Get Updates
Get notified of breaking news, exclusive insights, and must-see stories!

ಆಹಾರದ ಬಗ್ಗೆ ದೂರಿತ್ತು ವಜಾಗೊಂಡಿದ್ದ ಸೈನಿಕನ ಮಗ ಸಾವು

ಚಂಡೀಗಢ, ಜನವರಿ 18: ಸೇನೆಯಲ್ಲಿ ನೀಡಲಾಗುವ ಆಹಾರ ಕಳಪೆ ಮಟ್ಟದ್ದಾಗಿದೆ ಎಂದು ವಿಡಿಯೋ ಮಾಡಿ ಆರೋಪಿಸಿದ ಕಾರಣಕ್ಕೆ ಸೇವೆಯಿಂದ ವಜಾಗೊಂಡಿದ್ದ ಬಿಎಸ್‌ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರ ಮಗನ ಮೃತದೇಹ ಶುಕ್ರವಾರ ಆತನ ನಿವಾಸದಲ್ಲಿ ಪತ್ತೆಯಾಗಿದೆ.

ರೆವಾರಿ ಜಿಲ್ಲೆಯ ಶಾಂತಿ ವಿಹಾರದ ಮನೆಯಲ್ಲಿ ನೆಲೆಸಿದ್ದ 22 ವರ್ಷದ ರೋಹಿತ್ ತನಗೆ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

'ರೋಹಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕರೆ ಬಂದಿತ್ತು. ಘಟನಾ ಸ್ಥಳದಲ್ಲಿ ಒಳಗಿನಿಂದ ಬಾಗಿಲು ಹಾಕಿಕೊಂಡಿರುವುದು ಗಮನಕ್ಕೆ ಬಂದಿತು. ದೇಹವು ಹಾಸಿಗೆ ಮೇಲೆ ಬಿದ್ದಿತ್ತು. ಕೈಗಳಲ್ಲಿ ಪಿಸ್ತೂಲು ಇತ್ತು. ಆತನ ತಂದೆ ಕುಂಭ ಮೇಳದಲ್ಲಿ ಭಾಗವಹಿಸಲು ತೆರಳಿದ್ದಾರೆ. ಅವರಿಗೆ ಮಾಹಿತಿ ನೀಡಲಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

dismissed bsf jawan tej bahadur yadav complained about bad food son found dead

2017ರಲ್ಲಿ ತೇಜ್ ಬಹದ್ದೂರ್ ಯಾದವ್, ಪಾಕಿಸ್ತಾನದ ಗಡಿಭಾಗಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿನ ಭದ್ರತಾ ಪಡೆಗಳಿಗೆ ವಿತರಿಸಲಾಗುವ ಆಹಾರದ ಗುಣಮಟ್ಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು.

ಈ ವಿಡಿಯೋ ಒಂದೆಡೆ ಸೇನೆಯ ಬಗ್ಗೆ ಆಕ್ರೋಶ ವ್ಯಕ್ತವಾಗಲು ಕಾರಣವಾಗಿದ್ದರೆ, ತೇಜ್ ಬಹದ್ದೂರ್ ನಡೆದುಕೊಂಡ ರೀತಿ ಸಹ ಟೀಕೆಗೆ ಗುರಿಯಾಗಿತ್ತು.

ನಿಯಮಾವಳಿಗೆ ವಿರುದ್ಧವಾಗಿ ಕಾರ್ಯಾಚರಣೆ ನಡೆಸುವ ವೇಳೆ ಎರಡು ಮೊಬೈಲ್ ಫೋನ್‌ಗಳನ್ನು ಕೊಂಡೊಯ್ದಿದ್ದು ಮತ್ತು ಕಠಿಣ ಸೂಚನೆಯ ಹೊರತಾಗಿಯೂ, ಸಮವಸ್ತ್ರದಲ್ಲಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದು ತಪ್ಪು ಎಂದು ಪರಿಗಣಿಸಿದ್ದ ಸಮ್ಮರಿ ಸೆಕ್ಯುರಿಟಿ ಫೋರ್ಸ್ ಕೋರ್ಟ್, ಸೇನೆಯ ಆದೇಶಗಳನ್ನು ಕಡೆಗಣಿಸಿದ್ದಕ್ಕಾಗಿ ಸೇವೆಯಿಂದ ವಜಾಗೊಳಿಸಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+