ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು & 5 ಲಕ್ಷ ರೂಪಾಯಿ ದಂಡ!
ಹಲವು ಪ್ರಕರಣಗಳಲ್ಲಿ ಲಾಕ್ ಆಗಿರುವ ಮಾಜಿ ಗ್ಯಾಂಗ್‌ಸ್ಟರ್ ಹಾಗೂ ಹಾಲಿ ರಾಜಕಾರಣಿ ಮುಖ್ತಾರ್ ಅನ್ಸಾರಿಗೆ ಇವತ್ತು ದೊಡ್ಡ ಆಘಾತ ಸಿಕ್ಕಿದೆ. ಕೆಲ ತಿಂಗಳ ಹಿಂದೆ, ಇಂತಹದ್ದೇ ಆಘಾತ ಎದುರಿಸಿದ್ದ ಮುಖ್ತಾರ್ ಅನ್ಸಾರಿಗೆ ಮತ್ತೊಮ್ಮೆ ಶಾಕ್ ಸಿಕ್ಕಿದೆ ಹಾಗಾದ್ರೆ ಮುಖ್ತಾರ್ ಅನ್ಸಾರಿಗೆ ಇದೀಗ ಸಿಕ್ಕಿರುವ ಕಠಿಣ ಶಿಕ್ಷೆ ಏನು? 10 ವರ್ಷ ಜೈಲು ಪ್ರಕಟವಾಗಿದ್ದು ಏಕೆ?
ಹೌದು, ಮುಖ್ತಾರ್ ಅನ್ಸಾರಿಗೆ 10 ವರ್ಷಗಳ ಜೈಲು ಶಿಕ್ಷೆ ಸೇರಿದಂತೆ 5 ಲಕ್ಷ ದಂಡ ವಿಧಿಸಿದೆ ಗಾಜಿಪುರ ನ್ಯಾಯಾಲಯ. ಕಪಿಲ್ ದೇವ್ ಸಿಂಗ್ ಹತ್ಯೆ ಹಾಗೂ 2010ರ ಮಿರ್ ಹಸನ್ ಹತ್ಯೆ ಪ್ರಯತ್ನ ಸಂಬಂಧ ಈಗ ತೀರ್ಪು ನೀಡಲಾಗಿದೆ. ಈ ಮೂಲಕ ದಶಕದ ಹಿಂದೆ ಕೇಳಿಬಂದ ಆರೋಪಕ್ಕೆ ಈಗ ಶಿಕ್ಷೆ ಪ್ರಕಟವಾಗಿದೆ. ಹಾಗೇ ಮುಖ್ತಾರ್ ಅನ್ಸಾರಿ ವಿರುದ್ಧ ಈ ಮಹತ್ವದ ತೀರ್ಪು ಪ್ರಕಟವಾದ ನಂತರ, ದೇಶಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ. ಅನ್ಸಾರಿ ಮಾತ್ರ ಅಲ್ಲ ಆತನ ಸಹಚರನಿಗೆ ಕೂಡ ಇದೀಗ ದೊಡ್ಡ ಆಘಾತ ಸಿಕ್ಕಿದೆ.

ಅನ್ಸಾರಿ ಸಹಚರನಿಗೂ ಆಘಾತ!
ಅಂದಹಾಗೆ ಈಗ ಮುಖ್ತಾರ್ ಅನ್ಸಾರಿಗೆ 10 ವರ್ಷಗಳ ಜೈಲು ಶಿಕ್ಷೆ ಸೇರಿದಂತೆ 5 ಲಕ್ಷ ದಂಡ ವಿಧಿಸಿರುವ ನ್ಯಾಯಾಲಯ, ಅನ್ಸಾರಿ ಸಹಚರ ಸೋನು ಯಾದವ್‌ಗೂ ಜೈಲು ಶಿಕ್ಷೆ & ದಂಡ ವಿಧಿಸಿದೆ. ಈ ತೀರ್ಪು ಸೇರಿದಂತೆ ಸಾಲು ಸಾಲು ಶಿಕ್ಷೆಯನ್ನು ಈಗ ಅನ್ಸಾರಿ ಎದುರಿಸಿದ್ದು, ಮಾಡಿದ ತಪ್ಪಿಗೆ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದಾನೆ. ಇನ್ನು ಅನ್ಸಾರಿ ವಿರುದ್ಧ ಹೊರಬಿದ್ದ ಈ ತೀರ್ಪು ಸಂತ್ರಸ್ತರಿಗೆ ರಿಲೀಫ್ ನೀಡಿದೆ. ಮತ್ತೊಂದು ಕಡೆ ಎಲ್ಲ ಬೆಳವಣಿಗೆ ರಾಜಕೀಯವಾಗಿ ಸಂಚಲನ ಸೃಷ್ಟಿಸಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.
73.43 ರೂಪಾಯಿ ಲಾಕ್!
ಇನ್ನು ಕೆಲ ವಾರದ ಹಿಂದೆ ED ಕೂಡ ಇದೇ ಮುಖ್ತಾರ್ ಅನ್ಸಾರಿಗೆ ಸಂಬಂಧಿಸಿದ ಜಾಗಗಳ ಮೇಲೆ ದಾಳಿ ಮಾಡಿತ್ತು. ಈ ಮೂಲಕ ಮುಖ್ತಾರ್ ಅನ್ಸಾರಿಗೆ ಸೇರಿದ ಕಟ್ಟಡಗಳು & ಜಾಗ ವಶಕ್ಕೆ ಪಡೆಯಲಾಗಿತ್ತು. ಹಾಗೇ ಅಪಾರ ಸಂಪತ್ತು ಮುಟ್ಟುಗೋಲು ಹಾಕಿಕೊಂಡಿದೆ ಇಡಿ ಅದರ ಮೊತ್ತ ಸುಮಾರು 73.43 ರೂಪಾಯಿ ಎನ್ನಲಾಗುತ್ತಿದೆ. ಇಷ್ಟೆಲ್ಲ ಬೆಳವಣಿಗೆ ಮಧ್ಯೆ ಇದೀಗ ಮಹತ್ವದ ತೀರ್ಪು ಹೊರಬಿದ್ದಿದೆ. 2022ರ ಸೆಪ್ಟೆಂಬರ್ ನಂತರ ಮುಖ್ತಾರ್ ಅನ್ಸಾರಿ ಇದೇ ರೀತಿ ಸಾಲು ಸಾಲು ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವುದು ಗಮನ ಸೆಳೆದಿದೆ.












Click it and Unblock the Notifications