‘ನಕ್ಸಲ್’ ನೆಲದಲ್ಲಿ ಮುಂದಿನ ಸಿಎಂ ಯಾರು? BJP ವರಿಷ್ಠರ ಆಯ್ಕೆ ಏನು?
ಛತ್ತೀಸ್‌ಗಢದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಕಾಂಗ್ರೆಸ್ ಲೆಕ್ಕಾಚಾರ ಛಿದ್ರ ಛಿದ್ರವಾಗಿದೆ. ಒಟ್ಟು 90 ಸ್ಥಾನ ಇರುವ ಛತ್ತೀಸ್‌ಗಢ ರಾಜ್ಯದಲ್ಲಿ ಬಹುಮತ ಪಡೆಯಲು 46 ಸ್ಥಾನ ಬೇಕಿತ್ತು. ಈ ಮೊದಲು ಕಾಂಗ್ರೆಸ್ ಇಲ್ಲಿ ಭಾರಿ ಬಹುಮತ ಪಡೆವ ಮುನ್ಸೂಚನೆ ಸಿಕ್ಕಿತ್ತು. ಆದರೆ ಟ್ರೆಂಡ್ ಬದಲಾಗಿದ್ದು ಇಂದು ಬೆಳಗ್ಗೆ. ಮತ ಎಣಿಕೆ ಶುರುವಾದ ಬಳಿಕ ಭಾರಿ ಆಘಾತ ಎದುರಿಸಿದ ಕಾಂಗ್ರೆಸ್, ಛತ್ತೀಸ್‌ಗಢ ಅಖಾಡದಲ್ಲಿ ಬಿಜೆಪಿ ಎದುರು ಭೀಕರ ಸೋಲು ಕಂಡಿದೆ. ಹೀಗಾಗಿ ಛತ್ತೀಸ್‌ಗಢದ ಹೊಸ ಸಿಎಂ ಬಗ್ಗೆ ಚರ್ಚೆ ಶುರುವಾಗಿದೆ.
ಪಂಚರಾಜ್ಯ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸುತ್ತೇವೆ, ಅನ್ನೋ ಕಾಂಗ್ರೆಸ್ ನಾಯಕರ ನಂಬಿಕೆ ಹುಸಿಯಾಗಿದೆ. ಮಧ್ಯಪ್ರದೇಶ, ರಾಜಸ್ಥಾನ & ಛತ್ತೀಸ್‌ಗಢ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು ಎದುರಾಗಿದೆ. ಬಿಜೆಪಿ ಎದುರು ಕಾಂಗ್ರೆಸ್ ಇಂದು ಸೋತು ಹೋಗಿದೆ. ಅದರಲ್ಲೂ ನಕ್ಸಲರ ನಾಡು ಅಂತಲೇ ಕುಖ್ಯಾತಿ ಪಡೆದಿರುವ ಛತ್ತೀಸ್‌ಗಢ ರಾಜ್ಯದಲ್ಲಿ ಈಗ ಹೊಸ ಸಿಎಂ ಆಯ್ಕೆಗೆ ಕಸರತ್ತು ಆರಂಭವಾಗಿದೆ. ಹಾಗಾದರೆ ಈಗ ಬಹುಮತ ಪಡೆದಿರುವ ಬಿಜೆಪಿ ಪಕ್ಷದಲ್ಲಿ, ಛತ್ತೀಸ್‌ಗಢ ಸಿಎಂ ಸ್ಥಾನಕ್ಕೆ ಯಾರೆಲ್ಲಾ ಸ್ಪರ್ಧಿಗಳು ಇದ್ದಾರೆ? ಮುಂದೆ ಓದಿ.

ಛತ್ತೀಸ್‌ಗಢ ಹೊಸ ಸಿಎಂ ಇವರೇನಾ?
ನಕ್ಸಲರ ಕಾರಣಕ್ಕೆ ಕೆಂಡವಾಗಿರುವ ಛತ್ತೀಸ್‌ಗಢ ರಾಜ್ಯದಲ್ಲಿ ಹಾಲಿ ಅಧಿಕಾರದಲ್ಲಿ ಇದ್ದ, ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲು ಎದುರಾಗಿದೆ. 90 ಸ್ಥಾನ ಇರುವ ಛತ್ತೀಸ್‌ಗಢದಲ್ಲೀಗ, 54 ಸ್ಥಾನಗಳನ್ನ ಗೆದ್ದು ಬೀಗಿದೆ ಬಿಜೆಪಿ, ಆದರೆ ಹಾಲಿ ಅಧಿಕಾರದಲ್ಲಿ ಇದ್ದರೂ ಕಾಂಗ್ರೆಸ್ ಕೇವಲ 35 ಸ್ಥಾನ ಪಡೆದಿದೆ. ಹಾಗಾದರೆ ಸಿಎಂ ರೇಸ್‌ನಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?
ಹಿಂದಿನ ಚುನಾವಣೆಯಲ್ಲಿ ಭೀಕರ ಸೋಲು
2018ರಲ್ಲಿ ಬಿಜೆಪಿ ಕೇವಲ 15 ಸ್ಥಾನ ಪಡೆದಿತ್ತು, ಹೀಗಿದ್ದಾಗ 2018ರಲ್ಲಿ ಕಾಂಗ್ರೆಸ್ ಬರೋಬ್ಬರಿ 68 ಸ್ಥಾನ ಪಡೆದಿತ್ತು. ಈಗ ನೋಡಿದರೆ ಎಲ್ಲಾ ಉಲ್ಟಾ ಆಗಿದೆ. ಹೀಗಿದ್ದಾಗ ಬಿಜೆಪಿ ಪಕ್ಷದಲ್ಲಿ, ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿ ಆಗೋದಕ್ಕೆ ಪೈಪೋಟಿ ಕೂಡ ಶುರುವಾಗಿದೆ. ಹಾಗಾದ್ರೆ ಪೈಪೋಟಿಯಲ್ಲಿ ಮುನ್ನೆಲೆಯಲ್ಲಿ ಇರುವವರು ಯಾರು?
15 ವರ್ಷ ಸಿಎಂ ಆಗಿದ್ದವರಿಗೆ ಮತ್ತೆ ಚಾನ್ಸ್?
ಈಗಿರುವ ಮಾಹಿತಿ ಪ್ರಕಾರ, ಈ ಹಿಂದೆ ಛತ್ತೀಸ್‌ಗಢದಲ್ಲಿ ಸಿಎಂ ಆಗಿ ಆಡಳಿ ನಿರ್ವಹಿಸಿದ್ದ ರಮಣ್ ಸಿಂಗ್ ಅವರ ಹೆಸರು ಮುನ್ನೆಲೆಗೆ ಬಂದಿದೆ. 15 ವರ್ಷ ಸಿಎಂ ಆಗಿದ್ದ ಆಯುರ್ವೇದ ಪದವೀಧರ ರಮಣ್ ಸಿಂಗ್, 2018ರಲ್ಲಿ ಬಿಜೆಪಿ ಸೋಲಿನ ಬಳಿಕ ಸಿಎಂ ಸ್ಥಾನದಿಂದ ಕೆಳಗೆ ಇಳಿದರು. ಇದೀಗ ಇವರನ್ನ ಮತ್ತೊಮ್ಮೆ ಛತ್ತೀಸ್‌ಗಢದ ಸಿಎಂ ಮಾಡುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಆದ್ರೆ ಈಗಾಗಲೇ 15 ವರ್ಷ ಸಿಎಂ ಆಗಿದ್ದ ರಮಣ್ ಸಿಂಗ್ ಅವರಿಗೆ ಮತ್ತೊಮ್ಮೆ ಅವಕಾಶ ಸಿಗುವುದು ಡೌಟ್ ಅಂತಲೂ ಹೇಳಲಾಗುತ್ತಿದೆ.

ರಮಣ್ ಸಿಂಗ್ ಜೊತೆಗೆ ಅರ್ಜುನ್ ಸಾವೋ ಹಾಗೂ ರೇಣುಕಾ ಸಿಂಗ್ ಅವರ ಹೆಸರುಗಳೂ ಇದೀಗ ಮುನ್ನೆಲೆಗೆ ಬಂದಿವೆ. ಇವರ ಜತೆ ಇನ್ನು ಹಲವರು ಛತ್ತೀಸ್‌ಗಢದ ಸಿಎಂ ಸ್ಥಾನಕ್ಕೆ ಪೈಪೋಟಿ ಆರಂಭಿಸಿದ್ದಾರೆ ಎನ್ನಲಾಗಿದೆ. ಹೀಗೆ ಭಾರಿ ಕುತೂಹಲ ಕೆರಳಿಸಿದೆ ಛತ್ತೀಸ್‌ಗಢ ರಾಜ್ಯದ ಮುಂದಿನ ಸಿಎಂ ಆಯ್ಕೆ ಪ್ರಕ್ರಿಯೆ. ಮುಂದಿನ ಕೆಲವು ದಿನಗಳಲ್ಲಿ ಈ ಕುರಿತಾಗಿ ಅಧಿಕೃತ ಮಾಹಿತಿ ಸಿಗುವ ನಿರೀಕ್ಷೆ ಇದೆ.












Click it and Unblock the Notifications