ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಅಣಿಯಾಯ್ತು ಮತ್ತೊಂದು ಲಸಿಕೆ; ಅನುಮತಿಗೆ ಕೋರಿಕೆ

|
Google Oneindia Kannada News

ನವದೆಹಲಿ, ಜನವರಿ 12: ಭಾರತದಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಎರಡು ಲಸಿಕೆಗಳ ತುರ್ತು ಬಳಕೆಗೆ ಈಗಾಗಲೇ ಅನುಮತಿ ದೊರೆತಿದೆ. ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಹಾಗೂ ಸೆರಂ ಇನ್ ಸ್ಟಿಟ್ಯೂಟ್ ನ ಕೋವಿಶೀಲ್ಡ್ ಲಸಿಕೆಗಳು ಅನುಮತಿ ಪಡೆದಿದ್ದು, ಜನವರಿ 16ರಿಂದ ದೇಶಾದ್ಯಂತ ಲಸಿಕೆ ನೀಡುವ ಕಾರ್ಯಕ್ರಮ ಕೂಡ ಆರಂಭಗೊಳ್ಳಲಿದೆ. ಇದೀಗ ಮತ್ತೊಂದು ಲಸಿಕೆಯೂ "ಸುರಕ್ಷಿತ" ಎಂಬ ವರದಿ ಬಂದಿದೆ.

ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆಯ ಮಧ್ಯಂತರ ಪ್ರಾಯೋಗಿಕ ವರದಿ ಬಂದಿದ್ದು, ಭಾರತದಲ್ಲಿ ಇದನ್ನು ಪ್ರಯೋಗಿಸಬಹುದು ಎಂಬ ಶಿಫಾರಸ್ಸು ಬಂದಿದೆ. ಡಾ. ರೆಡ್ಡೀಸ್ ಲ್ಯಾಬೊರೇಟರಿ ಈ ಶಿಫಾರಸ್ಸು ಮಾಡಿದೆ. ಮುಂದೆ ಓದಿ...

 ಡಾ.ರೆಡ್ಡಿಸ್ ಲ್ಯಾಬೊರೇಟರಿ ನಡೆಸಿದ ಪ್ರಯೋಗ

ಡಾ.ರೆಡ್ಡಿಸ್ ಲ್ಯಾಬೊರೇಟರಿ ನಡೆಸಿದ ಪ್ರಯೋಗ

ರಷ್ಯಾ ಮೂಲದ ಸ್ಪುಟ್ನಿಕ್ ಲಸಿಕೆಯ ಪ್ರಯೋಗವನ್ನು ಭಾರತದ ಡಾ.ರೆಡ್ಡಿಸ್ ಲ್ಯಾಬೊರೇಟರಿ ಕೈಗೊಂಡಿದ್ದು, ಈ ಲಸಿಕೆಯ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಲಸಿಕೆಯ ಮಧ್ಯಂತರ ಪ್ರಯೋಗದಲ್ಲಿ, ಲಸಿಕೆಯು ಸುರಕ್ಷಿತ ಎಂದು ಸಾಬೀತಾಗಿರುವುದಾಗಿ ವರದಿ ಸಲ್ಲಿಸಿ, ಮುಂದಿನ ಹಂತದ ಪ್ರಯೋಗಗಳಿಗೆ ಮುಂದುವರೆಯಲು ಶಿಫಾರಸ್ಸು ಮಾಡಿದೆ.

ಭಾರತದಲ್ಲೇ 300 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಲಸಿಕೆ ತಯಾರಿಭಾರತದಲ್ಲೇ 300 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಲಸಿಕೆ ತಯಾರಿ

 ಸೆಪ್ಟೆಂಬರ್ ನಲ್ಲಿ ಒಪ್ಪಂದ

ಸೆಪ್ಟೆಂಬರ್ ನಲ್ಲಿ ಒಪ್ಪಂದ

ಭಾರತೀಯ ಔಷಧ ನಿಯಂತ್ರಕ ಮಂಡಳಿಗೆ ಮಧ್ಯಂತರ ಪ್ರಯೋಗದ ವರದಿಯನ್ನು ಸಲ್ಲಿಸಿದ್ದು, ಲಸಿಕೆಯ ಪರಿಶೀಲನೆ ನಡೆಸಲು ಹಾಗೂ ಲಸಿಕೆಗೆ ಮುಂದಿನ ಪ್ರಯೋಗಗಳಿಗೆ ಅನುಮತಿ ನೀಡುವ ಕುರಿತು ಚಿಂತಿಸಲು ಶಿಫಾರಸ್ಸು ಮಾಡಲಾಗಿದೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಡಾ. ರೆಡ್ಡಿ ಹಾಗೂ ರಷ್ಯಾದ ನೇರ ಹೂಡಿಕೆ ನಿಧಿಯು ಲಸಿಕೆಯ ಕ್ಲಿನಿಕಲ್ ಪ್ರಯೋಗ ಹಾಗೂ ಭಾರತದಲ್ಲಿ ಅದರ ವಿತರಣೆಗೆ ಸಂಬಂಧಿಸಿದಂತೆ ಪಾಲುದಾರಿಕೆಗೆ ಒಳಪಟ್ಟಿದ್ದವು.

 ಸ್ಪುಟ್ನಿಕ್ ಗೆ 50 ದೇಶಗಳಿಂದ ಬೇಡಿಕೆ

ಸ್ಪುಟ್ನಿಕ್ ಗೆ 50 ದೇಶಗಳಿಂದ ಬೇಡಿಕೆ

ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆಗೆ ಈಗಾಗಲೇ 50 ದೇಶಗಳಿಂದ ಬೇಡಿಕೆ ಪಡೆದುಕೊಂಡಿದೆ. ವಿಶ್ವದ ಮೊದಲ ನೋಂದಾಯಿತ ಲಸಿಕೆ ಎನಿಸಿಕೊಂಡಿರುವ ಸ್ಪುಟ್ನಿಕ್, ವೈದ್ಯಕೀಯ ಪ್ರಯೋಗಗಳ ಅಂತಿಮ ಹಂತದಲ್ಲಿರುವ, ಹಾಗೆಯೇ ಉತ್ಪಾದನೆಗೆ ಸಿದ್ಧವಾಗಿರುವ ವಿಶ್ವ ಆರೋಗ್ಯ ಸಂಸ್ಥೆಯ ಟಾಪ್ 10 ಲಸಿಕೆಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

"ಶೀಘ್ರದಲ್ಲಿಯೇ ರಷ್ಯಾದ ಸ್ಪುಟ್ನಿಕ್ ಲಸಿಕೆ ಭಾರತಕ್ಕೆ"

 ಸೋಂಕಿನ ವಿರುದ್ಧ ಹೋರಾಡಲು 91% ಪರಿಣಾಮಕಾರಿ

ಸೋಂಕಿನ ವಿರುದ್ಧ ಹೋರಾಡಲು 91% ಪರಿಣಾಮಕಾರಿ

ಬೇರೆ ದೇಶಗಳಲ್ಲಿ ಈಗಾಗಲೇ ಸ್ಪುಟ್ನಿಕ್ ವಿ ಲಸಿಕೆಯನ್ನು ಲಕ್ಷಾಂತರ ಮಂದಿಗೆ ನೀಡಲಾಗಿದ್ದು, 91% ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ. ಅಲ್ಜೀರಿಯಾ, ಅರ್ಜೆಂಟೇನಿಯಾ, ಬೊಲಿವಿಯಾ, ಸರ್ಬಿಯಾ ಹಾಗೂ ಪ್ಯಾಲೆಸ್ಟೀನ್ ನಲ್ಲಿ ಈ ಲಸಿಕೆಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಅನುಮತಿ ದೊರೆತಿರುವ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳೊಂದಿಗೆ ಸ್ಪುಟ್ನಿಕ್ ವಿ ಹಾಗೂ ಝೈಡಸ್ ಕಾಡಿಲಿಯಾ ZyCoV-D ಲಸಿಕೆ ಪ್ರಾಯೋಗಿಕ ಹಂತದಲ್ಲಿದೆ. ಭಾರತದಲ್ಲಿ ಮುಂದಿನ ಆರರಿಂದ ಎಂಟು ತಿಂಗಳಿನಲ್ಲಿ 300 ಮಿಲಿಯನ್ ನಾಗರಿಕರಿಗೆ ನೀಡಲು 600 ಮಿಲಿಯನ್ ಲಸಿಕೆಯ ಅಗತ್ಯವಿದೆ ಎಂದು ತಿಳಿದುಬಂದಿದೆ.

English summary
Dr Reddy's Laboratories Ltd submitted report saying Russia's Sputnik V COVID-19 vaccine to be safe in its mid-stage trial in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X