ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಿಂದ ಕಾಶ್ಮೀರಕ್ಕೆ ಮಾದಕ ದ್ರವ್ಯ ಸಾಗಾಟ: 5 ಪೊಲೀಸರು ಸೇರಿ 17 ಮಂದಿ ಬಂಧನ

|
Google Oneindia Kannada News

ಶ್ರೀನಗರ, ಡಿ. 23: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಪಾಕಿಸ್ತಾನದಿಂದ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಐವರು ಪೊಲೀಸರು ಸೇರಿದಂತೆ 17 ಜನರನ್ನು ಬಂಧಿಸಲಾಗಿದೆ.

ಈ ದೊಡ್ಡ ಗ್ಯಾಂಗ್ ಗಡಿ ನಿಯಂತ್ರಣ ರೇಖೆಯ ಬಳಿಯಿಂದ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿತ್ತು. ಅಲ್ಲಿಂದ ಕಾಶ್ಮೀರದ ವಿವಿಧ ಭಾಗಗಳಲ್ಲಿ ಸರಬರಾಜು ಮಾಡುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಕುಪ್ವಾರ ಜಿಲ್ಲೆಯ ಕೆರಾನ್ ಸೆಕ್ಟರ್ ಮೂಲಕ ಪಾಕಿಸ್ತಾನದಿಂದ ಡ್ರಗ್ಸ್ ಬರುತ್ತಿತ್ತು.

ಪಂಜಾಬ್: ಮತ್ತೊಂದು ಪಾಕಿಸ್ತಾನದ ಡ್ರೋನ್ ಪತ್ತೆ, ಹೊಡೆದುರುಳಿಸಿದ ಸೇನೆಪಂಜಾಬ್: ಮತ್ತೊಂದು ಪಾಕಿಸ್ತಾನದ ಡ್ರೋನ್ ಪತ್ತೆ, ಹೊಡೆದುರುಳಿಸಿದ ಸೇನೆ

"ನಾವು ಮಾದಕ ದ್ರವ್ಯಗಳ ಸಾಗಾಟ ಮಾಡುತ್ತಿದ್ದ ಪ್ರಮುಖ ತಂಡವನ್ನು ಭೇದಿಸಿದ್ದೇವೆ. ಇದರಲ್ಲಿ 17 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಐವರು ಪೊಲೀಸರು, ಅಂಗಡಿಯವರು, ರಾಜಕೀಯ ಕಾರ್ಯಕರ್ತರು ಮತ್ತು ಗುತ್ತಿಗೆದಾರರು ಸೇರಿದ್ದಾರೆ" ಎಂದು ಕುಪ್ವಾರದ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಯುಗಲ್ ಕುಮಾರ್ ಮನ್ಹಾಸ್ ಹೇಳಿದ್ದಾರೆ.

 Drug Trafficking From Pakistan: 17 People, Including Five Cops Arrested

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿರುವ ಕೆರಾನ್‌ನ ನಿವಾಸಿ ಶಾಕಿರ್ ಅಲಿ ಖಾನ್, ಕೆರಾನ್‌ನಲ್ಲಿ ವಾಸಿಸುತ್ತಿರುವ ತನ್ನ ಮಗ ತಮ್ಹೀದ್ ಅಹ್ಮದ್‌ಗೆ ಮಾದಕ ದ್ರವ್ಯಗಳನ್ನು ಸರಬರಾಜು ಮಾಡುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.

ಪೋಲೀಸರ ಪ್ರಕಾರ, ಅವರು ಕುಪ್ವಾರ ಪಟ್ಟಣ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಕೆಲವು ಡ್ರಗ್ ಪ್ಯಾಡ್ಲರ್ಗಳ ಮೇಲೆ ಹಿಡಿತ ಹೊಂದಿದ್ದಾರೆ. ಆರೋಪಿಯಿಂದ ಈವರೆಗೆ ಎರಡು ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಕೃತ್ಯದಲ್ಲಿ ಈ ವರ್ಷ ಕಾಶ್ಮೀರದ ಗಡಿ ಜಿಲ್ಲೆಯಲ್ಲಿ 161 ಜನರ ವಿರುದ್ಧ 85 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 Drug Trafficking From Pakistan: 17 People, Including Five Cops Arrested

ಡ್ರಗ್ಸ್ ದಂಧೆ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಗಡಿ ನಿಯಂತ್ರಣ ರೇಖೆಯ ಬಳಿ ನಿಯೋಜಿಸಲಾದ ಭದ್ರತಾ ಪಡೆಗಳ ಅಧಿಕಾರಿಗಳು ಸಹ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ವರ್ಷ, ರಾಷ್ಟ್ರೀಯ ತನಿಖಾ ಸಂಸ್ಥೆಯು ಕುಪ್ವಾರಾ ಜಿಲ್ಲೆಯ ಹಂದ್ವಾರಾ ಪ್ರದೇಶದಲ್ಲಿ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಲಷ್ಕರ್-ಎ-ತೈಬಾದ ಉಗ್ರಗಾಮಿ ಗುಂಪಿಗೆ ಸಂಪರ್ಕ ಹೊಂದಿರುವ ಗಡಿ ಭದ್ರತಾ ಪಡೆ ಅಧಿಕಾರಿಯನ್ನು ಬಂಧಿಸಿತ್ತು.

English summary
Drug trafficking from Pakistan to Kashmir: Police arrested 17 people, including five police in the Kupwara district of Jammu and Kashmir. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X