ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಸತ್ತಾಗ ಸ್ಮಾರಕದ ಬದಲು ಮರ ನೆಡಿ ಎಂದಿದ್ದ ಮಾಜಿ ಸಚಿವ ದವೆ

2012ರಲ್ಲೇ ಉಯಿಲು ಬರೆದಿದ್ದ ಕೇಂದ್ರದ ಪರಿಸರ ಇಲಾಖೆಯ ಮಾಜಿ ಸಚಿವ ಅನಿಲ್ ದಾವೆ ತಮ್ಮ ಸಾವಿನ ನಂತರದ ಅಂತ್ಯ ಸಂಸ್ಕಾರದ ಬಗ್ಗೆ ತಮ್ಮದೇ ಆದ ಅಭಿಲಾಷೆಗಳನ್ನು ವ್ಯಕ್ತಪಡಿಸಿದ್ದಾರೆ.

|
Google Oneindia Kannada News

ನವದೆಹಲಿ, ಮೇ 18: ನಾನು ತೀರಿಕೊಂಡ ನಂತರ ನನ್ನ ಸಮಾಧಿಯನ್ನು ಸ್ಮಾರಕ ನಿರ್ಮಿಸಬೇಡಿ. ನಿಮಗೆ ನಿಜವಾಗಿಯೂ ನನ್ನ ಮೇಲೆ ಪ್ರೀತಿ, ಗೌರವಗಳಿದ್ದರೆ ನನ್ನ ಸಮಾಧಿಯ ಬಳಿ ಒಂದು ಮರ ನೆಡಿ.

ತಮ್ಮ 60ನೇ ವಯಸ್ಸಿನಲ್ಲಿ ನಿಧನರಾದ ಕೇಂದ್ರ ಪರಿಸರ ಖಾತೆ ಸಚಿವ ಅನಿಲ್ ಮಹದೇವ್ ದವೆ ಅವರ ಒತ್ತಾಸೆಯಿದು.

Don't erect a memorial, but plant a tree if you loved me: Dave said in his will

2012ರಲ್ಲೇ ಒಂದು ಉಯಿಲು ಬರೆದಿದ್ದ ದವೆ, ಅದರಲ್ಲಿ ''ತಮ್ಮ ಸಾವಿನ ನಂತರ ತಮಗೆ ತಮ್ಮ ತವರು ರಾಜ್ಯವಾದ ಮಧ್ಯ ಪ್ರದೇಶದಲ್ಲಿ ಹರಿಯುವ ನರ್ಮದಾ ನದಿಯ ತಟದಲ್ಲಿ ಅಂತ್ಯಸಂಸ್ಕಾರ ಮಾಡಬೇಕು. ಆದರೆ, ನನ್ನ ಸಮಾಧಿಯ ಮೇಲೆ ಸ್ಮಾರಕ ನಿರ್ಮಿಸುವ ಬದಲು, ನನ್ನ ಸಮಾಧಿಯ ಸುತ್ತ ಮರ ನೆಟ್ಟರೆ ಅದೇ ತಮಗೆ ಸಲ್ಲಬೇಕಾದ ಪ್ರೀತಿ, ಗೌರವ'' ಎಂದು ಹೇಳಿದ್ದಾರೆ.

ಪರಿಸರದ ಮೇಲೆ ಅಪಾರ ಕಾಳಜಿ ಹಾಗೂ ನದಿ ಶುದ್ಧೀಕರಣ ಕಾರ್ಯಗಳಲ್ಲಿ ವಿಶೇಷ ಆಸಕ್ತಿ ವಹಿಸಿದ್ದ ದವೆ ಅವರ ನಿಧನದಿಂದ ದೇಶವು ಒಬ್ಬ ನಿಷ್ಠಾವಂತ ಪರಿಸರ ಪ್ರೇಮಿಯನ್ನು ಕಳೆದುಕೊಂಡಂತಾಗಿದೆ ಎಂದು ರಾಜಕೀಯ ವಲಯ ವಿಶ್ಲೇಷಿಸಿದೆ.

English summary
Do not erect a memorial when I die, but plant a tree if you loved and respected me, said Union Minister Anil Madhav Dave in his will.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X