• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರುಣಾನಿಧಿ ನಿಧನ: ಜಾತ್ಯತೀತವಾಗಿ ಸಾಂತ್ವನದಲ್ಲೂ ಶಕ್ತಿಪ್ರದರ್ಶನ ಮಾಡಿದ ಟ್ವಿಟ್ಟಿಗರು

|

ತಮಿಳಿಗರ ಅಪ್ಪಟ ಮತ್ತು ಕುರುಡು ಭಾಷಾಭಿಮಾನದ ಸಾಕಷ್ಟು ಉದಾಹರಣೆಗಳನ್ನು ನೋಡಿದ್ದೇವೆ, ಓದಿದ್ದೇವೆ. ಆಗಸ್ಟ್ ಏಳರಂದು ನಿಧನರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ಸಾಂತ್ವನದ ವಿಚಾರದಲ್ಲಿ ಜಾತ್ಯಾತೀತವಾಗಿ ಮತ್ತೆ ತಮಿಳರು ತಮ್ಮ ಅಭಿಮಾನವನ್ನು ಜಗತ್ತಿಗೆ ಸಾರಿದ್ದಾರೆ.

ದಕ್ಷಿಣದ ಪ್ರಮುಖ ನಗರಗಳು ಸೇರಿದಂತೆ, ಭಾರತ ಮತ್ತು ವಿಶ್ವದಲ್ಲಿ ಕರುಣಾನಿಧಿ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ. ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಚೆನ್ನೈಗೆ ಭೇಟಿ ನೀಡಿದ ಸಂದರ್ಭದಲ್ಲಿ ' ಗೋಬ್ಯಾಕ್ ಮೋದಿ' ಹ್ಯಾಷ್ ಟ್ಯಾಗ್ ವಿಶ್ವದಲ್ಲೇ ಟ್ರೆಂಡಿಂಗ್ ನಲ್ಲಿತ್ತು.

'ಕೊನೆಯ ಬಾರಿ ಅಪ್ಪ ಎಂದು ಕರೆಯಲೇ?' ಕರುಣಾನಿಧಿಗೆ ಸ್ಟಾಲಿನ್ ಭಾವುಕ ಪತ್ರ!

ಕಳೆದ ಕೆಲವು ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವಯೋವೃದ್ದ ಮುಖಂಡ ಕರುಣಾನಿಧಿಯವರು ಸಾವನ್ನಪ್ಪಿದ್ದಾರೆಂದು, ಚೆನ್ನೈನ ಕಾವೇರಿ ಆಸ್ಪತ್ರೆ ಅಧಿಕೃತವಾಗಿ ಆಗಸ್ಟ್ ಏಳರ ಸಂಜೆ ಪ್ರಕಟಣೆ ಹೊರಡಿಸಿತ್ತು.

ಆ ಮೂಲಕ, ಕಳೆದ ಒಂದೂವರೆ ವರ್ಷಗಳಲ್ಲಿ ತಮಿಳುನಾಡಿನ ಅತ್ಯಂತ ಜನಪ್ರಿಯ ರಾಜಕೀಯ ಮುಖಂಡರು ಮತ್ತು ಮುಖ್ಯವಾಹಿನಿಯಲ್ಲಿದ್ದ (ಜಯಲಲಿತಾ, ಕರುಣಾನಿಧಿ) ಇಬ್ಬರು ಮುಖಂಡರನ್ನು ದೇಶ ಕಳೆದುಕೊಂಡಿದೆ.

LIVE: ತಮಿಳರ ಕಣ್ಮಣಿ ಕರುಣಾನಿಧಿ ಅಂತಿಮ ವಿದಾಯಕ್ಕೆ ಸಿದ್ಧತೆ

ಇನ್ನು, ಈ ಇಬ್ಬರು ಮುಖಂಡರ ಪಕ್ಷ ಮತ್ತು ಅದಕ್ಕೆ ಉತ್ತರಾಧಿಕಾರಿ ಯಾರು? ಜಯಲಲಿತಾ ಅವರಿಗೆ ನಾವೇ ಎಲ್ಲಾ ಎಂದು ಎಐಎಡಿಎಂಕೆಯಲ್ಲಿ ಹಲವು ಬಣಗಳು, ಡಿಎಂಕೆಗೆ ಒಂದೋ ಸ್ಟಾಲಿನ್ ಇಲ್ಲವೋ ಅಳಗಿರಿ. ಕರುಣಾನಿಧಿ ನಿಧನದ ಘೋಷಣೆಯಾದ ನಂತರ, ಕರುಣಾನಿಧಿ ಹ್ಯಾಷ್ ಟ್ಯಾಗ್ ವಿವಿಧ ಭಾಗಗಳಲ್ಲಿ ಹೇಗೆ ಟ್ರೆಂಡಿಂಗ್ ಆಗಿತ್ತು ( ಆಗಸ್ಟ್ ಏಳರಂದು ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ) ಬೆಂಗಳೂರು ಸೇರಿ?

ವಿಶ್ವದಲ್ಲೇ ಕರುಣಾ ಮತ್ತು ಅದಕ್ಕೆ ಸಂಬಂಧಪಟ್ಟ ಹ್ಯಾಷ್ ಟ್ಯಾಗ್ ಟಾಪ್

ವಿಶ್ವದಲ್ಲೇ ಕರುಣಾ ಮತ್ತು ಅದಕ್ಕೆ ಸಂಬಂಧಪಟ್ಟ ಹ್ಯಾಷ್ ಟ್ಯಾಗ್ ಟಾಪ್

ವಿಶ್ವದಲ್ಲೇ ಕರುಣಾನಿಧಿ ಮತ್ತು ಅದಕ್ಕೆ ಸಂಬಂಧಪಟ್ಟ ಹ್ಯಾಷ್ ಟ್ಯಾಗ್ ಟಾಪ್ ನಲ್ಲಿದ್ದವು. ಕರುಣಾನಿಧಿ, RIPKalaignar, ತಮಿಳುನಾಡು ಟ್ಯಾಗ್ ಗಳು ಟಾಪ್ ನಲ್ಲಿದ್ದವು. ಕೆಲವೊಂದು ಟ್ಯಾಗ್ ಗಳಲ್ಲಿನ activities ನಲವತ್ತು ಸಾವಿರಕ್ಕೂ ಹೆಚ್ಚು ಇದ್ದವು.

ಇಂಡಿಯಾ ಟ್ರೆಂಡಿಂಗ್ ನಲ್ಲೂ ಟಾಪ್

ಇಂಡಿಯಾ ಟ್ರೆಂಡಿಂಗ್ ನಲ್ಲೂ ಟಾಪ್

ಇನ್ನು ಕರುಣಾನಿಧಿ ಅವರ ನಿಧನದ ಸುದ್ದಿಗಳು, ಚರ್ಚೆಗಳು ಇಂಡಿಯಾ ಟ್ರೆಂಡಿಂಗ್ ನಲ್ಲೂ ಟಾಪ್ ನಲ್ಲಿದ್ದವು. ಟಾಪ್ ಟೆನ್ ಹ್ಯಾಷ್ ಟ್ಯಾಗ್ ಗಳಲ್ಲಿ ಒಂಬತ್ತು ಕರುಣಾನಿಧಿ ಕುರಿತ ಸುದ್ದಿಗಳೇ ಇದ್ದವು. ಕರುಣಾನಿಧಿ, RIPKalaignar, ಮರೀನಾ ಫಾರ್ ಕಲೈನಾರ್, ತಮಿಳುನಾಡು, ಗೋಪಾಲಪುರಂ, ಮರೀನಾ ಬೀಚ್, ತಮಿಳುನಾಡು ಸರಕಾರ, ಮದರಾಸು ಹೈಕೋರ್ಟ್ ಇವು ಟ್ರೆಂಡಿಂಗ್ ನಲ್ಲಿದ್ದವು.

ಕರುಣಾನಿಧಿ ನಿಧನ ಸುದ್ದಿಯನ್ನು ಕನ್ನಡ ದಿನಪತ್ರಿಕೆಗಳು ಹೀಗೆ ಕಂಡಿವೆ

ಹತ್ತಕ್ಕೆ ಹತ್ತೂ ಟ್ಯಾಗ್ ಗಳು ಕರುಣಾನಿಧಿಗೆ ಸಾವಿಗೆ ಸಂಬಂಧಪಟ್ಟದ್ದು

ಹತ್ತಕ್ಕೆ ಹತ್ತೂ ಟ್ಯಾಗ್ ಗಳು ಕರುಣಾನಿಧಿಗೆ ಸಾವಿಗೆ ಸಂಬಂಧಪಟ್ಟದ್ದು

ವಿಶ್ವ ಮತ್ತು ಭಾರತದಲ್ಲಿ ಕರುಣಾನಿಧಿ ಸುದ್ದಿ ಟ್ರೆಂಡಿಂಗ್ ನಲ್ಲಿ ಇದ್ದ ಮೇಲೆ ಚೆನ್ನೈನಲ್ಲಿ ಇರದೇ ಇರುತ್ತಾ.. ಹತ್ತಕ್ಕೆ ಹತ್ತೂ ಟ್ಯಾಗ್ ಗಳು ಕರುಣಾನಿಧಿಗೆ ಸಾವಿಗೆ ಸಂಬಂಧಪಟ್ಟದಾಗಿತ್ತು. ಕರುಣಾನಿಧಿ, RIPKalaignar ಜೊತೆ ಅಣ್ಣಾ, ಸ್ಟಾಲಿನ್ ಟ್ಯಾಗ್ ಗಳೂ ಟ್ರೆಂಡಿಂಗ್ ನಲ್ಲಿದ್ದವು.

ಬೆಂಗಳೂರು ಟ್ರೆಂಡಿಂಗ್ ನಲ್ಲೂ ಕರುಣಾನಿಧಿ ಸಾವಿನ ಸುದ್ದಿಯೇ

ಬೆಂಗಳೂರು ಟ್ರೆಂಡಿಂಗ್ ನಲ್ಲೂ ಕರುಣಾನಿಧಿ ಸಾವಿನ ಸುದ್ದಿಯೇ

ಹೆಚ್ಚಿನ ಸಂಖ್ಯೆಯಲ್ಲಿ ತಮಿಳರು ಇರುವ ಬೆಂಗಳೂರು ಟ್ರೆಂಡಿಂಗ್ ನಲ್ಲೂ ಕರುಣಾನಿಧಿ ಸಾವಿನ ಸುದ್ದಿಯೇ ಟಾಪ್ ನಲ್ಲಿದ್ದವು. ಇಲ್ಲೂ ಹತ್ತಕ್ಕೆ ಹತ್ತೂ ಕಲೈನಾರ್ ಕುರಿತಾದ ಸುದ್ದಿಗಳೇ. ಇತರ ಟ್ಯಾಗ್ ಗಳ ಜೊತೆ ಚೆನ್ನೈ, ಕಾವೇರಿ ಆಸ್ಪತ್ರೆ, ಗೋಪಾಲಪುರಂ (ಕರುಣಾನಿಧಿ ನಿವಾಸವಿರುವ ಸ್ಥಳ) ಟ್ಯಾಗ್ ಗಳೂ ಟಾಪ್ ನಲ್ಲಿದ್ದವು.

ಮುಂಬೈನ ಟಾಪ್ 10ಟ್ಯಾಗ್ ಗಳಲ್ಲಿ ಮೊದಲ 5ಟ್ಯಾಗ್ ಗಳು ಕರುಣಾನಿಧಿ

ಮುಂಬೈನ ಟಾಪ್ 10ಟ್ಯಾಗ್ ಗಳಲ್ಲಿ ಮೊದಲ 5ಟ್ಯಾಗ್ ಗಳು ಕರುಣಾನಿಧಿ

ಇನ್ನು ದೇಶದ ವಾಣಿಜ್ಯ ರಾಜಧಾನಿ ಮುಂಬೈನ ಟಾಪ್ ಟೆನ್ ಟ್ಯಾಗ್ ಗಳಲ್ಲಿ ಮೊದಲ ಐದು ಟ್ಯಾಗ್ ಗಳು ಕರುಣಾನಿಧಿ ಕುರಿತಾದದ್ದು. #KalaignarNoMore ಟ್ಯಾಗ್ ಕೂಡಾ ಟ್ರೆಂಡಿಂಗ್ ನಲ್ಲಿತ್ತು. ಹಿರಿಯ ಡಿಎಂಕೆ ನಾಯಕನ ನಿಧನಕ್ಕೆ ತಮಿಳುರು ಜಾತ್ಯಾತೀತವಾಗಿ ಕಂಬನಿ ಮಿಡಿದರು. ಆ ಮೂಲಕ, ತಮಿಳರು ತಮ್ಮ ಭಾಷಾಭಿಮಾನವನ್ನು ಮತ್ತೆ ಜಗತ್ತಿಗೆ ತೋರಿಸಿದರು.

English summary
DMK Chief and former CM of Tamilnadu M Karunanidhi death: Tamilians shown their unity in twitter, worldwide trending. Karunanidhi death related hashtag was trending worldwide, India, Chennai, Bengaluru and even in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X