ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಲಿಂಗಿಗಳ ಪ್ರೇಮ, ಕಾಮ ಓಕೆ, ಮದುವೆ ಏಕೆ?'

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 07: ಸಲಿಂಗ ಕಾಮವನ್ನು ಸುಪ್ರೀಂಕೋರ್ಟ್ ಅಪರಾಧ ಮುಕ್ತಗೊಳಿಸಿ ಮಹತ್ವದ ತೀರ್ಪು ನೀಡಿರಬಹುದು. ಆದರೆ, ಸಲಿಂಗ ಪ್ರೇಮ, ಕಾಮಕ್ಕೆ ಓಕೆ ಎಂದು ಬಲವಂತವಾಗಿ ಒಪ್ಪಿಕೊಂಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ಸಲಿಂಗಿಗಳ ಮದುವೆಗೆ ಒಪ್ಪುವುದು ಕಷ್ಟ ಎಂಬ ಸುದ್ದಿ ಬಂದಿದೆ.

ಐಪಿಸಿ ಸೆಕ್ಷನ್ 377ರದ್ದು ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ 493 ಪುಟಗಳ ತೀರ್ಪನ್ನು ಕೇಂದ್ರ ಸರ್ಕಾರ ಬೆಂಬಲಿಸಿದೆಯಾದರೂ, ಸಲಿಂಗ ವಿವಾಹವನ್ನು ಒಪ್ಪುವ ಸಾಧ್ಯತೆ ಇಲ್ಲ.

ಸುಪ್ರೀಂ ತೀರ್ಪು ಖಾಸಗಿತನದ ಹಕ್ಕಿನ ಕಡೆಗೆ ಮಹತ್ವದ ಹೆಜ್ಜೆ: ರಾಜೀವ್ ಸುಪ್ರೀಂ ತೀರ್ಪು ಖಾಸಗಿತನದ ಹಕ್ಕಿನ ಕಡೆಗೆ ಮಹತ್ವದ ಹೆಜ್ಜೆ: ರಾಜೀವ್

ಸಾಂಪ್ರದಾಯಿಕ ಹಿಂದೂಗಳು ಸಲಿಂಗ ಮದುವೆಗೆ ಅವಕಾಶ ನೀಡುವುದರ ವಿರುದ್ಧವಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

Does striking down of Sec 377 pave the way for same sex marriage? Knot yet

ವಯಸ್ಕರು ಸಹಮತಿಯಿಂದ ಸಲಿಂಗದಲ್ಲಿ ತೊಡಗುವುದನ್ನು ಅಪರಾಧ ಮುಕ್ತಗೊಳಿಸುವುದಕ್ಕೆ ಸಮ್ಮತಿ ಇದೆ. ಆದರೆ, ಸಲಿಂಗಿಗಳ ನಡುವಿನವಿವಾಹವನ್ನು ಕಾನೂನುಬದ್ಧಗೊಳಿಸುವ ಬೇಡಿಕೆಯನ್ನು ಸರ್ಕಾರ ವಿರೋ ಧಿಸಲಿದೆ ಎಂದಿದ್ದಾರೆ.

ಸೆಕ್ಷನ್ 377 : ಸುಪ್ರೀಂ ತೀರ್ಪಿನ ಬಳಿಕ ಸಂಭ್ರಮಾಚರಣೆ ಚಿತ್ರಗಳುಸೆಕ್ಷನ್ 377 : ಸುಪ್ರೀಂ ತೀರ್ಪಿನ ಬಳಿಕ ಸಂಭ್ರಮಾಚರಣೆ ಚಿತ್ರಗಳು

ಸುಪ್ರೀಂ ಕೋ ರ್ಟ್ ತೀರ್ಪಿನ ಕಾರಣದಿಂದಾಗಿ ಸಲಿಂಗ ವಿವಾಹಕ್ಕೆ ದಾರಿ ಮಾಡಿಕೊಟ್ಟಂತಾಗುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರದ ಉನ್ನತ ಪದಾಧಿಕಾರಿ, ಈ ವಿಷಯದ ಬಗ್ಗೆ ದೇಶದಲ್ಲಿ ತೀವ್ರವಾಗಿ ಒಡಕಿದೆ. ಜಾಗತಿಕವಾಗಿಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಮೆರಿಕದಲ್ಲೂ ಸಹ ಕೆಲ ರಾಜ್ಯಗಳಲ್ಲಿ ಸಲಿಂಗ ವಿವಾಹದ ಮೇಲೆ ನಿರ್ಬಂಧವಿದೆ ಎಂದಿದ್ದಾರೆ.

ಆರ್.ಎಸ್.ಎಸ್. ಸಹ ಸರ್ಕಾರದ ನಿಲುವನ್ನು ಬೆಂಬಲಿಸಿದೆ. ಸೆಕ್ಷನ್ 377 ಅನ್ನು ಎಲ್ಜಿಬಿಟಿ ಸಮುದಾಯವನ್ನು ಪೀಡಿಸುವ ಅಸ್ತ್ರವನ್ನಾಗಿಯೂ ಬಳಸಲಾಗುತ್ತಿತ್ತು. ಇದು ಪಕ್ಷಪಾತಕ್ಕೂ ಕಾರಣವಾಗಿತ್ತು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ನಾಲ್ಕು ಗೋಡೆ ನಡುವೆ ನಡೆವ ಆ ಕ್ರಿಯೆ ಅಪರಾಧವಲ್ಲ: RJ ಪ್ರಿಯಾಂಕಾ ಸಂದರ್ಶನನಾಲ್ಕು ಗೋಡೆ ನಡುವೆ ನಡೆವ ಆ ಕ್ರಿಯೆ ಅಪರಾಧವಲ್ಲ: RJ ಪ್ರಿಯಾಂಕಾ ಸಂದರ್ಶನ

ಪ್ರತ್ಯೇಕ ತೀರ್ಪು ನೀಡಿರುವ ನ್ಯಾಯಮೂರ್ತಿ ಇಂದು ಮಲ್ಹೋತ್ರಾ, ಸಲಿಂಗಿಗಳು ಶತಮಾನದಿಂದ ಎದುರಿಸಿದ ಪೀಡನೆಗಾಗಿ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಇತಿಹಾಸ ಕ್ಷಮೆ ಕೋರಬೇಕಿದೆ ಎಂದಿದ್ದಾರೆ. ಆದರೆ, ವಯಸ್ಕರು ಪ್ರಾಣಿಗಳ ಜೊತೆ ಲೈಂಗಿಕ ಚಟುವಟಿಕೆ ನಡೆಸುವುದು ಸೆಕ್ಷನ್ 377ರ ಅನ್ವಯ ಅಪರಾಧವಾಗಿ ಮುಂದುವರೆಯಲಿದೆ ಎಂದು ತಿಳಿಸಲಾಗಿದ

ಒಂದೇ ಲಿಂಗದವರು ಮದುವೆಯಾಗಲು ವಿವಾಹ ಕಾಯ್ದೆಯಲ್ಲಿ ಇನ್ನೂ ಯಾವುದೇ ಸೆಕ್ಷನ್ ಓಪನ್ ಆಗಿಲ್ಲ. ವಿಶೇಷ ಮದುವೆ ಕಾಯ್ದೆ ಗೆ ತಿದ್ದುಪಡಿ ಅಗತ್ಯ, ಈ ಬಗ್ಗೆ ಸರ್ವಪಕ್ಷಗಳ ನಿಲುವು ಪಡೆದು, ಸಂಸತ್ತಿನಲ್ಲಿ ಚರ್ಚೆಯಾಗಿ, ನಂತರ ಕಾನೂನಾಗಿ ಹೊರಬರಬೇಕಿದೆ. ಈಗಾಗಲೇ ಅನೇಕ ಸಲಿಂಗಿಗಳು ಭಾರತದಲ್ಲೂ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಮದುವೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

English summary
The Supreme Court on Thursday partially struck down as unconstitutional Section 377 of the Indian Penal Code. The court said that gay sex between consenting adults in private is not an offence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X