'Double Happy': ಯೋಜನೆ, ಉದ್ಯೋಗ ಯುಪಿ ಜನರಿಗೆ ಗುಡ್‌ ನ್ಯೂಸ್ ಕೊಟ್ಟ ಸಿಎಂ

ಲಕ್ನೋ ಮಾರ್ಚ್ 31: ಹೊಸ ಯೋಜನೆಗಳಿಂದ ಜನರು ಸಂತೋಷಪಡಿಸುವುದು ಹಾಗೂ ಉದ್ಯೋಗಾವಕಾಶಗಳು ಹೆಚ್ಚಿಸುವುದು ನಮ್ಮ ಗುರಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ 6 ವರ್ಷ ಅಧಿಕಾರವನ್ನು ಪೂರೈಸಿದ್ದಾರೆ. ಇದನ್ನು ಇಡೀ ರಾಜ್ಯದಲ್ಲಿ ಬಿಜೆಪಿ ಸಂಭ್ರಮಿಸುತ್ತಿದೆ. ಈ ಮೊದಲು ಯಾರೂ ಸತತ 6 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರಲಿಲ್ಲ. ಯೋಗಿ ಆದಿತ್ಯನಾಥನ್ ಈಗ ಈ ಸಾಧನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಇದನ್ನು ಸಂಭ್ರಮಿಸಲು ಹಲವು ಹೊಸ ಯೋಜನೆಗಳನ್ನು ಘೋಷಿಸುತ್ತಿದೆ.

Double Happy: CM gave good news to the people of UP about the scheme, employment

ಈ ವರ್ಷದ ಆರಂಭದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ನಂತರ ಬಜೆಟ್ ಅಧಿವೇಶನದಲ್ಲಿ ಉತ್ತರ ಪ್ರದೇಶ ಸರ್ಕಾರದ ಗಮನ ಸೆಳೆದಿದೆ. ಯುಪಿಯಲ್ಲಿ ಈ ಮೊದಲು ಯಾವುದೇ ಹೂಡಿಕೆದಾರರ ಸಮಾವೇಶ ನಡೆದಿಲ್ಲ. ದೆಹಲಿ ಮತ್ತು ಮುಂಬೈಯಂತಹ ನಗರಗಳಲ್ಲಿ ಇದನ್ನು ನಡೆಸಲಾಯಿತು. ಆದರೆ ಇದೀಗ ಪ್ರಥಮ ಬಾರಿಗೆ ಯುಪಿಯಲ್ಲಿ ಈ ಸಮ್ಮೇಳನ ನಡೆದಿದ್ದು, ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ.

14 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು ಕಾರ್ಯ

ಅದೇ ರೀತಿ ಪೂರ್ಣಗೊಂಡ ಹಲವು ಯೋಜನೆಗಳನ್ನು ಸಾರ್ವಜನಿಕ ಬಳಕೆಗೆ ತೆರೆದಿದ್ದಾರೆ. ಇದರ ಬೆನ್ನಲ್ಲೇ ಯೋಗಿ ಗೋರಖ್‌ಪುರದಲ್ಲಿ ರೂ.3838 ಕೋಟಿ ಮೌಲ್ಯದ 172 ಯೋಜನೆಗಳನ್ನು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಅವರು, 'ಉತ್ತರ ಪ್ರದೇಶದ ಜನರು ಕೇವಲ ಯೋಜನೆಗಳಾದರೆ ಸಾಕು ಎನ್ನುವ ಕಾಲವಿತ್ತು. ಶೇ.5ರಿಂದ ಶೇ.10ರಷ್ಟು ಕಾರ್ಯಗಳಾದರೆ ಅದೇ ದೊಡ್ಡ ವಿಚಾರವಾಗಿತ್ತು. ಆದರೆ ಇಂದು ಕೋಟ್ಯಂತರ ರೂ.ಗಳ ಯೋಜನೆಗಳು ಒಂದೇ ದಿನದಲ್ಲಿ ಘೋಷಣೆ ಮಾಡಲಾಗಿದೆ.

Double Happy: CM gave good news to the people of UP about the scheme, employment

ಈ ಯೋಜನೆಗಳನ್ನು ಜಾರಿಗೊಳಿಸಿ ಕಾರ್ಯಗತಗೊಳಿಸಲಾಗಿದೆ. ಯುಪಿಯಲ್ಲಿ ಬಿಜೆಪಿ ಸರ್ಕಾರ ಬಂದರೆ ಜನರ ವಿಶ್ವಾಸ ಗಟ್ಟಿಯಾಗುತ್ತದೆ. ಜನರು ತಮ್ಮ ಹಣೆಬರಹವನ್ನು ಮಾತ್ರವಲ್ಲದೆ ತಮ್ಮ ದುಡಿಮೆಯನ್ನೂ ನಂಬುತ್ತಾರೆ. ಹೊಸ ಭರವಸೆ, ಹೊಸ ಉದ್ಯೋಗಾವಕಾಶಗಳ ಗುರಿ ಉತ್ತರ ಪ್ರದೇಶ ಸರ್ಕಾರ ಮಾತ್ರ ನೀಡಲು ಸಾದ್ಯ. ಇಲ್ಲಿನ ವಿಮಾನ ನಿಲ್ದಾಣವು ಗೋರಖ್‌ಪುರದವರೆಗೆ ವಿಸ್ತರಿಸಲಾಗುತ್ತಿದೆ. ಪ್ರಸ್ತುತ 14 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ಇದರಿಂದ ತ್ವರಿತ ಕಾರ್ಯಗಳಿಗೆ ಅನುಕೂಲವಾಗಿದೆ ಎಮದರು.

ಹೂಡಿಕೆದಾರರ ಸಮಾವೇಶ-ಗೋರಖ್‌ಪುರದಲ್ಲಿ ಭಾರಿ ಹೂಡಿಕೆ

ಇನ್ನೂ ರಸಗೊಬ್ಬರ ಕಾರ್ಖಾನೆ, ನಾಲ್ಕು ಲೇನ್ ಹೆದ್ದಾರಿ, ಆರು ಎಕ್ಸ್‌ಪ್ರೆಸ್‌ವೇಗಳು ಗೋರಖ್‌ಪುರದಲ್ಲಿ ಶೀಘ್ರದಲ್ಲೇ ಬರಲಿವೆ. ಈ ವರ್ಷದ ಆರಂಭದಲ್ಲಿ ನಡೆದ ಹೂಡಿಕೆದಾರರ ಸಮಾವೇಶ ಗೋರಖ್‌ಪುರದಲ್ಲಿ ಭಾರಿ ಹೂಡಿಕೆಯನ್ನು ತೋರಿಸಿದೆ. ಇದರಿಂದ ಗೋರಖ್‌ಪುರದಲ್ಲಿ ದೊಡ್ಡ ಮಾಲ್‌ಗಳು, ಹೋಟೆಲ್‌ಗಳು, ಉದ್ಯಾನವನಗಳು ಬರಲಿವೆ. ಹೀಗಾಗಿ ಉದ್ಯೋಗವಕಾಶಗಳು ಹೆಚ್ಚಾಗಲಿವೆ ಎಂದು ಸಿಎಂ ಯೋಗಿ ಹೇಳಿದರು.

Double Happy: CM gave good news to the people of UP about the scheme, employment

ಗೋರಖ್ ಪುರದ ಒಂದೇ ಒಂದು ಗ್ರಾಮದಲ್ಲಿಯೂ ಮಳೆ ನೀರು ನಿಲ್ಲದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಮಳೆ ನೀರು ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಅಂತೆಯೇ ಕುಡಿಯುವ ನೀರಿನ ಸಮಸ್ಯೆಗೂ ಸೂಕ್ತ ಪರಿಹಾರ ದೊರೆಯಲಿದೆ. ನಾವು ಹೊಸ ಯೋಜನೆಗಳನ್ನು ಪ್ರಾರಂಭಿಸುತ್ತಿದ್ದೇವೆ. ಈ ಯೋಜನೆಗಳು ಸಂತೋಷವನ್ನು ಮಾತ್ರವಲ್ಲದೆ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸಿವೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಗೋರಖ್‌ಪುರ ಅಭಿವೃದ್ಧಿ ಯೋಜನೆಗೆ 3838 ಕೋಟಿ ರೂ. ಮೀಸಲು

ಗೋರಖ್ ಪುರದ ಅಭಿವೃದ್ಧಿಗೆ ಯೋಗಿ ಸರ್ಕಾರ ಗಮನ ನೀಡಿದೆ. ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರವನ್ನು ಸುಂದರಗೊಳಿಸಲು ಭಾರಿ ಮೊತ್ತದ ಹಣವನ್ನು ಮೀಸಲಿಟ್ಟಿದ್ದಾರೆ. ಹೊಸ ಗೋರಖ್‌ಪುರದಲ್ಲಿ ಖೋರ್ಬರ್ ಟೌನ್‌ಶಿಪ್ ರಚಿಸಲಾಗುವುದು. ಇದಕ್ಕಾಗಿ ಯೋಗಿ ಸರ್ಕಾರ ಅಲ್ಲಿಗೆ 3838 ಕೋಟಿ ರೂಪಾಯಿ ಮೀಸಲಿಟ್ಟಿದೆ. ನವರಾತ್ರಿಯ ಶುಭ ಸಂದರ್ಭದಲ್ಲಿ ಯೋಗಿ ಸರ್ಕಾರ್ ಗೋರಖ್‌ಪುರಕ್ಕೆ ಮಹತ್ವದ ಗಿಫ್ಟ್ ಕೊಟ್ಟಿದ್ದಾರೆ.

ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರ ಬಳಿ ಹೊಸ ಟೌನ್‌ಶಿಪ್ ರಚಿಸುವುದಾಗಿ ಘೋಷಿಸಿದ್ದಾರೆ. ಈ ವೇಳೆ ಖೋರ್ಬರ್ ಎಂಬ ಹೊಸ ಟೌನ್‌ಶಿಪ್ ಅನ್ನು ಉದ್ಘಾಟಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+