ಹಲೋ ಮೋದಿ ಅವರೆ.. ನಾನು ಭಾರತಕ್ಕೆ ಬರಲು ಆಗುತ್ತಿಲ್ಲ ಕ್ಷಮಿಸಿ!

ಚಂದ್ರಯಾನ-3 ಯೋಜನೆ ಯಶಸ್ಸಿನ ಬೆನ್ನಲ್ಲೇ ಭಾರತ ಜಿ-20 ಸಮ್ಮೇಳನ (G20 summit)ಕ್ಕೆ ಅಬ್ಬರದ ಸಿದ್ಧತೆ ನಡೆಸಿದೆ. ಈ ಮೂಲಕ ಭಾರತದ ಕೀರ್ತಿ ಮತ್ತೊಮ್ಮೆ ಜಗತ್ತಿನಾದ್ಯಂತ ನಳನಳಿಸಲಿದೆ. ಆದರೆ ಈ ಸಂದರ್ಭದಲ್ಲೇ ಬಿಗ್ ಶಾಕ್ ಸಿಕ್ಕಿದೆ. ಅದು ರಷ್ಯಾ ಕಡೆಯಿಂದ ಅಂದರೆ ನೀವು ನಂಬಬೇಕು. ಹಾಗಾದರೆ ಏನದು ಶಾಕಿಂಗ್ ನ್ಯೂಸ್? ಬನ್ನಿ ತಿಳಿಯೋಣ.

ಭಾರತ ಮತ್ತು ರಷ್ಯಾ ಸಂಬಂಧ ಇಂದು ಅಥವಾ ನಿನ್ನೆಯದಲ್ಲ. ಶೀತಲ ಸಮರ ನಡೆದು, 1947ರ ನಂತರ ಮತ್ತೊಂದು ಮಹಾಯುದ್ಧಕ್ಕೆ ಸಿದ್ಧವಾಗಿದ್ದಾಗಲೂ ಭಾರತ ಬುದ್ಧಿವಂತರ ನಡೆ ಅನುಸರಿಸಿತ್ತು. ಅತ್ತ ಅಮೆರಿಕದ ವಿರೋಧ ಕಟ್ಟಿಕೊಳ್ಳದೆ, ಇತ್ತ ರಷ್ಯಾ ಜೊತೆ ಸ್ನೇಹ ಬಿಡದೆ ಭಾರತ ಇಬ್ಬರ ಜೊತೆಗೂ ಸಂಬಂಧ ಉಳಿಸಿಕೊಂಡಿತ್ತು. ಹೀಗಿದ್ದರೂ ಭಾರತದಲ್ಲಿ ನಡೆಯುತ್ತಿರುವ ಜಿ-20 ಸಮ್ಮೇಳನಕ್ಕೆ ಬರಲ್ಲ ಅಂತಾ ರಷ್ಯಾ ಅಧ್ಯಕ್ಷರು ಹೇಳಿದ್ದಾರೆ. ಅದು ಖುದ್ದಾಗಿ ಪ್ರಧಾನಿ ಮೋದಿ ಅವರಿಗೆ ದೂರವಾಣಿ ಕರೆ ಮಾಡಿದ್ದಾರಂತೆ ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್.

russian-president-vladimir-putin-spoke

ಭಾರತಕ್ಕೆ ಕರೆ ಮಾಡಿದ್ದು ಏಕೆ ರಷ್ಯಾ?

ಹೌದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಲ್ ಮಾಡಿ ಮಾತನಾಡಿದ್ದಾರೆ. ಈ ವೇಳೆ ಉಭಯ ನಾಯಕರು ದ್ವಿಪಕ್ಷೀಯ ಸಹಕಾರ ಸೇರಿದಂತೆ, ಎರಡೂ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಯಾಗಿಸಲು ಚರ್ಚಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಬ್ರಿಕ್ಸ್ ಶೃಂಗಸಭೆ ಸೇರಿ ಹಲವು ವಿಚಾರ ಚರ್ಚೆಯಲ್ಲಿ ಬಂದು ಹೋಗಿದೆ. ಆದ್ರೆ ಅಸಲಿ ವಿಚಾರ ಇದಲ್ಲ, ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಸಮ್ಮೇಳನಕ್ಕೆ ನಾನು ಬರ್ತಿಲ್ಲ ಅಂತಾ ರಷ್ಯಾ ಅಧ್ಯಕ್ಷರಾದ ಪುಟಿನ್ ಹೇಳಿದ್ದಾರೆ. ಹಾಗಾದರೆ ರಷ್ಯಾ ಅಧ್ಯಕ್ಷರು ಬರದೇ ಇದ್ದರೆ ಏನಾಗುತ್ತೆ? ಮುಂದೆ ಓದಿ.

ಭಾರತ & ರಷ್ಯಾ ಸ್ನೇಹ ಸಖತ್ ಗಟ್ಟಿ

ಅಂದಹಾಗೆ ಸೆಪ್ಟೆಂಬರ್ 9 & 10ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ, ತಾವು ಭಾಗವಹಿಸಲು ಸಾಧ್ಯವಾಗ್ತಿಲ್ಲ ಎಂದು ಪುಟಿನ್ ತಿಳಿಸಿದ್ದಾರೆ. ಹೀಗಾಗಿ ರಷ್ಯಾ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಬರುತ್ತಿದ್ದಾರೆ. ಪುಟಿನ್ ಈ ವಿಚಾರವನ್ನ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಪ್ರಧಾನಮಂತ್ರಿಗಳ ಕಚೇರಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಪಿಎಂ ಮೋದಿ ಅವರ ಮಾತುಕತೆಯ ಬಗ್ಗೆ ಮಾಹಿತಿ ನೀಡಿದೆ. ಹೀಗೆ ರಷ್ಯಾ ಅಧ್ಯಕ್ಷರು ತಾವು ಬರಲು ಆಗುತ್ತಿಲ್ಲ ಎಂಬ ವಿಚಾರ ಖುದ್ದಾಗಿ ದೂರವಾಣಿ ಕರೆ ಮಾಡಿ ಭಾರತಕ್ಕೆ ತಿಳಿಸಿದ್ದು, ಭಾರತದ ಜೊತೆಗಿನ ಸಂಬಂಧ ರಷ್ಯಾಗೆ ಎಷ್ಟು ಮುಖ್ಯ ಎಂಬುದು ಮತ್ತೊಮ್ಮೆ ಗೊತ್ತಾಗಿದೆ.

russian-president-vladimir-putin-spoke

ಜಿ-20 ರಾಷ್ಟ್ರಗಳೇ ಮುಂದಿನ ಭವಿಷ್ಯ!

ಇಲ್ಲಿ ಒಂದು ಮಾತನ್ನು ಹೇಳಬೇಕು ಜಿ-20 ರಾಷ್ಟ್ರಗಳ ಪಟ್ಟಿಯಲ್ಲಿನ ಬಹುತೇಕ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾಗಿವೆ. ಭಾರತ, ರಷ್ಯಾ, ಚೀನಾ, ಬ್ರೆಜಿಲ್ & ದಕ್ಷಿಣ ಆಫ್ರಿಕಾ ಇರುವ ಒಂದು ಶಕ್ತಿಶಾಲಿ ಗುಂಪು ಜಿ-20. ಇದೇ ಕಾರಣಕ್ಕೆ ಜಿ-20 ಶೃಂಗಸಭೆ ಬಗ್ಗೆ ಇಡೀ ಜಗತ್ತು ಕುತೂಹಲ ಹೊಂದಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ, ಭಾರತದ ಶಕ್ತಿಯನ್ನ ಮತ್ತೆ ಜಗತ್ತಿಗೆ ತೋರಿಸಲಿದೆ. ಹೀಗಾಗಿಯೇ ಭಾರತ ಕೂಡ ಜಿ-20 ಸಭೆಗಾಗಿ ಭಾರಿ ಸಿದ್ಧತೆ ನಡೆಸಿದೆ.

ಹೀಗೆ ಪುಟಿನ್ ಗೈರು ಹಾಜರಿ ಜಿ-20 ಶೃಂಗಸಭೆಗೆ ಆಘಾತ ನೀಡದೇ ಇದ್ದರೂ, ಮತ್ತೊಂದು ರೀತಿ ಸಂದೇಶ ನೀಡಿದಂತೆ ಕಾಣುತ್ತಿದೆ. ಭಾರತಕ್ಕೆ ಖುದ್ದಾಗಿ ಪುಟಿನ್ ಅವರು ದೂರವಾಣಿ ಕರೆ ಮಾಡಿರುವುದು ಮಹತ್ವ ಪಡೆದಿದೆ. ಈ ಮೂಲಕ ರಷ್ಯಾ ಮತ್ತು ಅಮೆರಿಕದ ಸ್ನೇಹವು ಅದೆಷ್ಟು ಗಟ್ಟಿ ಎಂಬುದನ್ನ ಮತ್ತೆ ತೋರಿಸಿದ್ದಾರೆ ಪುಟಿನ್. ಇದು ಮಾತ್ರವಲ್ಲ ಅಮೆರಿಕದ ವಿರುದ್ಧ ಪುಟಿನ್ ಪರೋಕ್ಷ ಸಂದೇಶವು ಇದರಲ್ಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದ್ದು, ತಮ್ಮ ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಹೊರಡಿಸಿರುವ ಬಂಧನ ವಾರಂಟ್‌ಗೆ ತೊಡೆತಟ್ಟಿದ್ದಾರೆ ವ್ಲಾದಿಮಿರ್ ಪುಟಿನ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+