ಸಂಜಯ್ ಲೀಲಾ ಬನ್ಸಾಲಿ ಮೇಲೆ ಮತ್ತೆ ಅಟ್ಯಾಕ್
ಇದೇ ವರ್ಷ ಜನವರಿ ತಿಂಗಳಲ್ಲಿ ಬನ್ಸಾಲಿ ನಿರ್ದೇಶದಲ್ಲಿ ಮೂಡಿಬರುತ್ತಿರುವ ಪದ್ಮಾವತಿ ಚಿತ್ರ ತಂಡದ ಮೇಲೆ ದಾಳಿಯಾಗಿತ್ತು. ಅದಾದ ನಂತರ, ಇದು ಎರಡನೇ ದಾಳಿ.
ಕೊಲ್ಹಾಪುರ (ಮಹಾರಾಷ್ಟ್ರ), ಮಾರ್ಚ್ 15: ಬಾಲಿವುಡ್ ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ 'ಪದ್ಮಾವತಿ' ಚಿತ್ರದ ಸೆಟ್ ಮೇಲೆ ಮತ್ತೆ ದಾಳಿಯಾಗಿದೆ.
ರಾಜಸ್ಥಾನದ ಪ್ರಖ್ಯಾತ ರಾಣಿ ಪದ್ಮಿನಿಯವರ ಜೀವನಾಧಾರಿತವಾದ ಈ ಚಿತ್ರದಲ್ಲಿ ಪದ್ಮಿನಿಯವರ ಬಗ್ಗೆ ಆಕ್ಷೇಪಾರ್ಹ ಸಂಗತಿಗಳನ್ನು ಅಳವಡಿಸಲಾಗಿದೆ ಎಂದು ಆರೋಪಿಸಿ ಈ ಹಿಂದೆ, ರಜಪೂತ್ ಕಾರ್ಣಿ ಸೇನೆಯು ದಾಳಿ ನಡೆಸಿತ್ತು.[ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಕಪಾಳಮೋಕ್ಷ]

ಇದೇ ವರ್ಷ ಜನವರಿ 27ರಂದು, ರಾಜಸ್ಥಾನದ ಜೈಗಢದಲ್ಲಿ ಚಿತ್ರ ತಂಡವು ಶೂಟಿಂಗ್ ನಲ್ಲಿ ನಿರತರಾಗಿದ್ದಾಗ, ರಜಪೂತ್ ಕಾರ್ಣಿ ಸೇನೆಯ ಕಾರ್ಯಕರ್ತರು ಚಿತ್ರತಂಡದ ಮೇಲೆ ದಾಳಿ ನಡೆಸಿದ್ದರು. ಇದೀಗ, ಕೊಲ್ಹಾಪುರದಲ್ಲಿ ಮತ್ತೊಂದು ದಾಳಿಯಾಗಿದೆ.












Click it and Unblock the Notifications