Ajit Pawar: 860 ಕಿಮೀ ಸ್ಪೀಡ್, ಅಜಿತ್ ಪವಾರ್ ಪ್ರಯಾಣ ಮಾಡುತ್ತಿದ್ದ ವಿಮಾನದ ಸಾಮರ್ಥ್ಯ ಹೀಗಿತ್ತು ನೋಡಿ...
ಅಜಿತ್ ಪವಾರ್ ವಿಮಾನ ದುರಂತದಲ್ಲಿ ಮೃತಪಟ್ಟಿರುವ ವಿಚಾರ ಈಗ ಹಳ್ಳಿ ಟು ದಿಲ್ಲಿ ಆಘಾತವೇ ಸೃಷ್ಟಿ ಮಾಡುತ್ತಿದೆ. ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣ ಮಾಡುತ್ತಿದ್ದ ವಿಮಾನ ಭೀಕರ ದುರಂತಕ್ಕೆ ತುತ್ತಾಗಿತ್ತು. ರನ್‌ವೇ ಮೇಲೆ ಅಪ್ಪಳಿಸಿ ವಿಮಾನ ಸ್ಫೋಟಗೊಂಡು ಛಿದ್ರ ಛಿದ್ರವಾಗಿ ಹೋಗಿದೆ. ನಂತರ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು, ಇಡೀ ವಿಮಾನ ಸುಟ್ಟು ಹೋಗಿದೆ. ಹೀಗಾಗಿ ವಿಮಾನದಲ್ಲಿದ್ದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಮೇತ ಒಟ್ಟು 5 ಜನರು ದುರಂತ ಸಾವು ಕಂಡಿದ್ದಾರೆ. ಹಾಗಾದರೆ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಹೇಗಿತ್ತು ಗೊತ್ತಾ? ಎಷ್ಟು ವೇಗದಲ್ಲಿ ವಿಮಾನ ಹಾರುವ ಸಾಮರ್ಥ್ಯ ಹೊಂದಿತ್ತು?
ಮಹಾರಾಷ್ಟ್ರ ರಾಜ್ಯದಲ್ಲಿ ಇದೀಗ ಚುನಾವಣೆ ಪರ್ವ ಆರಂಭ ಆಗಿದ್ದು, ಸ್ಥಳೀಯ ಸಂಸ್ಥೆಗಳಿಗೆ ಭಾರಿ ಅಬ್ಬರದಿಂದ ಎಲೆಕ್ಷನ್ ನಡೆಯುತ್ತಿದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಾ, ತಮ್ಮ ಪಕ್ಷ ಗೆಲ್ಲಿಸಬೇಕು ಎಂದು ಎಲ್ಲಾ ರಾಜಕೀಯ ನಾಯಕರು ಒದ್ದಾಡುತ್ತಿದ್ದಾರೆ. ಅದೇ ರೀತಿಯಾಗಿ ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಡಿಸಿಎಂ ಆಗಿರುವ ಅಜಿತ್ ಪವಾರ್ ಅವರು ಕೂಡ ಚುನಾವಣೆಯ ಪ್ರಚಾರಕ್ಕೆ ಎಂದು ಪುಣೆಗೆ ಹೊರಟಿದ್ದರು. ಆದರೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ವಿಮಾನ ಸ್ಫೋಟವಾಗಿದೆ. ಖಾಸಗಿ ವಿಮಾನ ಈ ರೀತಿಯಾಗಿ ಸ್ಫೋಟವಾಗಿದ್ದು, ಹಲವು ವಿಶೇಷತೆ ಹೊಂದಿದೆ ಈ ವಿಮಾನ.

860 ಕಿಮೀ ವೇಗದಲ್ಲಿ ಹಾರಬಲ್ಲದು!
ಅಜಿತ್ ಪವಾರ್ ಪ್ರಯಾಣ ಮಾಡುತ್ತಿದ್ದ ವಿಮಾನದ ಹೆಸರು 'ಬಾಂಬಾರ್ಡಿಯರ್ ಲಿಯರ್‌ಜೆಟ್ 45' ಎಂದು, ಈ ವಿಮಾನ ಹಲವು ವಿಶೇಷತೆಗಳನ್ನು ಹೊಂದಿತ್ತು. ಬಾಂಬಾರ್ಡಿಯರ್ ಏರೋಸ್ಪೇಸ್ ಈ ವಿಮಾನ ತಯಾರಿಸಿದ್ದು, ಮಧ್ಯಮ ಗಾತ್ರದ ಫ್ಲೈಟ್ ಇದಾಗಿದೆ. ಕಮರ್ಷಿಯಲ್ ಬಳಕೆಗಾಗಿ ವಿಮಾನ ಬಳಸುತ್ತಿದ್ದರು, ಈ ವಿಮಾನ ವೇಗ ಹಾಗೂ ವ್ಯಾಪ್ತಿ ಮತ್ತೆ ವಿಶ್ವಾಸಾರ್ಹತೆಗೆ ಹೆಸರುವಾಸಿ ಆಗಿದೆ. ಅಲ್ಲದೆ ಗರಿಷ್ಠ 860 ಕಿಲೋ ಮೀಟರ್ ವೇಗದಲ್ಲಿ ಈ ವಿಮಾನ ಹಾರುವ ಸಾಮರ್ಥ್ಯ ಹೊಂದಿದೆ.
ಅಜಿತ್ ಪವಾರ್ ಪ್ರಯಾಣ ಮಾಡುತ್ತಿದ್ದ ವಿಮಾನ ಅಪಘಾತ ಅಜಿತ್ ಪವಾರ್ ಸೇರಿ ವಿಮಾನದಲ್ಲಿ ಇದ್ದ 5 ಪ್ರಯಾಣಿಕರು ಮೃತಪಟ್ಟಿದ್ದಾರೆ...
— oneindiakannada (@OneindiaKannada) January 28, 2026
#BreakingNews #AjitPawar #AjitPawarPlaneCrash #BaramatiIncident #MaharashtraNews #NewsUpdate #OIKannada #Oneindia pic.twitter.com/Sq4TCNi8pY
ಮತ್ತೊಂದು ಕಡೆ 4,630 ಕಿಲೋ ಮೀಟರ್ ಎತ್ತರದಲ್ಲಿ ಹಾರುವ ಸಾಮರ್ಥ್ಯ ಕೂಡ ಈ ವಿಮಾನಕ್ಕೆ ಇದ್ದು, ಸಾಕಷ್ಟು ಗಣ್ಯರು ಲಿಯರ್‌ಜೆಟ್ 45 ಬಳಸಿ ಪ್ರಯಾಣ ಮಾಡಿದ್ದಾರೆ. ಆದರೆ ಇಂದು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಮಯದಲ್ಲಿ ದಿಢೀರ್ ಲಿಯರ್‌ಜೆಟ್-45 ವಿಮಾನ ರನ್‌ವೇಗೆ ಬಡಿದು ಸ್ಫೋಟಗೊಂಡು, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟಿದ್ದಾರೆ. ಈ ದುರ್ಘಟನೆ ನಂತರ ವಿಮಾನ ಅಪಘಾತದ ಬಗ್ಗೆ ತನಿಖೆ ಆರಂಭವಾಗಿದೆ.












Click it and Unblock the Notifications