ಡಾಲರ್ ಮೌಲ್ಯ ಭಾರೀ ಕುಸಿತ, ಚಿನ್ನ ಇನ್ನಷ್ಟು ದುಬಾರಿ: ರಂಗಸ್ವಾಮಿ ಮೂಕನಹಳ್ಳಿ
ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಹಾಗೂ ವೆನೆಜುವೆಲಾ ಅಧ್ಯಕ್ಷ ಮದುರೋ ದಂಪತಿಯ ಸೆರೆಯು ಜಾಗತಿಕವಾಗಿ ಸಂಚಲನ ಸೃಷ್ಟಿಸಿದೆ. ಮತ್ತೊಂದೆಡೆ ಸದ್ದಿಲ್ಲದೆ ಡಾಲರ್ ಮೌಲ್ಯ ಕುಸಿತ ಕಾಣುತ್ತಿದ್ದು, ಚಿನ್ನ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಅವರ ವಿಶ್ಲೇಷಣಾ ಬರಹ ಇಲ್ಲಿದೆ.
'ಮೂರ್ನಾಲ್ಕು ದಿನದಲ್ಲಿ ಅದೆಷ್ಟು ಬದಲಾವಣೆ! The North Atlantic Treaty Organization (NATO) 32 ದೇಶಗಳ ಒಕ್ಕೂಟ. ಡೆನ್ಮಾರ್ಕ್ ಸದಸ್ಯ ದೇಶ. ಗ್ರೀನ್ ಲ್ಯಾಂಡ್ ಸಪರೇಟ್ ಸರಕಾರ ಹೊಂದಿದ್ದರೂ ಅದು ಡೆನ್ಮಾರ್ಕ್ ಅಡಿಯಲ್ಲೇ ಬರುತ್ತದೆ. ಟ್ರಂಪ್ ನನಗೆ ಗ್ರೀನ್ ಲ್ಯಾಂಡ್ ಬೇಕು ಎಂದದ್ದು ಹಳೆ ನ್ಯೂಸ್ ಆಗೋಯ್ತು. ಡೆನ್ಮಾರ್ಕ್ ಮೊದಲಿಗೆ ಬೇಡಿಕೊಳ್ಳುವ ರೀತಿಯಲ್ಲಿ ಕೇಳಿತ್ತು. ಇದೀಗ ಅಮೆರಿಕಾ ತ್ರೆಟ್ ಟು ನ್ಯಾಷನಲ್ ಇಂಟರೆಸ್ಟ್ ಎಂದಿದೆ. Nato ಒಪ್ಪಂದದಲ್ಲಿ ಒಂದು ಸಾಲಿದೆ. ಅಟ್ಯಾಕ್ ಆನ್ ಎನಿ ಒನ್ ಮೆಂಬರ್ ಕಂಟ್ರಿ ವಿಲ್ ಬಿ ಟ್ರೀಟೆಡ್ ಆಸ್ ಅಟ್ಯಾಕ್ ಆನ್ ಆಲ್. ಈ ಅರ್ಥದಲ್ಲಿ ನೋಡಿದಾಗ ಅಮೆರಿಕಾ ಅಟ್ಯಾಕ್ ಮಾಡಿದ್ದೆ ಆದರೆ, ಅಲ್ಲಿಗೆ nato ಒಕ್ಕೂಟ ಮುಗಿದಂತೆ'.

'ಜರ್ಮನಿ ರಾತ್ರೊರಾತ್ರಿ ತೀರ್ಮಾನ ತೆಗೆದುಕೊಂಡು ಡಿಫೆನ್ಸ್ ಬಜೆಟ್ ಹೆಚ್ಚಿಸಿದ್ದಾರೆ. ಇಸ್ರೇಲ್ ಅಮೆರಿಕಾ ಕುಕೃತ್ಯಕ್ಕೆ ಬೆಂಬಲ ನೀಡಿದೆ. ರಷ್ಯಾ , ಚೀನಾ, ಇರಾನ್, ಟರ್ಕಿ ದೇಶಗಳು ಇದನ್ನು ತಪ್ಪು ಎಂದು ಅಮೆರಿಕಾ ವಿರುದ್ಧ ಹೇಳಿಕೆ ನೀಡಿವೆ. ನಾರ್ತ್ ಕೊರಿಯಾ ಕೂಡ ಅಮೆರಿಕಾ ಮೇಲೆ ಭುಸುಗುಡುತ್ತಿದೆ'.
'ಟ್ರಂಪ್ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಭಾರತದ ಮೇಲಿನ ಟಾರೀಫ್ ಹೆಚ್ಚಿಸುವ ಧಮಕಿ ಹಾಕುತ್ತಾನೆ. ಭಾರತ ಮೂರು ಪುಟಗಳ ಹೇಳಿಕೆಯಲ್ಲಿ ಅಮೆರಿಕಾ ಮಾಡಿದ್ದು ತಪ್ಪು ಎಂದು ಸ್ಪಷ್ಟವಾಗಿ ಹೇಳಿಲ್ಲ. ಭಾರತ ಯಾವಾಗ ಸ್ಟಾಂಡ್ ತೆಗೆದುಕೊಳ್ಳುವುದು ಕಲಿಯುತ್ತೋ ಗೊತ್ತಿಲ್ಲ. ರಷ್ಯಾ ಮತ್ತು ಚೀನಾದ ಜೊತೆಗೆ ಭದ್ರವಾಗಿ ನಿಲ್ಲುವ ಸಾಹಸ ಭಾರತ ಮಾಡುತ್ತಿಲ್ಲ'.
'ಇವೆಲ್ಲವುಗಳ ನಡುವೆ ಚೀನಾ ಅಮೆರಿಕನ್ ಬಾಂಡ್‌ಗಳನ್ನು ಮಾರುತ್ತಿದೆ. ವಿಧಿಯಿಲ್ಲದೆ ಜಪಾನ್ ಕೂಡ ಇದನ್ನೇ ಮಾಡುತ್ತದೆ. ಜಗತ್ತಿನ ಬಹುತೇಕ ದೇಶಗಳು ತಮ್ಮ ಫಾರಿನ್ ರಿಸರ್ವವ್‌ನಲ್ಲಿದ್ದ ಡಾಲರ್ ಮಾರಿ, ಚಿನ್ನ ಖರೀದಿ ಮಾಡುತ್ತಿದ್ದಾರೆ. ಈಗಾಗಲೇ ಡಾಲರ್ ಸರಿಸುಮಾರು 10 ಪ್ರತಿಶತ ಮೌಲ್ಯ ಕಳೆದುಕೊಂಡಿದೆ. ಬೇರೆ ದೇಶಗಳ ಕರೆನ್ಸಿ ಕೂಡ ಕುಸಿತ ಕಂಡಿವೆ. ಭಾರತದ ರೂಪಾಯಿ ಕೂಡ ಕುಸಿದಿದೆ. ಆದರೆ ಒಮ್ಮೆ ಡಾಲರ್ ಬದಲಿಗೆ ಚಿನ್ನ ರಿಸರ್ವ್ ಆಗಿ ಬದಲಾದ ಮರುಗಳುಗೆಯಿಂದ ಎಲ್ಲ ಕರೆನ್ಸಿ ಮೇಲೇರುತ್ತವೆ. ಡಾಲರ್ ಕುಸಿಯುತ್ತದೆ'.
'ಇದನ್ನು ತಪ್ಪಿಸಲು ವೇನಿಜುವೆಲಾ ತೈಲವನ್ನು ಮಾರಲು ಅಮೆರಿಕಾ ಹೊರಟಿದೆ. ಅಮೆರಿಕಾದ ಮಿತ್ರ ದೇಶ ಸೌದಿ ಅರೇಬಿಯಾ ಇದರಿಂದ ಕುಪಿತ ಗೊಂಡಿದೆ. ವೇನಿಜುವೆಲಾ ತೈಲ ಮಾರುಕಟ್ಟೆಗೆ ಅಧಿಕೃತವಾಗಿ ಬಂದರೆ ಹೆಚ್ಚು ನಷ್ಟವಾಗುವುದು ಸೌದಿಗೆ. ಚೀನಾ ಕೂಡ ಕದ್ದು ಮುಚ್ಚಿ ವೇನಿಜುವೆಲಾ ತೈಲ ಅತೀ ಕಡಿಮೆ ಬೆಲೆಯಲ್ಲಿ ಕೊಳ್ಳುತ್ತಿತ್ತು. ಹೀಗಾಗಿ ಅದಕ್ಕೂ ಪೆಟ್ಟು ಬೀಳಲಿದೆ'.
'ಅಮೆರಿಕಾ ವರ್ಷದಲ್ಲಿ 170/190 ಬಿಲಿಯನ್ ಡಾಲರ್ ಹಣ ವೇನಿಜುವೆಲಾದ ತೈಲ ಮಾರಿ ಸಂಪಾದಿಸಬಹುದು. ಪುಟಾಣಿ ತೈವಾನ್ ತನ್ನ ಆಡಳಿತಕ್ಕೆ ತೆಗೆದುಕೊಂಡರೆ ಚೀನಾ ಕೂಡ ಇಷ್ಟೆ ಹಣವನ್ನು ಪ್ರತಿ ವರ್ಷ ಗಳಿಸಬಹುದು. ರಷ್ಯಾ ತನ್ನಿಂದ ಹೊರ ಹೋಗಿದ್ದ ಎಲ್ಲಾ ದೇಶಗಳನ್ನು ಬಡಿದು ಬಾಯಿಗೆ ಹಾಕಿಕೊಳ್ಳುತ್ತೆ'.
'ಒಟ್ಟಾರೆ ಹೇಳಬೇಕೆಂದರೆ ಯಾವಾಗ ಏನಾಗುತ್ತೆ ಹೇಳಲು ಸಾಧ್ಯವಿಲ್ಲ. ನಮ್ಮ ಬಳಿ ಪರಮಾಣು ಇರದಿದ್ದರೆ? ಈ ವೇಳೆಗೆ ನಾವು ಅಮೆರಿಕಾ ಹೇಳುದಕ್ಕೆಲ್ಲಾ ತಲೆ ಆಡಿಸದೆ ಅನ್ಯ ಮಾರ್ಗವಿರುತ್ತಿರಲಿಲ್ಲ. ಸೌತ್ ಅಮೆರಿಕನ್ ದೇಶಗಳು ಮತ್ತು ಸ್ಕಂಡೇನೇವಿಯನ್ ದೇಶಗಳನ್ನು ನೋಡಿದಾಗ ಎಷ್ಟೇ ಮುಂದುವರಿದಿದ್ದರೂ ಕ್ಷಣದಲ್ಲಿ ದೊಡ್ಡ ದೇಶಗಳು ಹೊಸಕಿ ಹಾಕಿ ಬಿಡುತ್ತವೆ ಎನ್ನುವುದು ಸ್ಪಷ್ಟವಾಗುತ್ತದೆ'.
'ದಿವಂಗತ ಶ್ರೀವಾಜಪೇಯಿ ಅವರನ್ನು ಎಷ್ಟು ನೆನೆದರೂ ಕಡಿಮೆ. ಸ್ವಂತಂತ್ರಕ್ಕಿಂತ ದೊಡ್ಡದು, ಸ್ವಾಭಿಮಾನಕ್ಕಿಂತ ಮೌಲ್ಯ ಉಳ್ಳದ್ದು ಬೇರೇನಿದೆ? ಭಾರತ ಅಮೆರಿಕಾ ನಡೆಯನ್ನು ಖಂಡಿಸದೆ ಇರುವುದು, ರಷ್ಯಾ ಮತ್ತು ಚೀನಾ ಜೊತೆ ನಿಲ್ಲದೆ ಇರುವುದು ವೈಯಕ್ತಿಕವಾಗಿ ಬೇಸರವಿದೆ. ಉಳಿದಂತೆ ನಾಳೆ ಏನು ಬಲ್ಲವರಾರು? ಶುಭವಾಗಲಿ' ಎಂದು ರಂಗಸ್ವಾಮಿ ಮೂಕನಹಳ್ಳಿ ಬರೆದುಕೊಂಡಿದ್ದಾರೆ.












Click it and Unblock the Notifications