2024 Lok Sabha Election: ‘ಇಂಡಿಯಾ’ ಒಕ್ಕೂಟದ ರಣತಂತ್ರ ಬಹಿರಂಗ!
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಿಜೆಪಿ & ಇಂಡಿಯಾ ಒಕ್ಕೂಟದ ಜಿದ್ದಾಜಿದ್ದಿನ ಕಾಳಗಕ್ಕೆ ವೇದಿಕೆ ಸಿದ್ಧವಾಗಿದೆ. ಅತ್ತ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಸತತ 3ನೇ ಬಾರಿಗೆ ಗೆದ್ದು ಬೀಗಬೇಕು ಎಂಬ ಹಂಬಲದಲ್ಲಿದೆ. ಆದ್ರೆ ಈ ಬಾರಿ ಎನ್‌ಡಿಎಗೆ ಸೋಲಿನ ರುಚಿ ತೋರಿಸಲು 'ಇಂಡಿಯಾ' ಒಕ್ಕೂಟ ತೊಡೆತಟ್ಟಿದೆ. ಇಷ್ಟೆಲ್ಲದರ ನಡುವೆ ಸಂಚಲನ ಸೃಷ್ಟಿಸುವ ಸುದ್ದಿ 'ಇಂಡಿಯಾ' ಒಕ್ಕೂಟದಿಂದ ಹೊರಬಿದ್ದಿದೆ.
ಬಿಜೆಪಿ ಹಾಗೂ ಎನ್‌ಡಿಎ ವಿರುದ್ಧ ಗೆಲುವು ಅಷ್ಟು ಸುಲಭದ ಮಾತಾಗಿ ಉಳಿದಿಲ್ಲ. ಇದು 'ಇಂಡಿಯಾ' ಒಕ್ಕೂಟಕ್ಕೆ ಸರಿಯಾಗಿ ಅರ್ಥವಾದಂತೆ ಕಾಣುತ್ತಿದೆ. ಹೀಗಾಗಿ ರಣತಂತ್ರವನ್ನ ರೂಪಿಸಿ ರಣಾಂಗಣಕ್ಕೆ ವಿರೋಧ ಪಕ್ಷಗಳು ಎಂಟ್ರಿ ಕೊಡುತ್ತಿವೆ. ಮೇಲ್ನೋಟಕ್ಕೆ ಮಾತ್ರವೇ 2024ರ ಲೋಕಸಭೆ ಚುನಾವಣೆಗೆ ಸಿದ್ಧವಾಗದೆ ಅದರ ಆಳಕ್ಕೆ ಇಳಿದು ಭಾರತೀಯರ ನಾಡಿ ಮಿಡಿತ ಅರಿಯಲು 'ಇಂಡಿಯಾ' ಒಕ್ಕೂಟ ಸಿದ್ಧವಾಗಿದೆ. ಹಾಗಾದರೆ ಇಂಡಿಯಾ ಒಕ್ಕೂಟ ಇದೀಗ ಮಾಡಿರುವ ರಣತಂತ್ರ ಎಂತಹದ್ದು? ಹಾಗಾದರೆ ಈ ರಣತಂತ್ರ 'ಇಂಡಿಯಾ' ಒಕ್ಕೂಟಕ್ಕೆ ಗೆಲುವು ಸಿಗುವಂತೆ ಮಾಡುತ್ತಾ?

ಸಿದ್ಧವಾಗಿದೆ 'ಇಂಡಿಯಾ' ಒಕ್ಕೂಟದ ಪಡೆ!
ಬಿಜೆಪಿ ಅಥವಾ ಎನ್‌ಡಿಎ ಸೋಲಿಸುವುದು ಸುಲಭದ ಹಾದಿ ಅಲ್ಲ ಎಂಬ ವಿಚಾರ ಅರಿತು ಇದೀಗ ಬೇರೆಯದ್ದೇ ಪ್ಲ್ಯಾನ್ ಮಾಡಿದೆ 'ಇಂಡಿಯಾ' ಒಕ್ಕೂಟ. ಇದಕ್ಕಾಗಿ ದೇಶದಲ್ಲಿರುವ ಸಣ್ಣ ಪಕ್ಷಗಳು, ಜನಾಂದೋಲನ ಒಕ್ಕೂಟಗಳು & ನಾಗರಿಕ ಸಮಾಜ ಸಂಘಟನೆಗಳ ವೇದಿಕೆ ಕೂಡ ಸ್ವಯಂ ಆಸಕ್ತಿಯಿಂದ ಇಂಡಿಯಾ ಒಕ್ಕೂಟ ಜೊತೆ ಕೈಜೋಡಿಸಲು ಮುಂದಾಗಿದೆ. 2024ರ ಲೋಕಸಭೆ ಚುನಾವಣೆ ಗೆಲುವಿಗಾಗಿ ಈ ಮೂಲಗಳು ಬಲ ತುಂಬಲಿವೆ. ಅದಕ್ಕಾಗಿ ಅಕ್ಟೋಬರ್ 2ರಿಂದ ಅಭಿಯಾನ ಆರಂಭಿಸುವ ಘೋಷಣೆಯು ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೊಳಗಿತು.
1.25 ಲಕ್ಷ ಸ್ವಯಂ ಸೇವಕರು ರೆಡಿ?
ದೇಶದಲ್ಲಿನ ಸಣ್ಣ ಪಕ್ಷಗಳು, ಜನಾಂದೋಲನ ಒಕ್ಕೂಟ & ನಾಗರಿಕ ಸಮಾಜ ಸಂಘಟನೆಗಳ ವೇದಿಕೆ ರೂಪಿಸಿರುವ ತಂತ್ರ ದೊಡ್ಡದಾಗಿದೆ. ಆ ಪ್ರಕಾರ ವೇದಿಕೆ ಅಡಿ ಬರುವ ಸುಮಾರು 1.25 ಲಕ್ಷ ಸ್ವಯಂ ಸೇವಕರು 'ಇಂಡಿಯಾ' ಒಕ್ಕೂಟದ ಪರವಾಗಿ ಇಡೀ ದೇಶದ ಮೂಲೆ ಮೂಲೆಯಲ್ಲಿ ಅಭಿಯಾನ ನಡೆಸಲಿದ್ದಾರೆ. ಅಲ್ಲದೆ ದೇಶದಲ್ಲಿ ಸಾಧ್ಯವಾದಷ್ಟು ಜನರ ಜತೆ ಚರ್ಚೆ ನಡೆಸುವುದು ಈ ವೇದಿಕೆಯ ಗುರಿ. ಹೀಗಾಗಿ ದೊಡ್ಡ ಅಭಿಯಾನಕ್ಕೆ ಇವರು ಸಿದ್ಧತೆ ಆರಂಭಿಸಿದ್ದಾರೆ ಎನ್ನಲಾಗಿದೆ.

ಸೋಷಿಯಲ್ ಮೀಡಿಯಾ ಅಸ್ತ್ರಕ್ಕೆ ಪ್ರತ್ಯಸ್ತ್ರ
ಮತ್ತೊಂದ್ಕಡೆ ಸೋಷಿಯಲ್ ಮೀಡಿಯಾದಲ್ಲೂ 'ಇಂಡಿಯಾ' ಒಕ್ಕೂಟ ತನ್ನ ಬಲವನ್ನು ವೃದ್ಧಿಸಿಕೊಳ್ಳಲು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಈ ತಂತ್ರದ ಪ್ರಕಾರ 'ಭಾರತ್ ಜೋಡೋ ಅಭಿಯಾನ' ಮತ್ತು 'ಭಾರತೀಯ ಕಮ್ಯುನಿಸ್ಟ್ ಮತ್ತು ಡೆಮಾಕ್ರಟಿಕ್ ಸೋಷಿಯಲಿಸ್ಟ್‌ಗಳ ಒಕ್ಕೂಟ'ದ ವತಿಯಿಂದ ಪರಿಕಲ್ಪನೆಗೊಂಡ 'ಜೀತೇಗ ಇಂಡಿಯಾ' ವೇದಿಕೆ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡದಂತೆ ನೋಡಿಕೊಳ್ಳಲಿದೆ. ಈ ಮೂಲಕ ಮುಂದಿನ ಲೋಕಸಭೆಗೆ ಎಲ್ಲಾ ರೀತಿಯ ತಯಾರಿ ನಡೆಸಲು 'ಇಂಡಿಯಾ' ಒಕ್ಕೂಟ ಸನ್ನದ್ಧವಾಗಿದೆ.
ಬಿಜೆಪಿ ಗೆಲ್ಲುವ ಜಾಗದಲ್ಲಿ ಗುಡ್‌ಬೈ!
ಹಾಗೇ 'ಇಂಡಿಯಾ' (I.N.D.I.A) ಒಕ್ಕೂಟ ಇನ್ನೊಂದು ತಂತ್ರವನ್ನೂ ಇದರ ಜೊತೆಗೇ ರೂಪಿಸಿದೆ. ಅದೇನೆಂದರೆ ಇದೀಗ ಕ್ಯಾಂಪೇನ್ ಅಥವಾ ಅಭಿಯಾನ ಕೈಗೊಳ್ಳುವ ಕ್ಷೇತ್ರಗಳ ಆಯ್ಕೆಯಲ್ಲಿ ಕೆಲವು ನಿಯಮ ಇರಲಿದೆ. ಈ ತಂತ್ರದ ಪ್ರಕಾರ, ಈಗಾಗಲೇ ಬಿಜೆಪಿ ಪಕ್ಷಕ್ಕೇ ಗೆಲುವು ಫಿಕ್ಸ್ ಎಂಬ ಕ್ಷೇತ್ರಗಳ ಕಡೆ ಜಾಸ್ತಿ ಗಮನ ನೀಡದೇ ಇರುವುದು. ಹಾಗೇ ಅತಂತ್ರ ಪರಿಸ್ಥಿತಿಯಲ್ಲಿ ಇರುವ ಕ್ಷೇತ್ರಗಳನ್ನ ಗುರುತಿಸಿ, ಅಲ್ಲಿ ಅಭಿಯಾನ ತೀವ್ರಗೊಳಿಸುವುದು ಈ ರಣತಂತ್ರದ ಭಾಗವಾಗಿದೆ. ಹೀಗೆ ಸುಮಾರು 125-150 ಸ್ಥಾನಗಳು ಸಿಗುವ ನಿರೀಕ್ಷೆ ಇದೆ.

20 ರಾಜ್ಯಗಳ ಪ್ರತಿನಿಧಿಗಳು ಭಾಗಿ
ಈ ಪ್ರಮುಖ ನಿರ್ಧಾರವನ್ನ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಕೈಗೊಳ್ಳಲಾಗಿದೆ. ನವದೆಹಲಿ ಈ ವಿಶೇಷ ಕ್ಷಣಕ್ಕೆ ಈಗ ಸಾಕ್ಷಿಯಾಗಿದೆ. ಸಮಾವೇಶದಲ್ಲಿ 20 ರಾಜ್ಯಗಳ & 'ಇಂಡಿಯಾ' ಒಕ್ಕೂಟಕ್ಕೆ ಸೇರಿರದ 18 ಸಣ್ಣ ವಿರೋಧ ಪಕ್ಷಗಳ ಪ್ರತಿನಿಧಿಗಳು ಸೇರಿ 50 ಕ್ಕೂ ಹೆಚ್ಚು ಜನಾಂದೋಲನ ಒಕ್ಕೂಟ & ನಾಗರಿಕ ಸಮಾಜ ಸಂಘಟನೆಗಳ 500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿದ್ದರು. ಹಾಗೂ ಈ ಸಮಾವೇಶದಲ್ಲಿ ಮುಂಬರುವ 5 ರಾಜ್ಯಗಳ ಚುನಾವಣೆ ಸೇರಿದಂತೆ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ & ಬಿಜೆಪಿ ಮಿತ್ರಪಕ್ಷಗಳನ್ನ ಸೋಲಿಸುವ ಬಗ್ಗೆ ಸವಾಲು ಕೂಡ ಸ್ವೀಕರಿಸಲಾಗಿದೆ.
ಒಟ್ನಲ್ಲಿ ಈ ಮೂಲಕ ಬಿಜೆಪಿ & ಎನ್‌ಡಿಎ ವಿರುದ್ಧ 'ಇಂಡಿಯಾ' ಒಕ್ಕೂಟಕ್ಕೆ ಮತ್ತಷ್ಟು ಶಕ್ತಿ ಬಂದಂತೆ ಕಾಣುತ್ತಿದೆ. ಆದರೆ ಈಗ ಸಿಕ್ಕಿರುವ ಈ ಬಲವನ್ನ ಯಾವ ರೀತಿ ತನ್ನ ಗುರಿ ಕಡೆಗೆ 'ಇಂಡಿಯಾ' ಒಕ್ಕೂಟ ಬಳಸಿಕೊಳ್ಳಲಿದೆ? ಎಂಬುದು ಬಿಲಿಯಲ್ ಡಾಲರ್ ಪ್ರಶ್ನೆ. ಹಾಗೇ 2024ರ ಲೋಕಸಭೆ ಚುನಾವಣೆ ಈ ಮೂಲಕ ಮತ್ತಷ್ಟು ರಂಗು ಪಡೆದಿದ್ದು, ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಏನು ಮಾಡುತ್ತೆ? ಅಂತಾ ಕಾದು ನೋಡಬೇಕು. ಯಾಕಂದ್ರೆ 2024ರ ಲೋಕಸಭೆ ಚುನಾವಣೆಯ ಗೆಲುವು 'ಇಂಡಿಯಾ' ಒಕ್ಕೂಟಕ್ಕೆ ಎಷ್ಟು ಮುಖ್ಯವೋ ಅಷ್ಟೇ 'ಎನ್‌ಡಿಎ' ಒಕ್ಕೂಟಕ್ಕೂ ಮುಖ್ಯವಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications