ಪ್ಲಾಸ್ಟಿಕ್ ಬ್ಯಾಗಿನಲ್ಲಿ 14 ಶಿಶುಗಳ ಅಸ್ಥಿಪಂಜರ ಸಿಕ್ಕಿದ್ದು ಸುಳ್ಳು!
ಕೋಲ್ಕತ್ತಾ, ಸೆಪ್ಟೆಂಬರ್ 03: ಕೋಲ್ಕತ್ತಾದಲ್ಲಿ ಪ್ಲಾಸ್ಟಿಕ್ ಬ್ಯಾಗೊಂದರಲ್ಲಿ 14 ಶಿಶುಗಳ ಶವ ಸಿಕ್ಕಿದೆ ಎಂಬ ವರದಿಯನ್ನು ಕೋಲ್ಕತ್ತಾ ಪೊಲೀಸರು ತಳ್ಳಿಹಾಕಿದ್ದಾರೆ.
ಕೋಲ್ಕತ್ತದ ಹರಿದೇವಪುರ ಎಂಬಲ್ಲಿ ಭಾನುವಾರ ಪ್ಲಾಸ್ಟಿಕ್ ಬ್ಯಾಗೊಂದರಲ್ಲಿ ಕೆಲವು ವಿಲಕ್ಷಣ ವಸ್ತುಗಳು ಕಂಡುಬಂದಿದ್ದವು. ಇವನ್ನು ಶಿಶುಗಳ ಅಸ್ಥಿಪಂಜರ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿದ್ದವು.
ಆದರೆ ಇವುಗಳ ಕುರಿತು ತನಿಖೆ ನಡೆಸಿದ ಪೊಲೀಸರು, ಇದು ಅಸ್ತಿಪಂಜರವಲ್ಲ, ಬದಲಾಗಿ ಒಣ ಮಂಜುಗಡ್ಡೆ ಎಂದು ತಿಳಿಸಿದ್ದಾರೆ.

'ಈ ಪ್ಲಾಸ್ಟಿಕ್ ಪೊಟ್ಟಣದಲ್ಲಿ ಮನುಷ್ಯನ ದೇಹದ ಯಾವುದೇ ಅಂಗಗಳು ಅಥವಾ ಸ್ಥಿಪಂಜರ ಪತ್ತೆಯಾಗಿಲ್ಲ. ಇವು ಒಣ ಮಂಜುಗಡ್ಡೆಗಳು. ಆತಮಕ ಪಡುವ ಅಗತ್ಯವಿಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ.
ಕಸ ವಿಲೇವಾರಿ ಮಾಡುವ ಸಮಯದಲ್ಲಿ ಕೆಲವು ಕಾರ್ಮಿಕರಿಗೆ ಈ ಪೊಟ್ಟಣ ಸಿಕ್ಕಿತ್ತು. ಪೊಟ್ಟಣದಲ್ಲಿ ವಿಲಕ್ಷಣ ವಸ್ತು ಪತ್ತೆಯಾಗಿದ್ದರಿಂದ ಈ ಕುರಿತು ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.












Click it and Unblock the Notifications