Get Updates
Get notified of breaking news, exclusive insights, and must-see stories!

Driving licence: ಡ್ರೈವಿಂಗ್‌ ಲೈಸೆನ್ಸ್‌ ಅವಧಿ ಮುಗಿದಿದ್ರೆ ಅದು ಮಾನ್ಯವಲ್ಲ: ಸುಪ್ರೀಂ ಕೋರ್ಟ್‌ ಸ್ಪಷ್ಟನೆ

ಡ್ರೈವಿಂಗ್‌ ಲೈಸೆನ್ಸ್‌ (ಚಾಲನಾ ಪರವಾನಗಿ) ವಿಚಾರವಾಗಿ ವಾಹನ ಮಾಲೀಕರಿಗೆ ಸುಪ್ರೀಂ ಕೋರ್ಟ್‌ ಮಹತ್ವದ ಮಾಹಿತಿ ನೀಡಿದೆ. ಮೋಟಾರ್ ವಾಹನ ಕಾಯ್ದೆಯಡಿ ಚಾಲನಾ ಪರವಾನಗಿ ಅವಧಿ ಮುಗಿದ ತಕ್ಷಣ ಅದನ್ನು ನವೀಕರಿಸದಿದ್ದರೆ ಅದು ಮಾನ್ಯವಾಗಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು, 2019ರ ತಿದ್ದುಪಡಿ ಕಾಯ್ದೆಯ ನಂತರ ಅವಧಿ ಮುಗಿದ ದಿನಾಂಕದ ಮರುದಿನದಿಂದಲೇ ಪರವಾನಗಿ ಹೊಂದಿರುವ ವ್ಯಕ್ತಿಯು ತಾನು ಹೊಂದಿರುವ ವಾಹನಗಳನ್ನು ಚಲಾಯಿಸಲು ಅಸಮರ್ಥ ಎಂದು ಹೇಳಿದೆ.

ತಿದ್ದುಪಡಿ ಮಾಡದ ಸಮಯದಲ್ಲಿ ಡ್ರೈವಿಂಗ್ ಲೈಸೆನ್ಸ್ ಅದರ ಮುಕ್ತಾಯ ಅವಧಿಯನ್ನು ತಲುಪಿದ ನಂತರ, ಸ್ವಯಂಚಾಲಿತವಾಗಿ ವಿಸ್ತರಿಸಲು ಸಾಧ್ಯವಿಲ್ಲ ಎಂದೂ ಹೇಳಿದೆ. ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ-2019 ಜಾರಿಗೆ ಬಂದ ನಂತರ, ಪರವಾನಗಿ ಅವಧಿ ಮುಗಿದ ಮರುದಿನದಿಂದಲೇ ಪರವಾನಗಿ ಹೊಂದಿರುವವರು ವಾಹನ ಚಲಾಯಿಸಲು ಕಾನೂನುಬದ್ಧವಾಗಿ ಅನರ್ಹರು. ಇದರ ಅರ್ಥ ಡಿಎಲ್‌ ಅವಧಿ ಮುಗಿದ ಮೇಲೆ ಆ ವಾಹನ ಚಲಾಯಿಸಲು ಆ ವ್ಯಕ್ತಿ ಅಸಮರ್ಥ ಎಂದು ನ್ಯಾಯಾಲಯ ಹೇಳಿದೆ.

Driving Licence Expiry Supreme Court Clarifies Expired DL Is Not Valid

ಸ್ವಯಂಚಾಲಿತ ವಿಸ್ತರಣೆಗೆ ಅವಕಾಶವಿಲ್ಲ

ಹೀಗಾಗಿ ಡ್ರೈವಿಂಗ್‌ ಲೈಸೆನ್ಸ್‌ ಅವಧಿ ಮುಗಿದ ತಕ್ಷಣ ಅದನ್ನು ನವೀಕರಿಸದಿದ್ದರೆ, ಅದು ಮಾನ್ಯವಾಗಿರುವುದಿಲ್ಲ. ಅಲ್ಲದೆ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಸ್ವಯಂಚಾಲಿತ ವಿಸ್ತರಣೆಯ ಯಾವುದೇ ಅವಕಾಶವೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಸ್ತುತ ಕಾನೂನು ಸ್ಥಿತಿಯನ್ನು ವಿವರಿಸಿರುವ ಕೋರ್ಟ್‌, ತಿದ್ದುಪಡಿ ಮಾಡಿದ ಕಾನೂನು ಪರವಾನಗಿ ಅವಧಿ ಮುಗಿದ ನಂತರ ಯಾವುದೇ ಹೆಚ್ಚುವರಿ ಅವಧಿಯನ್ನು ಒದಗಿಸುವುದಿಲ್ಲ ಎಂದು ಪೀಠ ಒತ್ತಿ ಹೇಳಿದೆ.

ಹಿಂದಿನ ನಿಯಮ ಹೇಗಿತ್ತು?

2019ರ ತಿದ್ದುಪಡಿಗೂ ಮೊದಲು ಈ ಕಾಯ್ದೆಯು ಪರವಾನಗಿಗಳು ಅವಧಿ ಮುಗಿದ ನಂತರ ಹೆಚ್ಚುವರಿ 30 ದಿನಗಳವರೆಗೆ ಮಾನ್ಯವಾಗಿರಲು ಅವಕಾಶ ನೀಡಿತ್ತು. ಆದರೆ ಹೊಸ ತಿದ್ದುಪಡಿಯ ಬಳಿಕ ಆ ನಿಬಂಧನೆಯು ಇನ್ನು ಮುಂದೆ ಅಸ್ತಿತ್ವದಲ್ಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸೆಕ್ಷನ್ 15ರ ಉಪ-ವಿಭಾಗ (1)ರ ಮೊದಲ ನಿಬಂಧನೆಯು, ಒಬ್ಬ ವ್ಯಕ್ತಿಗೆ ತನ್ನ ಅಸ್ತಿತ್ವದಲ್ಲಿರುವ ಪರವಾನಗಿಯನ್ನು ನವೀಕರಿಸಲು ಅವಕಾಶ ನೀಡುತ್ತದೆ. ಇದು ಪರವಾನಗಿ ಅವಧಿ ಮುಗಿಯುವ ದಿನಾಂಕಕ್ಕೆ ಒಂದು ವರ್ಷ ಮೊದಲು ಪ್ರಾರಂಭವಾಗುತ್ತದೆ. ಅವಧಿ ಮುಗಿದ ನಂತರ ಒಂದು ವರ್ಷದವರೆಗೆ ಇದು ಮುಂದುವರಿಯುತ್ತದೆ. ಒಮ್ಮೆ ಪರವಾನಗಿಯನ್ನು ನವೀಕರಿಸಿದ ನಂತರ ನವೀಕರಣವು ಹಿಂದಿನ ದಿನಾಂಕದಿಂದ ಕಾರ್ಯನಿರ್ವಹಿಸುತ್ತದೆ. ಪರವಾನಗಿಯು ಆಗ ಮಾನ್ಯವಾಗಿರುತ್ತದೆ.

ಚಾಲನಾ ಪರೀಕ್ಷೆಯು ಅಭ್ಯರ್ಥಿಯು ನಿಯಮಿತವಾಗಿ ಚಾಲನಾ ಅಭ್ಯಾಸ ಮಾಡುತ್ತಿದ್ದಾರೆಯೇ ಎಂದು ಪರಿಶೀಲಿಸಲು ಮತ್ತು ಖಚಿತಪಡಿಸಿಕೊಳ್ಳಲು ಇರುವ ವಿಧಾನ. ಹೀಗಾಗಿ ಅಧಿಸೂಚನೆಗಳ ದಿನಾಂಕಕ್ಕಿಂತ ಎರಡು ವರ್ಷಗಳ ಹಿಂದೆ ನಿರಂತರವಾಗಿ ಅಭ್ಯರ್ಥಿಗಳು ಚಾಲನಾ ಪರವಾನಗಿಗಳನ್ನು ಹೊಂದಿರಬೇಕು ಎಂಬ ಅವಶ್ಯಕತೆ ಅಥವಾ ಷರತ್ತನ್ನು ಅಸಮಂಜಸವೆಂದು ಕರೆಯಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಚಾಲನಾ ಪರೀಕ್ಷೆಯಲ್ಲಿ ವ್ಯಕ್ತಿಯು ಉತ್ತೀರ್ಣನಾಗಬಹುದು ಎಂಬ ಕಾರಣಕ್ಕೆ ಅಧಿಸೂಚನೆಗಳ ದಿನಾಂಕಕ್ಕಿಂತ ಎರಡು ವರ್ಷಗಳ ಮೊದಲು ನಿರಂತರವಾಗಿ ಪರವಾನಗಿ ಹೊಂದಿರಬೇಕೆಂಬ ಅಗತ್ಯವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಪೀಠವು ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+