• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೂತಾನ್‌ಗೆ 1.5 ಲಕ್ಷ ಕೋವಿಶೀಲ್ಡ್ ಲಸಿಕೆಯನ್ನ ಉಡುಗೊರೆ ನೀಡಿದ ಭಾರತ

|

ನವದೆಹಲಿ, ಜನವರಿ 20: ಸ್ವದೇಶಿ ನಿರ್ಮಿತ ಕೋವಿಡ್-19 ಲಸಿಕೆ ಕೋವಿಶೀಲ್ಡ್‌ನ 1.5 ಲಕ್ಷ ಡೋಸೇಜ್ ಲಸಿಕೆಯನ್ನು ಭಾರತವು ನೆರೆರಾಷ್ಟ್ರ ಭೂತಾನ್‌ಗೆ ಉಡುಗೊರೆಯಾಗಿ ನೀಡಿದೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಲಸಿಕೆಯನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ಮುಂಜಾನೆ ರವಾನಿಸಲಾಗಿದೆ.

ಭಾರತದಿಂದ ಆರು ದೇಶಗಳಿಗೆ ಕೋವಿಡ್ ಲಸಿಕೆ ಪೂರೈಕೆಭಾರತದಿಂದ ಆರು ದೇಶಗಳಿಗೆ ಕೋವಿಡ್ ಲಸಿಕೆ ಪೂರೈಕೆ

ಮೂಲಗಳ ಮಾಹಿತಿ ಪ್ರಕಾರ, 1,50,000 ಡೋಸ್‌ಗಳನ್ನು ಭೂತಾನ್‌ ರಾಜಧಾನಿ ಥಿಂಪುವಿಗೆ ನೇರವಾಗಿ ತಲುಪಿಸಲಾಗುವುದು. ಹೀಗೆ ಕೋವಿಡ್ ಲಸಿಕೆಗಳನ್ನು ಭಾರತ ಸರ್ಕಾರದ ಉಡುಗೊರೆಯಾಗಿ ಪಡೆದ ಮೊದಲ ದೇಶ ಭೂತಾನ್ ಆಗಿದೆ.

ಭಾರತ-ಭೂತಾನ್ ವಿಶೇಷ ಸಂಬಂಧಗಳಿಗೆ ಅನುಗುಣವಾಗಿ, ಕೋವಿಡ್-19 ನಿರ್ಬಂಧಗಳ ಹೊರತಾಗಿಯೂ, ಭಾರತವು ಭೂತಾನ್‌ಗೆ ನಿರಂತರ ವ್ಯಾಪಾರ ಮತ್ತು ಅಗತ್ಯ ವಸ್ತುಗಳನ್ನು ಪೂರೈಸುವುದನ್ನು ಖಾತ್ರಿಪಡಿಸಿತು.

ಭಾರತವು ಇಲ್ಲಿಯವರೆಗೆ ಅಗತ್ಯ ಔಷಧಿಗಳನ್ನು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಿದೆ. ಇದರಲ್ಲಿ ಪ್ಯಾರಾಸಿಟಮಾಲ್, ಹೈಡ್ರಾಕ್ಸಿಕ್ಲೋರೋಕ್ವಿನ್, ಪಿಪಿಇ ಕಿಟ್‌ಗಳು, ಎನ್ 95 ಮಾಸ್ಕ್‌ಗಳು, ಎಕ್ಸರೆ ಯಂತ್ರಗಳು ಮತ್ತು 2.8 ಕೋರ್‌ಗಿಂತ ಹೆಚ್ಚಿನ ಮೌಲ್ಯದ ಪರೀಕ್ಷಾ ಕಿಟ್‌ಗಳು ಭೂತಾನ್‌ಗೆ ನೀಡಲಾಗಿದೆ.

ಕೋವಿಡ್-19 ಕಷ್ಟದ ಸಂದರ್ಭದಲ್ಲೂ ವ್ಯಾಪಾರ ಮತ್ತು ಸಾಗಣೆಗೆ ಅನುಕೂಲವಾಗುವಂತೆ ಭೂತಾನ್ ಸರ್ಕಾರದ ಕೋರಿಕೆಯ ಮೇರೆಗೆ ಭಾರತವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇದರಲ್ಲಿ ತೋರ್ಶಾ ಟೀ ಗಾರ್ಡನ್ (ಭಾರತ) ಮತ್ತು ಅಹ್ಲೆ (ಭೂತಾನ್) ಮೂಲಕ ಹೊಸ ವ್ಯಾಪಾರ ಮಾರ್ಗವನ್ನು ತೆರೆಯಲಾಗಿದೆ. ನಾಗರ್ಕಟ, ಅಗರ್ತಲಾ, ಮತ್ತು ಪಾಂಡು ಮತ್ತು ಜೋಗಿಗೋಪಾ ನದಿ ಬಂದರುಗಳಲ್ಲಿ ಹೊಸ ವ್ಯಾಪಾರ ಕೇಂದ್ರಗಳು ಶೀಘ್ರದಲ್ಲೇ ಕಾರ್ಯನಿರ್ವಹಿಸಲಿವೆ ಎಂದು ಮೂಲಗಳು ತಿಳಿಸಿವೆ.

English summary
As a gift from India, the first consignment of 1.5 lakh doses of COVID-19 vaccine 'Covishield' was dispatched to Thimphu, Bhutan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X