ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿಗೆ 'ರಾವಣ'ನ ರೀತಿ 10 ತಲೆಗಳಿವೆಯೇ ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ್ ಖರ್ಗೆ

|
Google Oneindia Kannada News

ಗಾಂಧಿನಗರ, ನವೆಂಬರ್ 29: ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರದ ಅಖಾಡದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೀಡಿದ ಒಂದೇ ಒಂದು ಹೇಳಿಕೆ ವಿವಾದದ ಕಿಚ್ಚು ಹೊತ್ತಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಗೇನು "ರಾವಣ"ನ ರೀತಿಯಲ್ಲಿ 10 ತೆಲೆಗಳಿವೆಯೇ ಎಂದು ಮಲ್ಲಿಕಾರ್ಜುನ್ ಖರ್ಗೆ ಪ್ರಶ್ನೆ ಮಾಡಿರುವುದನ್ನೇ ಬಿಜೆಪಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ. "ಗುಜರಾತ್ ಮಗನನ್ನು ಖರ್ಗೆ ಅವಮಾನಿಸಿದ್ದಾರೆ" ಎಂದು ಬಿಜೆಪಿ ಆರೋಪಿಸುತ್ತಿದೆ.

ಸೂರತ್‌ನಲ್ಲಿ ಆಪ್ ರೋಡ್ ಶೋ ಮೇಲೆ ಕಲ್ಲುತೂರಾಟ!ಸೂರತ್‌ನಲ್ಲಿ ಆಪ್ ರೋಡ್ ಶೋ ಮೇಲೆ ಕಲ್ಲುತೂರಾಟ!

ಅಹಮದಾಬಾದ್‌ನಲ್ಲಿ ನಡೆದ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, "ನರೇಂದ್ರ ಮೋದಿ ಜೀ ನೀವು ಪ್ರಧಾನಮಂತ್ರಿ. ಆದರೆ ಅವರು ತಮ್ಮ ಕೆಲಸವನ್ನೇ ಮರೆತು, ನಿಗಮ ಚುನಾವಣೆಗಳು, ಶಾಸಕರ ಚುನಾವಣೆ, ಸಂಸದರ ಚುನಾವಣೆ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಪ್ರಚಾರ ಮಾಡುತ್ತಾರೆ. ಎಲ್ಲಾ ಸ್ಥಳಗಳಲ್ಲಿ ಅವರು ತಮ್ಮ ಬಗ್ಗೆಯೇ ಮಾತನಾಡುತ್ತಾರೆ," ಎಂದು ಟೀಕಿಸಿದರು.

ಎಷ್ಟು ಬಾರಿ ನಿಮ್ಮ ಮುಖ ನೋಡಿ ಮತ ಹಾಕುವುದು?

ಎಷ್ಟು ಬಾರಿ ನಿಮ್ಮ ಮುಖ ನೋಡಿ ಮತ ಹಾಕುವುದು?

"ನೀವು ಬೇರೆಯವರನ್ನು ನೋಡಬೇಕಾಗಿಲ್ಲ, ನರೇಂದ್ರ ಮೋದಿಯವರನ್ನು ನೋಡಿ ಮತ್ತು ಮತ ಚಲಾಯಿಸಿ ಎಂದು ಅವರು ಹೇಳುತ್ತಾರೆ. ನಿಮ್ಮ ಮುಖವನ್ನು ನಾವು ಎಷ್ಟು ಬಾರಿ ನೋಡಬೇಕು? ನೀವು ಎಷ್ಟು ರೂಪಗಳನ್ನು ಹೊಂದಿದ್ದೀರಿ? ನೀವು ರಾಣಣನ ರೀತಿ 100 ತಲೆಗಳನ್ನು ಹೊಂದಿದ್ದೀರಾ?," ಎಂದು ಮಲ್ಲಿಕಾರ್ಜುನ್ ಖರ್ಗೆ ಪ್ರಶ್ನೆ ಮಾಡಿದರು. ಈ ವೇಳೆ ನೆರೆದಿದ್ದ ಜನರು ನಗುನಗುತ್ತಾ ಚಪ್ಪಾಳೆ ತಟ್ಟಿದರು.

ಪ್ರತಿಯೊಬ್ಬ ಅಭ್ಯರ್ಥಿಯ ಮತಯಾಚನೆಗೆ ಮೋದಿಯೇ ಮಂತ್ರ!

ಪ್ರತಿಯೊಬ್ಬ ಅಭ್ಯರ್ಥಿಯ ಮತಯಾಚನೆಗೆ ಮೋದಿಯೇ ಮಂತ್ರ!

ದೇಶದಲ್ಲಿ ನಡೆಯುವ ಪ್ರತಿಯೊಂದು ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರಿನಲ್ಲೇ ಮತಯಾಚನೆ ಮಾಡುತ್ತಾರೆ. "ಮೋದಿ ಹೆಸರಿನಲ್ಲಿ ಮತಗಳನ್ನು ಕೇಳುವುದನ್ನು ನಾನು ನೋಡುತ್ತಿದ್ದೇನೆ, ಅದು ಪುರಸಭೆಯ ಚುನಾವಣೆ ಆಗಿರಲಿ, ನಿಗಮ ಚುನಾವಣೆಗಳೇ ಆಗಿರಲಿ ಅಥವಾ ರಾಜ್ಯ ಮಟ್ಟದ ಚುನಾವಣೆಗಳೇ ಆಗಿರಲಿ. ಅಭ್ಯರ್ಥಿಯ ಹೆಸರಿನಲ್ಲಿ ಮತಗಳನ್ನು ಕೇಳಿ. ಮೋದಿ ಬಂದು ಪುರಸಭೆಯಲ್ಲಿ ಕೆಲಸ ಮಾಡಲು ಹೋಗುತ್ತಾರೆಯೇ? ನಿಮ್ಮ ಅಗತ್ಯದ ಸಮಯದಲ್ಲಿ ಅವರು ನಿಮಗೆ ಸಹಾಯ ಮಾಡುತ್ತಾರೆಯೇ," ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಪ್ರಶ್ನೆ ಮಾಡಿದರು.

ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಗೆ ಬಿಜೆಪಿ ನಿಗಿನಿಗಿ ಕೆಂಡ

ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಗೆ ಬಿಜೆಪಿ ನಿಗಿನಿಗಿ ಕೆಂಡ

ಗುಜರಾತ್ ಚುನಾವಣೆಯ ಬಿಸಿಯನ್ನು ತಡೆದುಕೊಳ್ಳಲಾಗದೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ತಮ್ಮ ಮಾತುಗಳ ಮೇಲೆ ನಿಯಂತ್ರಣ ಕಳೆದುಕೊಂಡು ಪ್ರಧಾನಿ ನರೇಂದ್ರ ಮೋದಿ ಅನ್ನು ರಾವಣ ಎಂದು ಕರೆಯುತ್ತಿದ್ದಾರೆ. "ಮೌಟ್ ಕಾ ಸೌದಾಗರ್" ನಿಂದ "ರಾವಣ"ನವರೆಗೆ, ಕಾಂಗ್ರೆಸ್ ಗುಜರಾತ್ ಮತ್ತು ಅದರ ಮಗನನ್ನು ಅವಮಾನಿಸುವುದನ್ನು ಮುಂದುವರೆಸಿದೆ," ಎಂದು ಮಾಳ್ವಿಯಾ ಬರೆದಿದ್ದಾರೆ.

ಕಳೆದ 2007ರ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಯವರ ವಿವಾದಾತ್ಮಕ "ಮೌಟ್ ಕಾ ಸೌದಾಗರ್ (ಮರ್ಚೆಂಟ್ ಆಫ್ ಡೆತ್)" ಕಾಮೆಂಟ್ ಅನ್ನು ಈ ಟ್ವೀಟ್ ಜೊತೆಗೆ ಉಲ್ಲೇಖಿಸಲಾಗಿದೆ.

ಗುಜರಾತ್‌ನಲ್ಲಿ ಮತದಾನಕ್ಕೆ ದಿನಗಣನೆ ಪ್ರಾರಂಭ

ಗುಜರಾತ್‌ನಲ್ಲಿ ಮತದಾನಕ್ಕೆ ದಿನಗಣನೆ ಪ್ರಾರಂಭ

ಗುಜರಾತ್‌ನಲ್ಲಿ ಒಟ್ಟು ಎರಡು ಹಂತಗಳಲ್ಲಿ 182 ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 89 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 5ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 14 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 15 ನಾಮಪತ್ರ ಪರಿಶೀಲನೆ, ನವೆಂಬರ್ 17 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿತ್ತು. ಡಿಸೆಂಬರ್ 1ರಂದು ಮೊದಲ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.

ಗುಜರಾತ್‌ನ 93 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 10ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 18ರಂದು ನಾಮಪತ್ರ ಪರಿಶೀಲನೆ, ನವೆಂಬರ್ 21ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. ಡಿಸೆಂಬರ್ 5ರಂದು ಎರಡನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಅಂತಿಮವಾಗಿ ಡಿಸೆಂಬರ್ 8ರಂದು 182 ವಿಇಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.

English summary
Do You Have 100 Heads Like Ravana?: Mallikarjun Kharge's controversial Remarks On PM Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X