ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಪ್ರಜೆಗಳ ಅಮೆರಿಕ ಪ್ರವಾಸ ನಿಯಮದ ತಿದ್ದುಪಡಿಯಲ್ಲೇನಿದೆ?

ಏಳು ಮುಸ್ಲಿ ರಾಷ್ಟ್ರಗಳಿಗೆ ಅಮೆರಿಕ ಪ್ರವೇಶ ನಿಷೇಧಿಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಈ ಹಿಂದಿನ ಮಸೂದೆಗೆ ತಿದ್ದುಪಡಿ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 7: ತಾವೇ ರೂಪಿಸಿದ್ದ ವಲಸೆ ನೀತಿಗೆ ಕಾನೂನಾತ್ಮಕ ಅಡಚಣೆಗಳು ಬಂದ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು, ಆರು ಪ್ರಮುಖ ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗಾಗಿ ಹೊಸ ಮಸೂದೆಯೊಂದಕ್ಕೆ ಸೋಮವಾರ ಅಂಕಿತ ಹಾಕಿದ್ದಾರೆ.

ತಾವು ಅಧ್ಯಕ್ಷರಾದ ಹೊಸತದಲ್ಲಿ, ಏಳು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕದಿಂದ ನೀಡಲಾಗುವ ವೀಸಾ ನಿಯಮಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ತಂದಿದ್ದ ಟ್ರಂಪ್, ಸಿರಿಯಾ, ಇರಾನ್, ಸುಡಾನ್, ಲಿಬಿಯಾ, ಸೋಮಾಲಿಯಾ, ಯೆಮನ್ ಮತ್ತು ಇರಾಕ್ ದೇಶಗಳ ಪ್ರಜೆಗಳಿಗೆ ವೀಸಾ ನೀಡಿಕೆನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.[ಎಚ್1ಬಿ ವೀಸಾದಾರರ ಮೇಲೆ ಡೊನಾಲ್ಡ್ ಟ್ರಂಪ್ ಸರ್ಜಿಕಲ್ ಸ್ಟ್ರೈಕ್!]

ಟ್ರಂಪ್ ಅವರ ಈ ನಿರ್ಧಾರ ವಿವಾದಕ್ಕೆ ಕಾರಣವಾಗಿತ್ತು. ಹಾಗಾಗಿ, ಇದೀಗ ಹೊಸ ನಿಯಮಗಳನ್ನು ಅಳವಡಿಸಿರುವ ಟ್ರಂಪ್, ವೀಸಾ ನಿಷೇಧದ ಅವಧಿಯನ್ನು ಇಳಿಸುವ ಸಂಬಂಧಿಸಿದಂತೆ ಇನ್ನಷ್ಟು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಜತೆಯಲ್ಲೇ ನಿಷೇಧ ಹೇರಲು ಬಯಸಿದ್ದ ಏಳು ರಾಷ್ಟ್ರಗಳ ಪಟ್ಟಿಯಿಂದ ಇರಾಕ್ ಅನ್ನು ಕೈಬಿಡಲಾಗಿದೆ.

ಟ್ರಂಪ್ ಅವರು ಸಹಿ ಹಾಕಿದ ಹೊಸ ನಿಯಮಗಳಲ್ಲೇನಿದೆ? ಹಳೆಯ ನಿಯಮ ಹಾಗೂ ಹೊಸ ನಿಯಮಗಳ ನಡುವಿನ ವ್ಯತ್ಯಾಸವೇನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.[ಇರಾಕ್ ಮೇಲಿನ ವೀಸಾ ನಿರ್ಬಂಧ ತೆರವು : ಡೊನಾಲ್ಡ್ ಟ್ರಂಪ್]

ಕೆಲವರಿಗೆ ನಿಯಮದಿಂದ ವಿನಾಯ್ತಿ

ಕೆಲವರಿಗೆ ನಿಯಮದಿಂದ ವಿನಾಯ್ತಿ

ಹಳೆಯ ನಿಯಮ: ಮುಸ್ಲಿ ರಾಷ್ಟ್ರಗಳ ಪ್ರಜೆಗಳಿಗೆ ನೀಡಲಾಗುತ್ತಿದ್ದ ಅಮೆರಿಕ ವೀಸಾಕ್ಕೆ 90 ದಿನಗಳ ನಿರ್ಬಂಧ.

ಹೊಸ ನಿಯಮ: ಈಗಾಗಲೇ ವೀಸಾ ಪಡೆದಿರುವ ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಥವಾ ಅಮೆರಿಕದ ಗ್ರೀನ್ ಕಾರ್ಡ್ ಪಡೆದಿರುವ ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಈ ನಿಯಮ ಅನ್ವಯವಾಗದು.

ಪಟ್ಟಿಯಿಂದ ಇರಾಕ್ ಹೊರಕ್ಕೆ

ಪಟ್ಟಿಯಿಂದ ಇರಾಕ್ ಹೊರಕ್ಕೆ

ಹಳೆಯ ನಿಯಮ: ಮುಸ್ಲಿಮರು ಬಹುಸಂಖ್ಯಾತರಿರುವ ಏಳು ರಾಷ್ಟ್ರಗಳ ಪ್ರಜೆಗಳಿಗೆ ನಿರ್ಬಂಧವಿತ್ತು. ಆದರೀಗ ಅದನ್ನು ಆರು ರಾಷ್ಟ್ರಗಳಿಗೆ ಇಳಿಸಲಾಗಿದೆ.

ಹೊಸ ನಿಯಮ: ಮೊದಲ ಮಾಡಿದ್ದ ಪಟ್ಟಿಯಲ್ಲಿದ್ದ ಇರಾಕ್ ದೇಶವನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

ನಿರಾಶ್ರಿತರಿಗೆ ಕೊಂಚ ಅನುಕಂಪ

ನಿರಾಶ್ರಿತರಿಗೆ ಕೊಂಚ ಅನುಕಂಪ

ಹಳತು: ಮುಸ್ಲಿಂ ರಾಷ್ಟ್ರಗಳಿಂದ ಬರುವ ನಿರಾಶ್ರಿತರಿಗೆ 120 ದಿನಗಳ ನಿಷೇಧವಿತ್ತು.

ಹೊಸತು: ಈಗಲೂ ಅದೇ ನಿಯಮ ಮುಂದುವರಿಕೆ. ಆದರೆ, ಈಗಾಗಲೇ ಅಮೆರಿಕ ಸರ್ಕಾರದಿಂದ ಮಾನ್ಯತೆಗಳಿಸಿರುವ ನಿರಾಶ್ರಿತರಿಗೆ ಯಾವುದೇ ನಿರ್ಬಂಧವಿಲ್ಲ.

ಅನಿರ್ದಿಷ್ಟಾವಧಿ ನಿಷೇಧವಿಲ್ಲ

ಅನಿರ್ದಿಷ್ಟಾವಧಿ ನಿಷೇಧವಿಲ್ಲ

ಹಳತು: ಸಿರಿಯಾದಿಂದ ಬರುವ ನಿರಾಶ್ರಿತರಿಗೆ ಅನಿರ್ದಿಷ್ಠಾವಧಿವರೆಗೆ ನಿಷೇಧ.

ಹೊಸತು: ಇನ್ನು, ಸಿರಿಯಾದ ನಿರಾಶ್ರಿತರಿಗೆ ಅನಿರ್ದಿಷ್ಟಾವಧಿ ನಿಷೇಧವಿಲ್ಲ. ಆದರೆ, ಉಳಿದ ಐದು ರಾಷ್ಟ್ರಗಳ ನಿರಾಶ್ರಿತರಿಗೆ ಅನ್ವಯವಾಗುವ ನಿಯಮಗಳೇ ಅನ್ವಯವಾಗುತ್ತವೆ.

ವಿಶೇಷ ಪ್ರಕರಣಗಳಿಗೆ ರಿಯಾಯ್ತಿ

ವಿಶೇಷ ಪ್ರಕರಣಗಳಿಗೆ ರಿಯಾಯ್ತಿ

ಹಳತು: ಏಳು ಮುಸ್ಲಿಂ ರಾಷ್ಟ್ರಗಳಿಂದ ವಲಸೆ ಬರುತ್ತಿದ್ದ ಜನರ ಮೇಲೆ ಒಟ್ಟಾರೆ ನಿಷೇಧ

ಹೊಸತು: ನಿಷೇಧದ ಹೊರತಾಗಿಯೂ ಪ್ರವಾಸಿಗರಿಗೆ, ಯುಎಸ್ ನಲ್ಲಿ ನೆಲೆಸಿರುವ ಪ್ರಜೆಗಳ ಸಂಬಂಧಿಗಳಿಗೆ, ವೈದ್ಯಕೀಯ ಚಿಕಿತ್ಸೆಗೆ, ಮಕ್ಕಳಿಗೆ ಈ ವಿಚಾರ ಅನ್ವಯವಾಗದು.

ಗೊಂದಲ ನಿವಾರಣೆ, ಅಧಿಕಾರಿಗಳೂ ನಿರಾಳ

ಗೊಂದಲ ನಿವಾರಣೆ, ಅಧಿಕಾರಿಗಳೂ ನಿರಾಳ

ಹಳತು: ಜನವರಿ 27ರಂದು ಬಂದಿದ್ದ ಹಳೆ ನಿಯಮದಿಂದಾಗಿ ಭಾರೀ ಸಂಚಲನ. ಏರ್ ಪೋರ್ಟ್ ಗಳಲ್ಲಿ ಯಾರನ್ನು ಅಮೆರಿಕದೊಳಕ್ಕೆ ಬಿಡಬೇಕು, ಯಾರನ್ನು ಬಿಡಬಾರದು ಎಂಬ ಗೊಂದಲದಲ್ಲಿದ್ದ ವಿಮಾನ ನಿಲ್ದಾಣ ಸಿಬ್ಬಂದಿ.

ಹೊಸತು: ಮಾರ್ಚ್ 16ರ ನಂತರವಷ್ಟೇ ಹೊಸ ನಿಯಮ ಜಾರಿಗೊಳ್ಳಬೇಕಿರುವುದರಿಂದ ಅಷ್ಟರಲ್ಲಿ ನಿಯಮದಲ್ಲಿರುವ ಅಂಶಗಳನ್ನು ಅರ್ಥೈಸಿಕೊಳ್ಳಲು ಅಧಿಕಾರಿಗಳಿಗೆ ಕೊಂಚ ಕಾಲಾವಕಾಶ ಸಿಗಲಿದೆ.

English summary
US President Donald Trump on Monday signed a revised, more limited executive order banning migrants from six mostly-Muslim countries from coming to the United States for 90 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X