India-Pakistan Tensions: ಕಾಶ್ಮೀರದ ವಿಷಯದಲ್ಲಿ ಯಾರ ಮಧ್ಯಸ್ಥಿಕೆಯೂ ಬೇಡ: ಭಾರತ ಸ್ಪಷ್ಟನೆ
India-Pakistan Tensions: ಭಾರತ-ಪಾಕಿಸ್ತಾನ ನಡವೆ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದರು. ಈ ವೇಳೆ ಎರಡು ದೇಶಗಳು ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡಿವೆ. ಆದರೂ ಪಾಕ್ ತನ್ನ ನೀಚ ಬುದ್ಧಿಯನ್ನು ಬಿಡದೇ ಇದಕ್ಕೆ ಪ್ರತಿಫಲವೆಂಬಂತೆ ಸರಿಯಾದ ಪೆಟ್ಟು ತಿಂದಿದೆ. ಈ ನಡುವೆಯೇ ಮತ್ತೆ ಕಾಶ್ಮೀರದ ವಿಚಾರದಲ್ಲಿ ಮೂಗು ತೂರಿಸಲು ಬಂದ ಅಮೇರಿಕ ಅಧ್ಯಕ್ಷರಿಗೆ ಭಾರತ ತಕ್ಕ ಪ್ರತಿಕ್ರಿಯೆಯನ್ನು ನೀಡಿದೆ.
ಕಾಶ್ಮೀರದ ವಿಷಯದಲ್ಲಿ ಯಾರೂ ಮಧ್ಯಸ್ಥಿಕೆ ವಹಿಸುವುದನ್ನು ಭಾರತ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೀರ್ಘಕಾಲದ ಕಾಶ್ಮೀರ ವಿವಾದದ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಮುಂದಾಗಿರುವ ಬೆನ್ನಲ್ಲೇ ಈ ನಿಲುವನ್ನು ಭಾರತ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.

ಕಾಶ್ಮೀರದ ವಿಷಯದಲ್ಲಿ ಭಾರತ ಮಧ್ಯಸ್ಥಿಕೆಯನ್ನು ಒಪ್ಪುವುದಿಲ್ಲ ಮತ್ತು ಪಾಕಿಸ್ತಾನ ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿರುವ ಭಾಗವನ್ನು ಹಿಂದಕ್ಕೆ ಪಡೆಯುವ ಕುರಿತು ಮಾತ್ರ ನಡೆಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಭಾರತದ ವಿರುದ್ಧ ಪಾಕಿಸ್ತಾನ ಎಲ್ಲಿಯವರೆಗೂ ಭಯೋತ್ಪಾದನೆ ಮುಂದುವರೆಸುತ್ತದೆಯೋ ಅಲ್ಲಿಯವರೆಗೂ, ಸಿಂಧೂ ನೀರು ಒಪ್ಪಂದ ಅಮಾನತಿನಲ್ಲಿ ಇರುತ್ತದೆ ಅಂತಲೂ ಎಚ್ಚರಿಕೆ ನೀಡಿದ್ದಾರೆ. 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ಪಾಕ್ ಕಡೆಯಿಂದ ಬರುವ ಗುಡಿನ ದಾಳಿಗೆ ಪ್ರತಯುತ್ತರವಾಗಿ ಫಿರಂಗಿ ಮೂಲಕ ಉತ್ತರ ನೀಡಬೇಕು. ಪಾಪಿ ಪಾಕ್‌ನ ಪ್ರತಿಯೊಂದು ಕ್ರಿಯೆಗೂ ಪೂರ್ಣ ಬಲದಿಂದ ಪ್ರತಿಕ್ರಿಯೆ ನೀಡಬೇಕೆಂದು ಸಶಸ್ತ್ರ ಪಡೆಗಳಿಗೆ ಸೂಚಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳ ಮೂಲಗಳಿಂದ ತಿಳಿದುಬಂದಿದೆ.
ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸಿಕೊಂಡು ತನ್ನ ಆಯ್ಕೆಯ ಕ್ಷೇತ್ರದಲ್ಲಿ ಸಹಕಾರ ನಿರೀಕ್ಷಿಸಿದರೆ, ಆಗುವುದಿಲ್ಲ. ಪಾಕಿಸ್ತಾನದ ಜೊತೆಗೆ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ಮೂಲಕ ಮಾತ್ರ ಮಾತುಕತೆ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಾಕ್ ಪ್ರಮುಖ ವಾಯುನೆಲೆ ಧ್ವಂಸ: ಪೆಹಲ್ಗಾಮ್‌ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಬಲಿ ಪಡೆದುಕೊಂಡಿದ್ದರು. ಇದಕ್ಕೆ ಪ್ರತಿತ್ಯುತ್ತರವಾಗಿ ಭಾರತೀಯ ಸೇನೆ ಪಾಕ್‌ಗೆ ನುಗ್ಗಿ ಉಗ್ರ ನೆಲೆಗಳನ್ನು ಧ್ವಂಸ ಮಾಡಿತ್ತು. ಅಷ್ಟದರೂ, ಬುದ್ಧಿ ಕಲಿಯದ ನರಿ ಬುದ್ಧಿ ಪಾಕ್‌ಗೆ ಭಾರತ ದೊಡ್ಡ ಹೊಡೆತ ಕೊಟ್ಟಿದೆ.
ಭಾರತ-ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಟ್ಟು ದಾಳಿ ಪ್ರತಿದಾಳಿಯಲ್ಲಿ ಪಾಕಿಸ್ತಾನಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಮಾಹಿತಿ ಪ್ರಕಾರ, ಭಾರತದ ಕ್ಚಿಪಣಿ ದಾಳಿಗೆ ಪಾಕಿಸ್ತಾನದ 10 ಸೇನಾ ನೆಲೆಗಳು ಧ್ವಂಸವಾಗಿವೆ. ಅದರಲ್ಲೂ ರಾವಲ್ಪಿಂಡಿಯಲ್ಲಿರುವ ಪಾಕ್‌ನ ಪ್ರಮುಖ ನೂರ್ ಖಾನ್ ವಾಯುನೆಲೆ ಛಿದ್ರವಾಗಿದ್ದು, ಇದರಿಂದಲೇ ಪಾಕಿಸ್ತಾನ ಬೆದರಿ ಒಪ್ಪಂದ ಮಾಡಿಕೊಂಡತೇ ಎನ್ನುವ ಪ್ರಶ್ನೆಗಳು ಎದ್ದಿವೆ. ಮತ್ತೊಂದೆಡೆ ಒಪ್ಪಂದ ವೇಳೆ ಭಾರತವು ನಮ್ಮನ್ನು ಕೆಣಕಲು ಬಂದವರನ್ನು ಬಿಡುವ ಮಾತೇ ಇಲ್ಲ ಎನ್ನುವ ಮಾತನ್ನೂ ಕೂಡ ಹೇಳಿಬಿಟ್ಟಿದೆ.
ಭಾರತ ಸೇನಾಪಡೆ ನಡೆಸಿದ ಪ್ರತಿದಾಳಿಯಿಂದ ರಹೀಮ್ ಯಾರ್ ಖಾನ್ ವಾಯುನೆಲೆ ಧ್ವಂಸವಾಗಿದೆ. ಈ ಸಂಬಂಧ ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರ ಶನಿವಾರ ಸಂಜೆ ಹೊರಡಿಸಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಭಾರತ ಮಿಲಿಟರಿ ದಾಳಿ ಹಿನ್ನೆಲೆ ವಾಯುನೆಲೆಯಲ್ಲಿರುವ ಏಕೈಕ ರನ್ ವೇ ಅನ್ನು ಒಂದು ವಾರದವರೆಗೆ ಕಾರ್ಯನಿರ್ವಹಿಸುವುದಿಲ್ಲ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಈ ರನ್ ವೇ ಇಸ್ಲಾಮಾಬಾದ್ನಿಂದ 10 ಕಿಲೋ ಮೀಟರ್ ದೂರದಲ್ಲಿದೆ. ಪಾಕಿಸ್ತಾನದ ಮಿಲಿಟರಿಯ ಮುಖ್ಯ ಸಾಗಣೆ ಕೇಂದ್ರಗಳಲ್ಲಿ ನೂರ್ ಖಾನ್ ವಾಯುನೆಲೆ ಕೂಡ ಒಂದಾಗಿದ್ದು, ಯುದ್ಧ ವಿಮಾನಗಳಿಗೆ ರೀಫುಯಲೆಂಗ್ ವ್ಯವಸ್ಥೆ ಒಳಗೊಂಡಿದೆ. ಇದು ಸೇನೆಯ ಹೆಡ್ಕ್ವಾರ್ಟರ್ಸ್ ಪಕ್ಕದಲಿದೆ. ಪಾಕಿಸ್ತಾನದ ನ್ಯಾಷನಲ್ ಏರೋಸ್ಪೇಸ್ ಸೆಂಟರ್ ಇರುವ ಬೇನಜೀರ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಸಹ ಸನಿಹದಲ್ಲಿದೆ.
ಅಷ್ಟೇ ಅಲ್ಲದೆ, ಚಕ್ಲಾಲ, ಮುರಿದ್, ರಫಿಕಿ, ರಹೀಂ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್ ಮತ್ತಿತರ ವಾಯುನೆಲೆಗಳ ಮೇಲೆ ಭಾರತ ಕ್ಷಿಪಣಿ ದಾಳಿ ಮಾಡುವ ಮೂಲಕ ಪಾಕ್‌ಗೆ ಸರಿಯಾಗಿ ತಿರುಗೇಟು ನೀಡುವ ಕೆಲಸವನ್ನು ಮಾಡಿದೆ. ಇದು ಹೀಗೆ ಮುಂದುವರೆದಿದ್ದರೆ, ಪಾಕ್‌ನ ನ್ಯೂಕ್ಲಿಯಾರ್ ಕಮಾಂಡ್ ಅಥಾರಿಟಿ ಮಣ್ಣುಪಾಲಾಗುವ ಸಾಧ್ಯತೆಯಿತ್ತು. ಆದ್ದಾರಿಂದ ಪಾಕ್ ಕದನ ವಿರಾಮಕ್ಕಾಗಿ ಅಮೆರಿಕದ ಮೊರೆ ಹೋಗಿತ್ತು ಎನ್ನುವ ಮಾಹಿತಿ ಬಟಾಬಯಲಾಗಿದೆ.












Click it and Unblock the Notifications