಾರಾಟದ ಅಡೆತಡೆಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹೆಚ್ಚುವರಿಯಾಗಿ, ಕಳೆದ ನಾಲ್ಕು ವರ್ಷಗಳಲ್ಲಿ ಸ್ಪೈಸ್ ಜೆಟ್ ಎದುರಿಸಿದ ಆರ್ಥಿಕ ಬಿಕ್ಕಟ್ಟು ಸಮಸ್ಯೆಯನ್ನು ಹೆಚ್ಚು ಮಾಡಿದೆ ಎಂದು ತಿಳಿದು ಬಂದಿದೆ.












Click it and Unblock the Notifications