ಕೊರೊನಾ ಲಸಿಕೆಯಿಂದ ಮನುಷ್ಯನ ಡಿಎನ್‌ಎ ರಚನೆ ಬದಲಾಗುತ್ತಾ?
ನವದೆಹಲಿ, ಜುಲೈ 27: ಕೊರೊನಾ ಲಸಿಕೆ ಪಡೆದುಕೊಂಡರೆ ಮನುಷ್ಯನ ಡಿಎನ್‌ಎ ರಚನೆಯೇ ಬದಲಾಗುತ್ತದೆ, ಜೊತೆಗೆ ಕೃತಕ ಬುದ್ಧಿಮತ್ತೆಗೂ ಕೂಡ ಇದನ್ನು ತಳುಕುಹಾಕಲಾಗಿದೆ. ಈ ಕುರಿತು ಸಾಕಷ್ಟು ವಿಷಯಗಳು ಫೇಸ್‌ಬುಕ್ ಸೇರಿ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Recommended Video
ಅಮೆರಿಕದ ತಜ್ಞ ಮೂಳೆ ವೈದ್ಯ ಕೆರ್ರಿ ಮೇಡೇಜ್ ಎಂಬುವವರು ಈ ರೀತಿ ಹೇಳಿಕೆಯನ್ನು ನೀಡುತ್ತಿದ್ದಾರೆ.ಇನ್ನೊಂದು ಸುದ್ದಿ ಏನೆಂದರೆ, ಕರೊನಾ ಲಸಿಕೆಯಿಂದ 7 ಲಕ್ಷ ಜನರಿಗೆ ಅಡ್ಡ ಪರಿಣಾಮ ಉಂಟಾಗಲಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇನ್ನು ಮುಂದುವರಿದು 7 ಲಕ್ಷ ಜನ ಸಾಯಲಿದ್ದಾರೆ ಎಂದೇ ವದಂತಿ ಹಬ್ಬಿಸಲಾಗುತ್ತಿದೆ.
ಇದರ ನಡುವೆಯೇ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಫೇಸ್‌ಬುಕ್, ವಾಟ್ಸ್ಯಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಕ್ಸ್‌ಫರ್ಡ್ ಲಸಿಕೆ ಫಲಿತಾಂಶ ಘೋಷಣೆಯಾದ ಬಳಿಕ ಈ ಸುದ್ದಿಗೆ ಭಾರಿ ಬಲ ಬಂದಂತಾಗಿದೆ.
ಆಕ್ಸ್‌ಫರ್ಡ್ ಲಸಿಕೆಗೆ AZD1222 ಎಂಬ ಸಂಕೇತಾಕ್ಷರ ನೀಡಲಾಗಿದೆ. ಇದನ್ನೂ ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಪರಿಚಯಿಸಲಾಗುತ್ತದೆ ಅಥವಾ ಬಿಡುಗಡೆ ಮಾಡಲಾಗುತ್ತದೆ. ಡಿಸೆಂಬರ್ ವೇಳೆಗೆ 10 ಕೋಟಿ ಡೋಸ್ ಉತ್ಪಾದಿಸುವ ಗುರಿ ಹೊಂದಲಾಗಿದೆ.
ಇನ್ನೊಂದು ಮುಖ್ಯ ವಿಷಯವೆಂದರೆ, ಆಫ್ರಿಕಾ ರಾಷ್ಟ್ರಗಳಿಗೆ 2-3 ಡಾಲರ್ಗೆ ಪೂರೈಸಲಾಗುತ್ತದೆ ಅಂದರೆ 150 ರಿಂದ 250 ರೂ.ಗೆ ಅಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.
ಔಷಧ ತಯಾರಿಕಾ ಘಟಕವನ್ನು ಲಸಿಕೆ ತಯಾರಿಕೆಗಾಗಿ ಸುಸ್ಥಿತಿಯಲ್ಲಿಡಲು ಈಗಾಗಲೇ ಉತ್ಪಾದನೆ ನಡೆಸಲಾಗುತ್ತಿದೆ. ಇದರ ಉತ್ಪಾದನೆ ವೆಚ್ಚ ಸದ್ಯಕ್ಕೆ 1,500 ಕೋಟಿಗೂ ಅಧಿಕವಾಗಿದೆ. ಒಂದು ವೇಳೆ ಲಸಿಕೆ ಯಶಸ್ವಿಯಾಗದಿದ್ದಲ್ಲಿ ಈಗಾಗಲೇ ಉತ್ಪಾದಿಸಿರುವ, ಇದಕ್ಕೆ ತೊಡಗಿಸಿರುವ ಮೊತ್ತ ನಷ್ಟವಾಗಲಿದೆ ಎಂದು ಪೂನಾವಾಲಾ ಹೇಳಿದ್ದಾರೆ.

ಯಾವುದೇ ಆಧಾರಗಳಿಲ್ಲ
ಇವೆರಡೂ ಸುದ್ದಿಗಳಿಗೆ ಯಾವುದೇ ದಾಖಲೆ, ಆಧಾರಗಳಿಲ್ಲ ಎಂದು ತಜ್ಞರು ಹೇಳಿದ್ದಾರೆ. ಏಪ್ರಿಲ್ನಲ್ಲಿ ನಡೆದಿದ್ದ ಸಂದರ್ಶನದ ಆಯ್ದ ಭಾಗವನ್ನು ತಿರುಚಿ ಈ ರೀತಿಯಾಗಿ ಬಳಸಿಕೊಳ್ಳಲಾಗಿದೆ. ಕೊರೊನಾ ಲಸಿಕೆ ಮಾನವ ಪ್ರಯೋಗಕ್ಕೆ ಸಂಪೂರ್ಣ ಸುರಕ್ಷಿತವಾಗಿರಲಿದೆ. ಇದು ಸಂಶೋಧನೆಯಿಂದ ಗೊತ್ತಾಗಿದೆ ಎಂದು ಗೇಟ್ಸ್ ಪ್ರತಿಷ್ಠಾನ ಸ್ಪಷ್ಟನೆ ನೀಡಿದೆ.

ಮೈಕ್ರೋಚಿಪ್ ಇಂಪ್ಲಾಂಡ್ ಮಾಡುತ್ತಿದ್ದಾರೆ
ಮೈಕ್ರೋಸಾಫ್ಟ್ನವರು ಕೊರೊನಾ ಲಸಿಕೆ ಮೂಲಕ ಮೈಕ್ರೋಚಿಪ್ಗಳನ್ನು ಮಾನವ ದೇಹದಲ್ಲಿ ಇಂಪ್ಲಾಂಟ್ ಮಾಡುತ್ತಿದ್ದಾರೆ ಎಂದೂ ವದಂತಿ ಹಬ್ಬಿಸಲಾಗುತ್ತಿದೆ. ಇದನ್ನು ಭಾರತದಲ್ಲಿ 2000 ರೂ. ಹೊಸ ನೋಟು ಬಿಡುಗಡೆಯಾದಾಗ ಅದರಲ್ಲಿ ಮೈಕ್ರೋಚಿಪ್ ಅಳವಡಿಸಲಾಗಿದೆ ಎಂಬ ವದಂತಿ ಹಬ್ಬಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆಕ್ಸ್‌ಫರ್ಡ್ ವಿವಿ ಜತೆಗೆ ಕೈಜೋಡಿಸಿರುವ ಆಸ್ಟ್ರಾಜೆನೆಕಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಪುಣೆಯ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆ ಉತ್ಪಾದಿಸಿದೆ. ಇದರ ಅಧಿಕೃತ ಬಳಕೆಗೂ ಮುನ್ನ ಅಗತ್ಯ ಪರವಾನಗಿ ಪಡೆದು ಭಾರತದಲ್ಲೂ 5,000 ಜನರ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಸಲಾಗುತ್ತದೆ. ಬಳಿಕ ಬಳಕೆಗೆ ಮುಕ್ತಗೊಳಿಸಲಾಗುತ್ತದೆ.

ವರ್ಷಾಂತ್ಯಕ್ಕೆ ಲಸಿಕೆ ಲಭ್ಯ
ಕೊರೊನಾ ಲಸಿಕೆ ಸಂಶೋಧನೆ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ವರ್ಷಾಂತ್ಯಕ್ಕೆ ರೋಗಿಗಳ ಬಳಕೆಗೆ ಮುಕ್ತವಾಗುವ ಎಲ್ಲ ಸಾಧ್ಯತೆಗಳು ಇವೆ. ಜತೆಗೆ, ಭಾರಿ ಭರವಸೆಯನ್ನು ಮೂಡಿಸಿವೆ. ಭಾರಿ ಭರವಸೆ ಮೂಡಿಸಿರುವ ಆಕ್ಸ್‌ಫರ್ಡ್ ವಿವಿ ಲಸಿಕೆಯು ಒಂದು ಮತ್ತು ಎರಡನೇ ಹಂತದ ಪರೀಕ್ಷೆಯಲ್ಲಿ ಪಾಸಾಗಿದೆ. ಇದೇ ಲಸಿಕೆಯನ್ನು ತುರ್ತು ಬಳಕೆಗಾಗಿ 20- 30 ಲಕ್ಷ ಡೋಸ್ ಸಿದ್ಧಪಡಿಸಿಕೊಳ್ಳಲಾಗಿದೆ.

ಆಕ್ಸ್‌ಫರ್ಡ್ ವಿವಿ ಲಸಿಕೆ ಸುರಕ್ಷಿತವಾಗಿದೆ
ಆಕ್ಸ್‌ಫರ್ಡ್ ವಿವಿ ಲಸಿಕೆಯಂತೂ ಮಾನವರ ಬಳಕೆಗೆ ಸುರಕ್ಷಿತವಾಗಿದೆ ಹಾಗೂ ಪ್ರತಿರೋಧ ಶಕ್ತಿಯನ್ನು ಉಂಟು ಮಾಡುತ್ತದೆ ಎಂಬುದು ಸಾಬೀತಾಗಿದೆ. ಇನ್ನು, ಅಮೆರಿಕದ ಮಾಡೆರ್ನಾ ಸಂಸ್ಥೆ ಕೂಡ ಮಾನವರ ಮೇಲೆ ಮೂರನೇ ಹಂತದ ಪ್ರಯೋಗದಲ್ಲಿ ತೊಡಗಿದೆ.
ಭಾರತದಲ್ಲೂ ಭಾರತ್ ಬಯೋಟೆಕ್ನ ಕೊವಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಶುರುವಾಗಿದೆ. ಒಟ್ಟಾರೆ ಹೇಳುವುದಾದರೆ, ಜಗತ್ತಿನಾದ್ಯಂತ 20ಕ್ಕೂ ಅಧಿಕ ಲಸಿಕೆಗಳು ಕ್ಲಿನಿಕಲ್ ಟ್ರಯಲ್ ಹಂತದಲ್ಲಿವೆ. ಹೊಸ ಭರವಸೆಗೆ ಕಾರಣವಾಗಿವೆ.












Click it and Unblock the Notifications