G20 Summit: ಸೌದಿ ದೊರೆ ಹೋಟೆಲ್‌ಗೆ ನುಗ್ಗಿದ ಅಮೆರಿಕ ಅಧ್ಯಕ್ಷರ ಕಾರು!
ಭಾರತದ ನೇತೃತ್ವದಲ್ಲಿ ಜಿ20 ಶೃಂಗಸಭೆ ಅದ್ಧೂರಿಯಾಗಿ ನೆರವೇರಿದ್ದು, ಇನ್ನೇನು ಕೆಲವೇ ಹೊತ್ತಲ್ಲಿ ಶೃಂಗಸಭೆಗೆ ತೆರೆ ಬೀಳಲಿದೆ. ಆದರೆ ಜಿ20 ಶೃಂಗಸಭೆ ಮುಕ್ತಾಯವಾಗುವ ಮುನ್ನ ಭದ್ರತೆ ವಿಚಾರದಲ್ಲಿ ದೊಡ್ಡ ಎಡವಟ್ಟು ಸಂಚಲನ ಸೃಷ್ಟಿಸಿದೆ. ಅಮೆರಿಕ ಅಧ್ಯಕ್ಷರ ಕಾರು ಚಾಲಕನ ವಶಕ್ಕೆ ಪಡೆದ ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹಾಗಾದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಗಿದ್ದೇನು? ಜಿ20 ಶೃಂಗಸಭೆಯ ಭದ್ರತೆಯಲ್ಲಿ ಎಡವಟ್ಟಾಯ್ತಾ?
ಭಾರತದಲ್ಲಿ ನಡೆದ 2023ನೇ ಸಾಲಿನ ಜಿ20 ಶೃಂಗಸಭೆ ಜಗತ್ತಿನಾದ್ಯಂತ ದೊಡ್ಡ ಸದ್ದನ್ನು ಮಾಡಿದೆ. ಅದರಲ್ಲೂ ಜಿ20 ಶೃಂಗಸಭೆಯ ಅದ್ಧೂರಿತನ ನೋಡಿ ಜಗತ್ತಿನ ಗಣ್ಯರು ಕೂಡ ಒಂದು ಕ್ಷಣ ಶಾಕ್ ಆಗಿದ್ದರು. ಹೀಗೆ ಎಲ್ಲರ ಮನಸ್ಸು ಗೆದ್ದಿರುವ ಜಿ20 ಶೃಂಗಸಭೆ ಇದೀಗ ಅದೊಂದು ವಿಚಾರಕ್ಕೆ ಸದ್ದು ಮಾಡ್ತಿದೆ. ಬೈಡನ್ ಬೆಂಗಾವಲು ಕಾರು ಚಾಲಕ ಮಾಡಿದ ಎಡವಟ್ಟಿನಿಂದ ಒಂದು ಕ್ಷಣ ಭದ್ರತಾ ಸಿಬ್ಬಂದಿಗೆ ಉಸಿರೇ ನಿಂತು ಹೋಗಿತ್ತು. ಅಷ್ಟಕ್ಕೂ ಆಗಿದ್ದಾದರೂ ಏನು? ಬೈಡನ್ ಕಾರು ಚಾಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದೇಕೆ? ಬನ್ನಿ ತಿಳಿಯೋಣ.

ಬೈಡನ್ ಕಾರು ಸೌದಿ ದೊರೆ ಹೋಟೆಲ್‌ಗೆ!
ಹೌದು, ಜಿ20 ಶೃಂಗಸಭೆಯಲ್ಲಿ ಎಡವಟ್ಟಾಗಿದೆ. ಯುಎಇ ರಾಜಕುಮಾರ ಉಳಿದುಕೊಂಡಿದ್ದ ನವದೆಹಲಿಯ ಹೋಟೆಲ್‌ಗೆ ಅಮೆರಿಕ ಅಧ್ಯಕ್ಷ ಬೈಡನ್ ಅವರ ಬೆಂಗಾವಲು ಕಾರು ದಿಢೀರ್ ಎಂಟ್ರಿ ಕೊಟ್ಟಿತ್ತು. ಈ ಮೂಲಕ ಭದ್ರತಾ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು, ತಕ್ಷಣವೇ ಅಲರ್ಟ್ ಆದ ಪೊಲೀಸರು ನಿರ್ಲಕ್ಷಿತ ಚಾಲನೆ ಆರೋಪದ ಮೇಲೆ ಬೈಡನ್ ಬೆಂಗಾವಲು ವಾಹನದ ಚಾಲಕನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಾಗಾದರೆ ಅಲ್ಲಿ ನಿಜವಾಗೂ ಆಗಿದ್ದೇನು? ಮುಂದೆ ಓದಿ.
ಕಾರು ಚಾಲಕ ಮಾಡಿದ ಎಡವಟ್ಟು!
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿದ್ದು, ಯುಎಇ ದೊರೆ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ತಾಜ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಆದರೆ ಅಮೆರಿಕ ಅಧ್ಯಕ್ಷರ ಬೆಂಗಾವಲು ಪಡೆಯ ವಾಹನಗಳ ಪೈಕಿ ಒಂದು ಕಾರು ದಿಢೀರ್ ತಾಜ್ ಹೋಟೆಲ್ ಪ್ರವೇಶ ಮಾಡಿತ್ತು. ಇನ್ನು ಕಾರ್‌ನಲ್ಲಿ ಹಲವು ಸ್ಟಿಕ್ಕರ್ ಕಂಡ ಭದ್ರತಾ ಸಿಬ್ಬಂದಿ, ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಆಗ ಕಾರು ಚಾಲಕ ಮಾಡಿಕೊಂಡ ದೊಡ್ಡ ಎಡವಟ್ಟು ಬಟಾಬಯಲಾಗಿದೆ.

ಕಾರು ಚಾಲಕನ ಉತ್ತರಕ್ಕೆ ಶಾಕ್!
ಇನ್ನು ಕೂಡಲೇ ಅಲರ್ಟ್ ಆದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಬೈಡನ್ ಕಾರು ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಆಗ ವಿಚಾರಣೆ ನಡೆಸಿದ್ರೆ ಚಾಲಕ ಮಾಡಿದ ಎಡವಟ್ಟು ಗೊತ್ತಾಗಿದೆ. ಬೈಡನ್ ಹೋಟೆಲ್‌ಗೆ ತೆರಳುವುದಕ್ಕೂ ಮೊದಲು ಬೇರೊಬ್ಬ ಗ್ರಾಹಕನನ್ನ ಡ್ರಾಪ್ ಮಾಡಲು ಬಂದಿದ್ದಾಗಿ ಕಾರು ಚಾಲಕ ಹೇಳಿದ್ದಾನೆ. ಇದಾದ ಬಳಿಕ ಕಾರು ಚಾಲಕನನ್ನು ಸಾಕಷ್ಟು ವಿಚಾರಣೆ ನಡೆಸಲಾಗಿದ್ದು, ನಂತರ ಆತನನ್ನ ಬಿಟ್ಟು ಕಳುಹಿಸಲಾಗಿದೆ. ಯಾಕೆ ಹೀಗೆ ಮಾಡಿದೆ ಅಂತಾ ಆತನನ್ನ ವಿಚಾರಣೆ ವೇಳೆ ಕೇಳಿದ್ರೆ, ಕಾರು ಚಾಲಕನ ಉತ್ತರವನ್ನ ಕೇಳಿ ಭದ್ರತಾ ಸಿಬ್ಬಂದಿಯೇ ಶಾಕ್ ಆಗಿದ್ದರು.
ಮತ್ತೊಂದು ಬಾಡಿಗೆ ಆಸೆಯ ಎಡವಟ್ಟು
ಅಷ್ಟಕ್ಕೂ ಅಮೆರಿಕ ಅಧ್ಯಕ್ಷ ಜೋ ಬೈಡನ್‌ರ ಬೆಂಗಾವಲಿಗೆ ಮೀಸಲಿದ್ದ ವಾಹನ ಶನಿವಾರ 9.30ಕ್ಕೆ ಐಟಿಸಿ ಮೌರ್ಯ ಹೋಟೆಲ್‌ಗೆ ತೆರಳಬೇಕಿತ್ತು. ಆದ್ರೆ ಅದಕ್ಕೆ ಮುನ್ನ ಲೋಧಿ ಎಸ್ಟೇಟ್ ಜಾಗದಿಂದ ಪಿಕ್ ಮಾಡಿದ್ದ ಉದ್ಯಮಿಯನ್ನ ಡ್ರಾಪ್ ಮಾಡಲು ತಾಜ್‌ಗೆ ತೆರಳಬೇಕಿತ್ತು. ಈ ಉದ್ಯಮಿ ಬೆಳಗ್ಗೆ 8ಕ್ಕೆ ತಾಜ್ ಹೋಟೆಲ್‌ಗೆ ಹೋಗಬೇಕಿತ್ತು ಎನ್ನಲಾಗಿದೆ. ಹೀಗಾಗಿ ಅಮೆರಿಕ ಅಧ್ಯಕ್ಷ ಬೈಡನ್ ಪಿಕ್‌ಅಪ್‌ಗೆ ಇನ್ನೂ ಸಮಯ ಇದೆ ಅಂತಾ, ಮತ್ತೊಂದು ಟ್ರಿಪ್ ಹೋದೆ ಎಂದು ಚಾಲಕ ವಿಚಾರಣೆ ವೇಳೆ ಹೇಳಿದ್ದಾನಂತೆ. ಶಿಷ್ಟಾಚಾರದ ಅರಿವು ಇರಲಿಲ್ಲವೆಂದು ಚಾಲಕ ಹೇಳಿದ್ದಾನೆ. ಹೀಗೆ ಕಾರು ಚಾಲಕ ಮಾಡಿದ ಎಡವಟ್ಟು ದೊಡ್ಡ ಆತಂಕ ಸೃಷ್ಟಿ ಮಾಡಿತ್ತು.
ಇನ್ನು ಉದ್ಯಮಿ ಇದ್ದ ಕಾರು ತಾಜ್ ಹೋಟೆಲ್ ಪ್ರವೇಶ ಮಾಡುತ್ತಿದ್ದಂತೆ ಕಾರಿನ ಸ್ಟಿಕ್ಕರ್ ಪರಿಶೀಲಿಸಿದ ಭದ್ರತಾ ಸಿಬ್ಬಂದಿ, ಶಿಷ್ಟಾಚಾರ ಉಲ್ಲಂಘನೆ ಎಂಬ ಕಾರಣಕ್ಕೆ ಕ್ರಮ ಕೈಗೊಂಡು ಕಾರು ಚಾಲಕನ ವಿಚಾರಣೆ ನಡೆಸಿದ್ದಾರೆ. ತಕ್ಷಣ ಎಡವಟ್ಟು ಮಾಡಿದ್ದ ಕಾರು ಚಾಲಕನ ಕಾರನ್ನು ಅಮೆರಿಕ ಅಧ್ಯಕ್ಷ ಬೈಡನ್ ಅವರ ಬೆಂಗಾವಲು ವಾಹನಗಳ ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ಹಾಗೇ ತೀವ್ರ ವಿಚಾರಣೆ ನಡೆಸಿದ ನಂತರ ಚಾಲಕನನ್ನು ಪೊಲೀಸರು ರಿಲೀಸ್ ಮಾಡಿ ಕಳುಹಿಸಿದ್ದಾರೆ.












Click it and Unblock the Notifications