Cauvery River: ಕಾವೇರಿ ನೀರಿಗೆ ಸಂಕಷ್ಟ, ಕೊನೆಗೂ ಸಿಕ್ಕ ಸಿಹಿಸುದ್ದಿ
ಕರ್ನಾಟಕದ ಕಾವೇರಿ ಕಣಿವೆ ಭಾಗದಲ್ಲಿ ಈ ಬಾರಿ ತೀವ್ರ ಮಳೆ ಕೊರತೆ ಉಂಟಾಗಿದೆ. ಈ ಮಧ್ಯೆ ಕರ್ನಾಟಕ & ತಮಿಳುನಾಡು ನಡುವೆಯು ನೀರಿನ ವಿಚಾರಕ್ಕೆ ತಿಕ್ಕಾಟ ಜೋರಾಗಿದೆ. ಹೀಗಿದ್ದಾಗ ತಮಿಳುನಾಡಿನ ಜೀವನಾಡಿ ಮೆಟ್ಟೂರು ಡ್ಯಾಂ ಒಣಗುತ್ತಾ ಸಾಗಿತ್ತು. ಹೀಗಾಗಿ, ತಮಿಳುನಾಡು ರೈತರು ಮತ್ತು ಜನರು ಚಿಂತೆ ಮಾಡುವಂತಾಗಿತ್ತು. ಆದರೆ ಈಗ ಸಿಹಿಸುದ್ದಿ ಸಿಕ್ಕಿದೆ, ಹಾಗಾದರೆ ಮೆಟ್ಟೂರು ಡ್ಯಾಂನಲ್ಲಿ ಈಗ ಎಷ್ಟು ನೀರು ಸಂಗ್ರಹವಾಗಿದೆ?
ಕಳೆದ 4-5 ವರ್ಷದಿಂದ ಕರ್ನಾಟಕದಲ್ಲಿ ಉತ್ತಮ ಮಳೆ ಬಿದ್ದಿತ್ತು. ಅದರಲ್ಲೂ ಕಾವೇರಿಯ ಕಣಿವೆ ಭಾಗದಲ್ಲಿ ಮಳೆರಾಯ ಅಬ್ಬರಿಸಿದ್ದ. ಹೀಗೆ, ಜೀವನದಿ ಕಾವೇರಿ ಕೂಡ ಮೈದುಂಬಿ ಹರಿದು ಅನ್ನದಾತರು ಮತ್ತು ಕನ್ನಡಿಗರ ದಾಹ ತಣಿಸಿ ತಮಿಳುನಾಡಿಗು ಭಾರಿ ಪ್ರಮಾಣದ ನೀರನ್ನು ಬಿಡಲಾಗಿತ್ತು. ಆದ್ರೆ ಈ ಬಾರಿ ಪ್ರಾಕೃತಿಕ ವಿಕೋಪ & ಇತರ ಕಾರಣಕ್ಕೆ ಮಳೆಯ ಕೊರತೆ ತೀವ್ರವಾಗಿದೆ. ಹೀಗಾಗಿ ಕರ್ನಾಟಕದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲ. ಇದೇ ವಿಚಾರ ಹಿಡಿದುಕೊಂಡು ತಮಿಳುನಾಡು ಸರ್ಕಾರ ಕೂಡ ಕಿರಿಕ್ ಮಾಡಿತ್ತು.

ಮೆಟ್ಟೂರು ಡ್ಯಾಂನ ನೀರಿನ ಮಟ್ಟ...
ತಮಿಳುನಾಡು ಕೂಡ ಈ ಬಾರಿ ಬರದ ಬೇಗೆಯಲ್ಲಿ ನರಳಾಡುತ್ತಿದೆ ಮಳೆ ಕೊರತೆ ಕಾರಣದಿಂದ ತಮಿಳುನಾಡು ಜಲಾಶಯಗಳು ಕೂಡ ಒಣಗುತ್ತಿವೆ. ಮೆಟ್ಟೂರು ಡ್ಯಾಂ ಭಾಗಶಃ ಖಾಲಿಯಾಗಿ, ಆತಂಕ ಸೃಷ್ಟಿಯಾಗಿತ್ತು. ಇದೀಗ ನಿಧಾನವಾಗಿ ಮೆಟ್ಟೂರು ಡ್ಯಾಂ ತುಂಬುತ್ತಿದೆ. ಮಳೆಯ ಅಬ್ಬರ ಜೋರಾದ ಕಾರಣ ಮೆಟ್ಟೂರು ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈಗಿನ ಮಾಹಿತಿಯ ಪ್ರಕಾರ 120 ಅಡಿ ಎತ್ತರ ಇರುವ ಮೆಟ್ಟೂರು ಡ್ಯಾಂ ಒಳಗೆ 44.89 ಅಡಿ ನೀರು ಸಂಗ್ರಹವಾಗಿದೆ. ಹಾಗೇ 6,291 ಕ್ಯುಸೆಕ್ ಒಳಹರಿವು ದಾಖಲಾಗಿದೆ.
ಚಂಡಮಾರುತದ ಅಬ್ಬರ, ಭಾರಿ ಮಳೆ ನಿರೀಕ್ಷೆ!
ಇನ್ನು ಅರಬ್ಬಿ ಸಮುದ್ರದಲ್ಲಿ ಇದೀಗ ಸುಳಿಗಾಳಿ ಉಂಟಾಗಿ, ಚಂಡಮಾರುತವಾಗಿ ಅಬ್ಬರ ಶುರು ಮಾಡಿದೆ. ಹೀಗಾಗಿ ಕಾವೇರಿ ಕಣಿವೆ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಮಳೆರಾಯ ಕರುಣೆ ತೋರಿದರೆ ಮೆಟ್ಟೂರು ಡ್ಯಾಂ ಮಾತ್ರವಲ್ಲ ಕರ್ನಾಟಕ ಭಾಗದ ಕಾವೇರಿ ನದಿಗೆ ಕಟ್ಟಿರುವ ಡ್ಯಾಂಗಳು ತುಂಬಿಕೊಳ್ಳಲಿವೆ. ಈ ಮೂಲಕ ಸಂಕಷ್ಟದ ಹಾದಿಯಲ್ಲಿ ನರಳುತ್ತಿರುವ ಕನ್ನಡಿಗರಿಗೆ ನೆರವು ಸಿಗಲಿದೆ. ಇನ್ನು ತಮಿಳುನಾಡಿಗೂ ಮಳೆ ರಿಲೀಫ್ ಕೊಡುವ ನಿರೀಕ್ಷೆ ಇದೆ.

ತಮಿಳುನಾಡಿನ 24 ಜಿಲ್ಲೆಗಳು ಅವಲಂಬಿಸಿರುವುದು ಇದೇ ಡ್ಯಾಂ ನೀರನ್ನು. ಹೀಗಾಗಿ ಕಾವೇರಿ ವಿಚಾರಕ್ಕೆ ತಮಿಳುನಾಡು ದೊಡ್ಡ ಕಿರಿಕ್ ತೆಗೆಯುತ್ತದೆ. ಆದರೆ ಕುಡಿಯುವ ನೀರನ್ನ ಮೊದಲು ರಕ್ಷಣೆ ಮಾಡುವ ಬದಲು, ತಮಿಳುನಾಡು ಸರ್ಕಾರ ಕೃಷಿಗೆ ಆದ್ಯತೆ ನೀಡಿದೆ ಎಂಬ ಆರೋಪವು ಕೇಳಿಬಂದಿತ್ತು. ಎಲ್ಲಾ ಕಿರಿಕಿರಿ ನಡುವೆ ಮೆಟ್ಟೂರು ಡ್ಯಾಂನ ನೀರಿನ ಮಟ್ಟ ಕುಸಿದಿದ್ದು ಭಯ ಮೂಡಿಸಿತ್ತು. ಆದರೆ ಇದೀಗ ಮೆಟ್ಟೂರು ಜಲಾಶಯದ ನೀರಿನ ಮಟ್ಟ ಸುಧಾರಿಸುತ್ತಿದೆ.












Click it and Unblock the Notifications