ಬಣ್ಣ ಬದಲಿಸಿದ ದೂರದರ್ಶನ: ಈಗ ಎಲ್ಲವೂ ಕೇಸರಿ ಮಯ
ಸರ್ಕಾರಿ ಸ್ವಾಮ್ಯದ ದೂದರ್ಶನ ತನ್ನ ವಾಹಿನಿಯ ಲೋಗೋವನ್ನು ಚೇಂಜ್ ಮಾಡಿದೆ. ಮೊದಲು ಕೆಂಪು ಬಣ್ಣದಿಂದ ಕೂಡಿದ್ದ ಲೋಗೊ ಈಗ ಕೇಸರಿ ಬಣ್ಣಕ್ಕೆ ತಿರುಗಿದೆ. ಹಿಂದಿ ಸುದ್ದಿ ವಾಹಿನಿ ಡಿಡಿ ನ್ಯೂಸ್‌ನ ಲೋಗೋದಲ್ಲಿ ದೇವನಾಗರಿ ಲಿಪಿಯಲ್ಲಿ 'ನ್ಯೂಸ್' ಎಂದು ಬರೆಯಲಾಗಿದೆ. ಈ ಬಣ್ಣವು ಆಡಳಿತಾರೂಢ ಬಿಜೆಪಿಗೆ ಸಂಬಂಧಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಲೋಗೋ ಬದಲಾಗುತ್ತಿದ್ದಂತೆ ಕಾಂಗ್ರೆಸ್ ಕೆಂಡ ಕಾರಲು ಆರಂಭಿಸಿದೆ. ಚಾನೆಲ್‌ನ್ನು ಕೇಸರಿಕರಣ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಲೋಕಸಭೆ ಚುನಾವಣೆಗೂ ಮುನ್ನ ಅದನ್ನು ಬದಲಾಯಿಸುವ ಅಗತ್ಯ ಏನಿತ್ತು ಎಂಬುದು ವಿಪಕ್ಷ ನಾಯಕರ ಪ್ರಶ್ನೆ ಮಾಡುತ್ತಿದ್ದಾರೆ.

ಡಿಡಿ ನ್ಯೂಸ್ ಚಾನೆಲ್ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಲೋಗೋ ಬದಲಾವಣೆಯ ವೀಡಿಯೊವನ್ನು ಪೋಸ್ಟ್ ಮಾಡಿತ್ತು. ವೀಡಿಯೋ ಜತೆಗೆ ಶೀರ್ಷಿಕೆಯೂ ಇತ್ತು. ವೀಡಿಯೊವನ್ನು ಪೋಸ್ಟ್ ಮಾಡುವಾಗ, ನಮ್ಮ ಮೌಲ್ಯಗಳು ಒಂದೇ ಆಗಿವೆ, ಆದರೆ ಈಗ ನಾವು ಹೊಸ ರೂಪದಲ್ಲಿ ನಿಮ್ಮೆಲ್ಲರ ಮುಂದೆ ಬರಲಿದ್ದೇವೆ ಎಂದು ಡಿಡಿ ನ್ಯೂಸ್ ಬರೆದಿದುಕೊಂಡಿತ್ತು.
ಡಿಡಿ ಲಾಂಛನವನ್ನು ಬದಲಾಯಿಸಿದ ನಂತರ, ಜನರು ಮತ್ತು ವಿರೋಧವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಟಿಎಸಿಯ ರಾಜ್ಯಸಭಾ ಸಂಸದ ಜವಾಹರ್ ಸರ್ಕಾರ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದರು. ದೂರದರ್ಶನ ತನ್ನ ಐತಿಹಾಸಿಕ ಪ್ರಮುಖ ಲೋಗೋವನ್ನು ಕೇಸರಿ ಬಣ್ಣಕ್ಕೆ ಬಣ್ಣಿಸಿದೆ ಎಂದು ಅವರು ಹೇಳಿದರು. ಮಾಜಿ ಸಿಇಒ ಆಗಿ, ನಾನು ಅದರ ಕೇಸರಿಕರಣವನ್ನು ಕಾಳಜಿಯಿಂದ ನೋಡುತ್ತಿದ್ದೇನೆ. ಇನ್ನು ಪ್ರಸಾರ ಭಾರತಿ ಅಲ್ಲ, ಪ್ರಚಾರ ಭಾರತಿ ಎಂದು ನನಗೂ ಅನಿಸುತ್ತಿದೆ ಎಂದು ತಿಳಿಸಿದ್ದಾರೆ.
ಜವಾಹರ್ ಸರ್ಕಾರ್ ಅವರು 2012 ಮತ್ತು 2014 ರ ನಡುವೆ ಪ್ರಸಾರ ಭಾರತಿಯ ಸಿಇಒ ಆಗಿದ್ದರು. ನಾಳೆ ತ್ರಿವರ್ಣ ಧ್ವಜದ ಬಣ್ಣವನ್ನೂ ಬದಲಿಸಿ ಕೇಸರಿ ಮಾಡಬಹುದೆಂಬ ಭಯ ನನಗಿದೆ ಎಂದು ಪ್ರತಿಪಕ್ಷದ ಮತ್ತೊಬ್ಬ ನಾಯಕ ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಜೆಪಿ, ನಮ್ಮ ರಾಷ್ಟ್ರಧ್ವಜದ ಬಣ್ಣಗಳಲ್ಲಿ ಒಂದು ಕೇಸರಿ ಎಂದು ತಿಳಿಸಿದೆ.
ಪರ, ವಿರೋಧ ಚರ್ಚೆ
ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಪರ ಹಾಗೂ ವಿರೋಧ ಚರ್ಚೆಗಳು ಆರಂಭವಾಗಿವೆ. ಡಿಡಿ ತನ್ನ ಹೊಸ ಲೋಗೋವನ್ನು ಚುನಾವಣೆಯ ಸಮಯದಲ್ಲಿ ಬದಲಿಸಿದ್ದಕ್ಕೆ ನೆಟ್ಟಿಗರು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
ಇದು ಕೇಸರಿ ಬಣ್ಣಕ್ಕೆ ತಿರುಗಿದ್ದು ಇದೇ ಮೊದಲಲ್ಲ. ಡಿಡಿ ಚಾನಲ್ ಅಲ್ಲ. G20 ಮೊದಲು, DD ಇಂಡಿಯಾ ಕೇಸರಿ ಮತ್ತು ಕಳೆದ ವರ್ಷ DD ನ್ಯಾಷನಲ್ ಕೇಸರಿ ಮತ್ತು ನೀಲಿ ಬಣ್ಣದ್ದಾಗಿತ್ತು. ಈ ಎಲ್ಲ ಸಂಗತಿಗಳಿಂದ ಈಗ ಯಾರೂ ಆಶ್ಚರ್ಯಪಡದಿರುವುದು ಅತ್ಯಂತ ಕೆಟ್ಟ ಸಂಗತಿ ಎಂದು ಒಬ್ಬ ನೆಟ್ಟಿಗ ಬರೆದಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಇದರ ಪರವಾಗಿದ್ದರೆ ಹಲವರು ವಿರೋಧಿಸಿದ್ದರು.












Click it and Unblock the Notifications