Chandrayaan-3: ‘ಚಂದ್ರಯಾನ-3’ ರೋವರ್ ನಿದ್ದೆಯಿಂದ ಎದ್ದೇಳುತ್ತಾ?
ಭಾರತೀಯರೇ, ಬಾಹ್ಯಾಕಾಶ ಇತಿಹಾಸದಲ್ಲಿ ಇಂದು ಮತ್ತೊಮ್ಮೆ ಭಾರತಕ್ಕೆ ಅಗ್ನಿಪರೀಕ್ಷೆ ಎದುರಾಗಿದೆ. ಈಗಾಗಲೇ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಸ್ರೋ ಸಂಸ್ಥೆ ಲ್ಯಾಂಡರ್ & ರೋವರ್ ಇಳಿಸಿತ್ತು. ಆದ್ರೆ ಚಂದ್ರನ ಮೇಲೆ ಅರ್ಧ ತಿಂಗಳು ಕತ್ತಲು ಮತ್ತು ಅರ್ಧ ತಿಂಗಳು ಬೆಳಕು ಇರುವ ಕಾರಣ 'ವಿಕ್ರಮ್' ಲ್ಯಾಂಡರ್ & 'ಪ್ರಜ್ಞಾನ್' ರೋವರ್ ನಿದ್ದೆ ಮಾಡುತ್ತಿವೆ.
ಬರೋಬ್ಬರಿ 14 ದಿನದಿಂದ ನಿದ್ದೆ ಮಾಡುತ್ತಿರುವ 'ವಿಕ್ರಮ್' ಲ್ಯಾಂಡರ್ & 'ಪ್ರಜ್ಞಾನ್' ರೋವರ್‌ನ ನಿದ್ದೆಯಿಂದ ಎದ್ದೇಳಿಸಬೇಕಿದೆ. ಇಬ್ಬರ ನಿದ್ದೆಗೆ ಇಂದು ಕೊನೇ ದಿನವಾಗಿದ್ದು ಭಯ ಹೆಚ್ಚಾಗುತ್ತಿದೆ. ಚಂದ್ರನ ದಕ್ಷಿಣ ಧ್ರುವದ 'ಶಿವಶಕ್ತಿ' ಬಿಂದುವಲ್ಲಿ ನಿದ್ದೆ ಮಾಡ್ತಿರುವ ಚಂದ್ರಯಾನ-3ರ ಲ್ಯಾಂಡರ್ ಮತ್ತು ರೋವರ್ ಶುಕ್ರವಾರ ಅಂದರೆ ನಾಳೆ ಸೆಪ್ಟೆಂಬರ್ 22ಕ್ಕೆ ಚಂದ್ರನ ಸೂರ್ಯೋದಯ ಸಮಯಕ್ಕೆ ಮತ್ತೆ ಎಚ್ಚರವಾಗುತ್ತಾ? ಎಂಬ ಪ್ರಶ್ನೆ ಜಗತ್ತನ್ನೇ ಕಾಡುತ್ತಿದೆ. ಹಾಗಾದರೆ ಲ್ಯಾಂಡರ್ & ರೋವರ್ ನಿದ್ದೆಯಿಂದ ಎದ್ದೇಳಿಸಲು ವಿಜ್ಞಾನಿಗಳು ಏನು ಮಾಡ್ತಾರೆ?

ಚಂದ್ರನ ಮೇಲೆ ಭಾರತದ ರೈಡಿಂಗ್!
ಅಷ್ಟಕ್ಕೂ ಚಂದ್ರನ ಅಂಗಳದಲ್ಲಿ ವಿಕ್ರಮ್ ಇಳಿದ ನಂತರ ರೋವರ್ ಚಂದ್ರನ ಒಂದು ಪೂರ್ತಿ ದಿನ ಅಂದರೆ ಭೂಮಿ ಲೆಕ್ಕದಲ್ಲಿ 14 ದಿನಗಳ ಕಾಲ ಕೆಲಸ ಮಾಡಿತ್ತು. ಆದರೆ ಅಲ್ಲಿ ಮತ್ತೆ ಸೂರ್ಯ ಮುಳುಗಿ, 14 ದಿನಗಳ ಹಿಂದೆ ಕಗ್ಗತ್ತಲು ಆವರಿಸಿತ್ತು. ಆಗ ಇಸ್ರೋ ವಿಜ್ಞಾನಿಗಳ ಬಳಗ ವೈಜ್ಞಾನಿಕ ಮಾಹಿತಿ ಸಂಗ್ರಹದ ಕಾರ್ಯ ನಿಲ್ಲಿಸಿದ್ದರು. ಈ ಮೂಲಕ ಇಸ್ರೋ ಸಂಸ್ಥೆ ವಿಜ್ಞಾನಿಗಳು ಲ್ಯಾಂಡರ್ ಮತ್ತು ರೋವರ್‌ನ ನಿದ್ರಾವಸ್ಥೆಗೆ ಕಳುಹಿಸಿದ್ದರು. ಆದರೆ ಈಗ ನಿದ್ದೆ ಮೂಡ್‌ನಿಂದ ಎಬ್ಬಿಸಬೇಕಿದೆ. ಈ ಕಾರಣಕ್ಕೆ ರೋವರ್ & ಲ್ಯಾಂಡರ್ ಆಕ್ಟಿವ್ ಮಾಡುವ ಪ್ರಯತ್ನ ಆರಂಭವಾಗಿದೆ.
ಲ್ಯಾಂಡರ್ ಮತ್ತೊಮ್ಮೆ ಲ್ಯಾಂಡ್ ಆಗಿತ್ತು!
ಹೌದು, ಭಾರತದ ವಿಕ್ರಮ್ ಲ್ಯಾಂಡರ್ ನಿದ್ದೆಗೆ ಜಾರುವ ಮೊದಲು ಮಹತ್ವದ ಬೆಳವಣಿಗೆ ನಡೆದಿತ್ತು. ಚಂದ್ರನಲ್ಲಿ ಕತ್ತಲು ಆವರಿಸಿದ ನಂತರ ಎಂಜಿನ್ ಉರಿಸುವ ಮೂಲಕ 'ವಿಕ್ರಮ್' ಲ್ಯಾಂಡರ್ ಅನ್ನ ಚಂದ್ರನ ನೆಲದಿಂದ ಲಾಂಚ್ ಮಾಡಿ ಒಂದಷ್ಟು ಪಕ್ಕಕ್ಕೆ ಸರಿಸಿ ಲ್ಯಾಂಡ್ ಮಾಡಿತ್ತು. ಹೀಗೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಎರಡೆರಡು ಬಾರಿ ಇಸ್ರೋ ಲ್ಯಾಂಡರ್ ಲ್ಯಾಂಡ್ ಆಗಿತ್ತು.

ಚಂದ್ರನ ನೆಲದಿಂದ ಸುಮಾರು 40 ಸೆಂಟಿಮೀಟರ್ ಮೇಲಕ್ಕೆ ಏರಿಸಿ, ಹಾಗೂ 30 ರಿಂದ 40 ಸೆಂ.ಮೀ ಪಕ್ಕ ತೇಲಿಸಲಾಗಿತ್ತು. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲೇ ಮತ್ತೊಂದು ಸ್ಥಳದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಸಲಾಗಿದೆ. ಹೀಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಒಟ್ಟಾರೆ ಎರಡೆರಡು ಬಾರಿ ಲ್ಯಾಂಡ್ ಮಾಡಿಸಲಾಗಿತ್ತು. ಆದರೆ ಈಗ ನಿದ್ದೆ ಮಾಡ್ತಿರುವ ಲ್ಯಾಂಡರ್ ಎಬ್ಬಿಸುವ ಪ್ರಯತ್ನ ಶುರುವಾಗಿದೆ. ಲ್ಯಾಂಡರ್ ಮತ್ತು ರೋವರ್ ಸೌರಫಲಕ ಸ್ಪಂದಿಸುವ ನಿರೀಕ್ಷೆ ವಿಜ್ಞಾನಿಗಳಲ್ಲಿ ಮನೆಮಾಡಿದೆ.
ಒಂದೇ ದಿನ ಕೆಲಸದ ಸಾಮರ್ಥ್ಯ
ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಹೊಂದಿರುವ ಉಪಕರಣಗಳು ಚಂದ್ರನಲ್ಲಿ ಕೇವಲ ಒಂದು ದಿನ ಮಾತ್ರ ಕೆಲಸ ಮಾಡಲು ಸಾಮರ್ಥ್ಯ ಹೊಂದಿವೆ. ಹೀಗೆಂದರೆ ಒಂದು ಸೂರ್ಯೋದಯದ ನಂತರ ಸೂರ್ಯಾಸ್ತ ಆಗುವವರೆಗೂ ಲ್ಯಾಂಡರ್ ಮತ್ತು ರೋವರ್‌ಗೆ ಕೆಲಸ ಮಾಡುವ ಸಾಮರ್ಥ್ಯ ಇತ್ತು. ಸೂರ್ಯನ ಬೆಳಕು ಇಲ್ಲದೆ ರೋವರ್ & ಲ್ಯಾಂಡರ್ ಕೆಲಸ ಮಾಡುವುದಿಲ್ಲ. ಹೀಗಾಗಿಯೇ ಎರಡನ್ನೂ ನಿದ್ದೆಗೆ ಜಾರಿಸಲಾಗಿತ್ತು.

ಲ್ಯಾಂಡರ್ & ರೋವರ್‌ಗೆ ಹೀಟರ್!
ಭೂಮಿಯ ರೀತಿ ಚಂದ್ರನ ಮೇಲೆ ವಾತಾವರಣ ಇಲ್ಲ, ಹೀಗಾಗಿ ಅಲ್ಲಿ ಸೂರ್ಯನ ಬೆಳಕು ಬಿದ್ದಾಗ ಅತಿಯಾದ ಬಿಸಿ. ಸೂರ್ಯ ಮುಳುಗಿದಾಗ ಅತಿಯಾದ ಚಳಿ ಇರುತ್ತದೆ. ಚಳಿಯ ಪರಿಸ್ಥಿತಿ ಹೇಗಿರುತ್ತೆ ಎಂದರೆ ಮೈಕೊರೆಯುವುದು ಪಕ್ಕಾ. ಹೀಗೆ ಚಂದ್ರನಲ್ಲಿ ರಾತ್ರಿಯ ವೇಳೆ ಹೆಪ್ಪುಗಟ್ಟುವ ವಾತಾವರಣ ಇರುವ ಕಾರಣಕ್ಕೆ ಲ್ಯಾಂಡರ್ & ರೋವರ್ ಬೆಚ್ಚಗಿರಲು ಹೀಟರ್ ಅಗತ್ಯ. ಹೀಟರ್‌ಗೆ 14 ದಿನಗಳ ಕತ್ತಲಿನಲ್ಲಿ ಶಕ್ತಿ ಪೂರೈಸುವ ಬ್ಯಾಟರಿ ಅಗತ್ಯವಿರುತ್ತದೆ. ಆಗ ಮಾತ್ರ ಅವು ಬದುಕುತ್ತವೆ. ಇದೇ ಕಾರಣಕ್ಕೆ ಬೇರೆ ಎಲ್ಲಾ ಕೆಲಸ ನಿಲ್ಲಿಸಿ, ಬ್ಯಾಟರಿ ಶಕ್ತಿಯ ಮೂಲಕ ರೋವರ್ & ಲ್ಯಾಂಡರ್‌ಗೆ ನಿದ್ದೆ ಮಾಡಿಸಿ ಹೀಟರ್ ಸೌಲಭ್ಯ ನೀಡಲಾಗಿತ್ತು.
ಇದೀಗ ನಿದ್ದೆಯಿಂದ ಏಳಿಸುವುದೇ ಕಷ್ಟ
ಆದ್ರೆ ಈಗ ಮತ್ತೆ ಚಂದ್ರನ ಮೇಲೆ ಸೂರ್ಯೋದಯ ಆಗುತ್ತಿದ್ದು, ನಾಳೆ ಅಂದ್ರೆ ಶುಕ್ರವಾರ ಚಂದ್ರನ ಮೇಲೆ ಸೂರ್ಯೋದಯ ಬಳಿಕ ಬಿಸಿಲು ಲ್ಯಾಂಡರ್ & ರೋವರ್‌ಗಳ ಸೌರ ಫಲಕದ ಮೇಲೆ ಬಿಳಲಿದೆ. ಆ ಬಳಿಕ ಲ್ಯಾಂಡರ್, ರೋವರ್ ಪುನಃ ತಮ್ಮ ತಮ್ಮ ಕೆಲಸ ಮಾಡಲು ಆರಂಭಿಸಿದರೆ ಬಾಹ್ಯಾಕಾಶ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ ಭಾರತದ ಇಸ್ರೋ ಸಂಸ್ಥೆ. ಹೀಗಾಗಿ ನಾಸಾ, ಯುರೋಪ್ ಬಾಹ್ಯಾಕಾಶ ಸಂಸ್ಥೆ, ಚೀನಾ, ರಷ್ಯಾ ಸೇರಿದಂತೆ ಇಡೀ ಜಗತ್ತು ಭಾರತದತ್ತ ಕಣ್ಣು ನೆಟ್ಟಿದೆ.

ಚಂದ್ರನ ಮೇಲೆ ಇತಿಹಾಸ ನಿರ್ಮಿಸಿದ್ದ ಭಾರತ
ಭಾರತದ ಇಸ್ರೋ ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸಿತ್ತು. ಚಂದ್ರಯಾನ-2 ಚಂದ್ರನ ಮೇಲೆ ಲ್ಯಾಂಡರ್ ಇಳಿಸುವಾಗಲೇ ಸ್ವಲ್ಪ ಎಡವಟ್ಟಾಗಿತ್ತು. ಹೀಗೆ ಸಣ್ಣ ಸಮಸ್ಯೆ ಯೋಜನೆ ಹಾಳು ಮಾಡಿತ್ತು. ಹೀಗಾಗಿ ಎಚ್ಚರಿಕೆ ವಹಿಸಿ, ಲ್ಯಾಂಡರ್ ಇಳಿಸುವ ಪ್ರತಿಕ್ಷಣವೂ ಇಸ್ರೋಗೆ ಗೊತ್ತಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ವಿಕ್ರಮ್‌ಗೆ ಸರಿಯಾದ ಲ್ಯಾಂಡಿಂಗ್ ಸ್ಥಳ ತೋರಿಸುತ್ತೆ. ಹಾಗೂ ಲ್ಯಾಂಡರ್‌ನ ಅಪಾಯ ಪತ್ತೆ & ಅಪಾಯ ತಪ್ಪಿಸುವ ಕ್ಯಾಮರಾ (LHDAC) ಕೂಡ ಇದರಲ್ಲಿತ್ತು.
ಅತ್ಯಾಧುನಿಕ ತಂತ್ರಜ್ಞಾನ ಇರುವ ಲ್ಯಾಂಡರ್
LPDC, LHDAC ಜತೆ ಲೇಸರ್ ಆಲ್ಟಿಮೀಟರ್ (LASA) & ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) & ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಪೇಲೋಡ್ ಜತೆ ಕೆಲಸ ಮಾಡಿವೆ. ಈ ಮೂಲಕ ಸಮತಟ್ಟಾದ ಜಾಗದ ಮೇಲೆ, ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಇಳಿಸಿದೆ ಇಸ್ರೋ. ಭಾರತದ ಈ ಸಾಧನೆಯನ್ನ ಜಗತ್ತಿನಲ್ಲೇ ಇದುವರೆಗೆ ಯಾವುದೇ ರಾಷ್ಟ್ರವೂ ಮಾಡಿಲ್ಲ. ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಮೊದಲ ಬಾರಿಗೆ ಎಂಟ್ರಿ ಕೊಟ್ಟಿತ್ತು. ಇದೀಗ ಮತ್ತೆ ಚಂದ್ರನ ಮೇಲೆ ಅಧ್ಯಯನಕ್ಕೆ ಭಾರತ ಸಿದ್ಧವಾಗಿದೆ.
ಒಟ್ನಲ್ಲಿ ಭಾರತ ಮತ್ತೊಂದು ಸಾಧನೆಗೆ ಸಜ್ಜಾಗಿದ್ದು, ಇಸ್ರೋ ವಿಜ್ಞಾನಿಗಳು ಚಂದ್ರನಲ್ಲಿನ ವಾತಾವರಣ ಅಧ್ಯಯನಕ್ಕೆ ಮತ್ತೆ ಸಿದ್ಧವಾಗಿದ್ದಾರೆ. ಇಷ್ಟುದಿನ ಸೂರ್ಯನ ಕಡೆಗೆ ಅಂದರೆ ಆದಿತ್ಯ ಎಲ್ 1 ಕಡೆ ಗಮನ ಇತ್ತು, ಈಗ ಮತ್ತೊಮ್ಮೆ ಚಂದ್ರನ ಮೇಲೆ ಗಮನ ನೆಡಲಿದೆ. ಈ ಮೂಲಕ ಭಾರತ ಅತ್ತ ಚಂದ್ರ & ಇತ್ತ ಸೂರ್ಯ ಇಬ್ಬರನ್ನ ಗೆಲ್ಲಲು ಮುನ್ನುಗ್ಗುತ್ತಿದೆ. ಹೀಗಾಗಿ ಜಗತ್ತಿನ ಮೂಲೆ ಮೂಲೆಯಲ್ಲಿರುವ ಭಾರತೀಯರು ಆ ಕ್ಷಣಕ್ಕೆ ಕಾಯುತ್ತಿದ್ದಾರೆ.
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications