ಜುಮ್ಮು ಕಾಶ್ಮೀರದಲ್ಲಿ ಮಹಿಳೆಯ ಹೆರಿಗೆ ಮಾಡಿಸಲು ವೈದ್ಯರಿಗೆ ಸಹಾಯ ಮಾಡಿದ್ದು ವಾಟ್ಸಾಪ್!

ಹಿಮಪಾತದಿಂದ ಗ್ರಾಮಕ್ಕೆ ಸಂಪರ್ಕ ಕಡಿತವಾಗಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ವಾಟ್ಸಾಪ್ ಕರೆ ಸಹಾಯ ಮಾಡಿದೆ.

ಶ್ರೀನಗರ, ಫೆಬ್ರವರಿ. 12: ಜಮ್ಮು ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ದೂರದ ಕುಗ್ರಾಮಗಳ ಸ್ಥಿತಿ ತೀರ ಕೆಟ್ಟದಾಗಿದೆ. ಇಂತಹ ಸ್ಥಿತಿಯಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸಹಾಯಕವಾಗಿ ನಿಂತಿದ್ದು ವಾಟ್ಸಾಪ್.

ಹೌದು, ಜಮ್ಮು ಮತ್ತು ಕಾಶ್ಮೀರದ ದೂರದ ಕೆರಾನ್‌ನಲ್ಲಿ ಹೆರಿಗೆ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಗೆ ವಾಟ್ಸಾಪ್ ಕರೆ ಮೂಲಕ ಕ ಆರೋಗ್ಯವಂತ ಮಗುವಿಗೆ ಜನ್ಮ ನೀಡುವಲ್ಲಿ ವೈದ್ಯರು ಸಹಾಯ ಮಾಡಿದ್ದಾರೆ. ಮೊದಲೇ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದ ಮಹಿಳೆಯ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ.

"ಶುಕ್ರವಾರ ರಾತ್ರಿ, ಎಕ್ಲಾಂಪ್ಸಿಯಾ, ದೀರ್ಘಕಾಲದ ಹೆರಿಗೆ ಮತ್ತು ಎಪಿಸಿಯೊಟೊಮಿಯಿಂದ ಬಳಲುತ್ತಿದ್ದ ಮಹಿಳೆಗೆ ಹೆರಿಗೆ ನೋವು ಶುರುವಾಗಿದೆ. ಇಂತಹ ಸಂಕೀರ್ಣವಾದ ಹೆರಿಗೆಯ ಇತಿಹಾಸ ಹೊಂದಿರುವ ಮಹಿಳೆ ಕೆರಾನ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು" ಎಂದು ಕ್ರಾಲ್ಪೋರಾದ ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ. ಮೀರ್ ಮೊಹಮ್ಮದ್ ಶಾಫಿ ಹೇಳಿದರು.

Doctors Use WhatsApp call To Deliver Baby In Jammu And Kashmir

ಚಳಿಗಾಲದಲ್ಲಿ ಕುಪ್ವಾರ ಜಿಲ್ಲೆಯ ಉಳಿದ ಭಾಗಗಳಿಗೂ ಕೆರಾನ್ ಗ್ರಾಮದಕ್ಕೂ ಸಂಪರ್ಕ ಕಡಿತಗೊಂಡಿದ್ದರಿಂದ ರೋಗಿಯನ್ನು ಹೆರಿಗೆ ಸೌಲಭ್ಯವಿರುವ ಆಸ್ಪತ್ರೆಗೆ ಕರೆದೊಯ್ಯಲು ತುಂಬಾ ಸಮಸ್ಯೆಯಾಗಿದೆ. ಗುರುವಾರ ಮತ್ತು ಶುಕ್ರವಾರ ಸುರಿದ ನಿರಂತರ ಹಿಮಪಾತದಿಂದ ವೈದ್ಯಕೀಯ ಅಧಿಕಾರಿಗಳು ಮಹಿಳೆಯನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಆಗಿಲ್ಲ. ಹೀಗಾಗಿ ಪರ್ಯಾಯ ಮಾರ್ಗಗಳನ್ನು ಹುಡುಕುವುದು ಆಸ್ಪತ್ರೆ ಸಿಬ್ಬಂದಿಗೆ ಆನಿವಾರ್ಯವಾಗಿತ್ತು.

ಇಂತಹ ಸ್ಥಿತಿಯಲ್ಲಿ ಕ್ರಾಲ್ಪೋರಾ ಉಪಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗತಜ್ಞ ಡಾ.ಪರ್ವೈಜ್ ಅವರು ಕೆರಾನ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ.ಅರ್ಷದ್ ಸೋಫಿ ಮತ್ತು ಅವರ ಅರೆವೈದ್ಯಕೀಯ ಸಿಬ್ಬಂದಿಗೆ ಮಗುವನ್ನು ಹೆರಿಗೆ ಮಾಡುವ ಕಾರ್ಯವಿಧಾನದ ಕುರಿತು ವಾಟ್ಸಾಪ್ ಕರೆ ಮೂಲಕ ಮಾರ್ಗದರ್ಶನ ನೀಡಿದ್ದಾರೆ.

Doctors Use WhatsApp call To Deliver Baby In Jammu And Kashmir

"ರೋಗಿಯನ್ನು ಹೆರಿಗೆಗೆ ಕರೆದುಕೊಂಡು ಹೋಗಲಾಯಿ. ಆರು ಗಂಟೆಗಳ ನಂತರ ಆರೋಗ್ಯವಂತ ಹೆಣ್ಣು ಮಗು ಜನಿಸಿತು. ಪ್ರಸ್ತುತ ಮಗು ಮತ್ತು ತಾಯಿ ಇಬ್ಬರೂ ಆಸ್ಪತ್ರೆ ನಿಗಾ ಘಟಕದಲ್ಲಿದ್ದಾರೆ. ಇಬ್ಬರು ಆರೋಗ್ಯವಾಗಿದ್ದಾರೆ" ಎಂದು ಡಾ. ಮೀರ್ ಮೊಹಮ್ಮದ್ ಶಫಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+