ದೂರದರ್ಶನ ಲಾಂಛನ ಬದಲಿಸಲಿದೆ ಕೇಂದ್ರ ಸರ್ಕಾರ

Posted By:
Subscribe to Oneindia Kannada

ನವದೆಹಲಿ, ಜುಲೈ 25: ಸರ್ಕಾರಿ ಸ್ವಾಮ್ಯದ ದೂರದರ್ಶನ ಕೇಂದ್ರವು 1959ರಿಂದ ಉಪಯೋಗಿಸುತ್ತಿದ್ದ ತನ್ನ ಲಾಂಛನವನ್ನು ಬದಲಿಸಲು ಕೇಂದ್ರ ಮಾಹಿತಿ ಮತ್ತು ಪ್ರಚಾರ ಇಲಾಖೆ ನಿರ್ಧರಿಸಿದ್ದು, ಹೊಸ ಲಾಂಛನವನ್ನು ನೀಡಬಯಸುವವರಿಗಾಗಿ ಬಿಡ್ ಗಳನ್ನು ಆಹ್ವಾನಿಸಿದೆ.

ಸೋಮವಾರ ಸಂಜೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ದೂರದರ್ಶನ, ದೇಶದ ಸಂಸ್ಥೆಗಳಿಗೆ ಹಾಗೂ ನಾಗರಿಕರಿಗೆ ಉತ್ತಮವಾದ ಲಾಂಛನಗಳನ್ನು ನೀಡುವಂತೆ ಕೋರಿದೆ.

Doordarshan plans to replace logo, invites entries

ಲಾಂಛನ ಬದಲಾವಣೆಯ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಂಸ್ಥೆಯು, ಸಾಂಪ್ರದಾಯಿಕ ಮಾದರಿಯ ಲಾಂಛನವನ್ನು ಕೈಬಿಟ್ಟು, ಇಂದಿನ ಯುವ ಜನತೆಯನ್ನು ಆಕರ್ಷಿಸಬಲ್ಲ ಹಾಗೂ ಮಕ್ಕಳ ಸ್ವಾತಂತ್ರ್ಯವನ್ನು ಒತ್ತಿ ಹೇಳಬಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಲಾಂಛನ ತಯಾರಿಸಿಕೊಡುವಂತೆ ಕೇಳಿಕೊಂಡಿದೆ.

ಹಳೆಯ ಲಾಂಛನದ ಮೇಲೆ ಕಣ್ಣಿನ ಹೋಲಿಕೆ ಇದ್ದು, ಇಂದಿನ ಪೀಳಿಗೆ ದೂರದರ್ಶನದೊಡನೆ ಸಂವಹನ ಸಾಧಿಸಲು ಸೋಲುತ್ತಿರುವುದರಿಂದ ಲಾಂಛನವನ್ನು ಬದಲಾಯಿಸಲಾಗುತ್ತಿದೆ ಎಂದು ಪ್ರಸಾರ ಭಾರತಿಯ ಸಿಇಓ ಶಶಿ ಶೇಖರ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಹೊಸ ಲಾಂಛನದಲ್ಲಿ ನವ ಭಾರತದ ಆಶೋತ್ತರಗಳನ್ನು ಬಿಂಬಿಸುವುದಲ್ಲದೆ, ಹಳೆಯದನ್ನು ಉಳಿಸಿಕೊಳ್ಳಲಾಗಿದೆ. ಈ ಹೊಸ ಲಾಂಛನವನ್ನು ರೂಪಿಸುವುದಕ್ಕಾಗಿ ಸ್ಪರ್ಧೆಯನ್ನೂ ಏರ್ಪಡಿಸಿದೆ. ಲೋಗೋ ಕಳಿಸಲು ಕಡೆಯ ದಿನಾಂಕ - 13ನೇ ಆಗಸ್ಟ್, 2017. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ 1 ಲಕ್ಷ ರುಪಾಯಿ ಬಹುಮಾನವನ್ನೂ ಸರಕಾರ ಘೋಷಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Doordarshan, the state-owned broadcaster, is planning to change its iconic logo and create something youthful in a bid to tap the “children of liberalisation”, moving away from nostalgia.
Please Wait while comments are loading...