Get Updates
Get notified of breaking news, exclusive insights, and must-see stories!

ಶ್ರಾವಣ ಮಾಸ; ಶ್ರೀಶೈಲಂ ದೇವಾಲಯದ ಭಕ್ತರಿಗೆ ಪ್ರಮುಖ ಸೂಚನೆ

ಅಮರಾವತಿ, ಆಗಸ್ಟ್ 01; ಶ್ರಾವಣಮಾಸದಲ್ಲಿ ಶ್ರೀಶೈಲಂನ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಮಲ್ಲಿಕಾರ್ಜುನ ಸ್ವಾಮಿಯ ಸ್ಪರ್ಶ ದರ್ಶನವನ್ನು ಸಹ ನಾಲ್ಕು ಕಂತುಗಳಲ್ಲಿ ಒದಗಿಸಲಾಗುತ್ತದೆ ಎಂಬುದು ಸೇರಿದಂತೆ ಹಲವಾರು ಸೂಚನೆಗಳನ್ನು ಭಕ್ತರಿಗೆ ನೀಡಲಾಗಿದೆ.

ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯ ಶ್ರೀಶೈಲಂನ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯಕ್ಕೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದ್ದರಿಂದ ಡೆಪ್ಯುಟಿ ಕಲೆಕ್ಟರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಲವನ್ನ ಭಕ್ತರಿಗೆ ಹಲವಾರು ಸೂಚನೆ ನೀಡಿದ್ದಾರೆ.

direction-for-devotees-of-srisailam-temple

ದೇವಾಲಯದಲ್ಲಿ ಆಗಸ್ಟ್ 17ರಿಂದ ಸೆಪ್ಟೆಂಬರ್ 15ರ ತನಕ ನಿಜ ಶ್ರಾವಣ ಮಾಸದ ಹಬ್ಬ ಮತ್ತು ರಜಾ ದಿನಗಳಲ್ಲಿ ಶ್ರೀ ಸ್ವಾಮಿಯ ಗರ್ಭಗುಡಿ ಆರ್ಜಿತ ಅಭಿಷೇಕ ಹಾಗೂ ಸಾಮೂಹಿಕ ಆರ್ಜಿತ ಅಭಿಷೇಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಭಕ್ತರಿಗೆ ಸೂಚನೆಗಳು; ಶ್ರಾವಣಮಾಸೋತ್ಸವದಲ್ಲಿ ದೇವಾಲಯಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ, ಭಕ್ತರಿಗಾಗಿ ಹಲವು ಮಾಹಿತಿ ನೀಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ನಿಜ ಶ್ರಾವಣ ಮಾಸದ ಶ್ರಾವಣಮಾಸೋತ್ಸವ ಅಂದರೆ ಆಗಸ್ಟ್ 17 ರಿಂದ ಸೆಪ್ಟೆಂಬರ್ 15ರ ವರೆಗೆ ಗರ್ಭಗುಡಿ ಆರ್ಜಿತ ಅಭಿಷೇಕ ಸ್ಥಗಿತಗೊಳಿಸಲಾಗಿದೆ.

ಶ್ರಾವಣ ಮಾಸದಲ್ಲಿ ಶನಿವಾರ, ಭಾನುವಾರ, ಸೋಮವಾರ, ಸ್ವಾತಂತ್ರ್ಯ ದಿನ (ಆ.15), ವರಮಹಾಲಕ್ಷ್ಮಿ ವೃತ (ಆ.25), ಶ್ರಾವಣಪೌರ್ಣಮಿ (ಆ.31), ಶ್ರೀ ಕೃಷ್ಣಾಷ್ಟಮಿ (ಸೆ.6) ಮುಂತಾದ ದಿನಗಳಲ್ಲಿ ಗರ್ಭಗುಡಿ ಆರ್ಜಿತ ಅಭಿಷೇಕಗಳು ಮತ್ತು ಸಾಮುದಾಯಿಕ ಅಭಿಷೇಕಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಶ್ರಾವಣ ಮಾಸದ ಇನ್ನುಳಿದ ದಿನಗಳಲ್ಲಿ, ಸರ್ವದರ್ಶನದ ಜೊತೆಗೆ (ಉಚಿತ ಅಲಂಕಾರಿಕ ದರ್ಶನದ ಜೊತೆಗೆ), ಮಲ್ಲಿಕಾರ್ಜುನ ಸ್ವಾಮಿಯ ಸ್ಪರ್ಶ ದರ್ಶನವನ್ನು ಸಹ 4 ಕಂತುಗಳಲ್ಲಿ ಒದಗಿಸಲಾಗುತ್ತದೆ. ಅಮ್ಮನವರ ಕುಂಕುಮಾರ್ಚನೆಗಳನ್ನು ಸಹ ಎಂದಿನಂತೆ ಯಥಾವಿಧಿಯಾಗಿ ನಡೆಸಲಾಗುತ್ತದೆ.

ಶುಲ್ಕವನ್ನು ಪಾವತಿಸಬೇಕು; ದೇವಾಲಯಕ್ಕೆ ಆಗಮಿಸುವ ಭಕ್ತರು ಸ್ಪರ್ಶ ದರ್ಶನಕ್ಕಾಗಿ ರೂ. 500 ಶುಲ್ಕ ಪಾವತಿಸಬೇಕು. ಮೇಲೆ ತಿಳಿಸಿದ ನಿಗದಿತ ದಿನಗಳನ್ನು ಹೊರತುಪಡಿಸಿ ಶ್ರಾವಣ ಮಾಸದ ಇತರ ದಿನಗಳಲ್ಲಿ ಶ್ರೀ ಸ್ವಾಮಿಯವರಿಗೆ ಅಭಿಷೇಕಗಳು ಎಂದಿನಂತೆ ನಡೆಯಲಿವೆ.

ಈ ನಿರ್ದಿಷ್ಟ ದಿನಗಳನ್ನು ಹೊರತುಪಡಿಸಿ, ಸಾಮಾನ್ಯ ದಿನಗಳಲ್ಲಿ ಅಂದರೆ ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಮಧ್ಯಾಹ್ನ 2 ರಿಂದ ನೀಡಲಾಗುವ ಉಚಿತ ಸ್ಪರ್ಶ ದರ್ಶನ ಎಂದಿನಂತೆ ಮುಂದುವರಿಯಲಿದೆ. ಆದರೆ ಉಚಿತ ಸ್ಪರ್ಶ ದರ್ಶನಕ್ಕೆ ಬರುವ ಭಕ್ತರು ಮಧ್ಯಾಹ್ನ 1.30 ರೊಳಗೆ ಸರತಿ ಕಾಂಪ್ಲೆಕ್ಸ್‌ನಲ್ಲಿ ವರದಿ ಮಾಡಿಕೊಳ್ಳಬೇಕು.

ಭಕ್ತರು ಆರ್ಜಿತ ಅಭಿಷೇಕಗಳು, ಕುಂಕುಮಾರ್ಚನೆಗಳು, ಹೋಮಗಳು, ಶ್ರೀಸ್ವಾಮಿ ಅಮ್ಮನವರ ಕಲ್ಯಾಣೋತ್ಸವ ಇತ್ಯಾದಿ ಆರ್ಜಿತಸೇವಾ ಟಿಕೆಟ್‍ಗಳನ್ನು ಹಾಗೂ ಶ್ರೀಸ್ವಾಮಿಯ ಸ್ಪರ್ಶದರ್ಶನದ ಟಿಕೆಟ್‍ಗಳನ್ನು ದೇವಾಲಯದ ಅಧಿಕೃತ ವೆಬ್‍ಸೈಟ್‍ನಿಂದ ಮಾತ್ರ ಪಡೆಯಬೇಕು. ಪ್ರಸ್ತುತ ಬುಕಿಂಗ್ ಮೂಲಕ ಈ ಟಿಕೆಟ್‍ಗಳು ಲಭ್ಯವಿರುವುದಿಲ್ಲ.

ಭಕ್ತರು ಆಯಾ ಟಿಕೆಟ್‍ಗಳನ್ನು ವೆಬ್‍ಸೈಟ್ www.srisailadevasthanam.org ಮೂಲಕ ಮುಂಗಡವಾಗಿ ಪಡೆಯಬಹುದು. ಆಗಸ್ಟ್ ತಿಂಗಳ ಟಿಕೆಟ್ ಕೋಟಾವನ್ನು ಈಗಾಗಲೇ ವೆಬ್‍ಸೈಟ್‍ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಅದರಂತೆಯೇ, ಸೆಪ್ಟೆಂಬರ್ ತಿಂಗಳ ಟಿಕೆಟ್‍ಗಳ ಕೋಟಾ ಆಗಸ್ಟ್ 25 ರಿಂದ ಲಭ್ಯವಿರುತ್ತದೆ. ಟಿಕೆಟ್‍ಗಳ ಲಭ್ಯತೆಯ ಆಧಾರದ ಮೇಲೆ ಪ್ರಾರಂಭದ ಸಮಯಕ್ಕಿಂತ ಒಂದು ಗಂಟೆ ಮೊದಲು ಆನ್‍ಲೈನ್‍ನಲ್ಲಿ ಟಿಕೆಟ್‍ಗಳನ್ನು ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗುತ್ತದೆ.

ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಸ್ಪರ್ಶದರ್ಶನ ಚೀಟಿದಾರರು ಟಿಕೆಟ್ ಪ್ರತಿ (ಹಾರ್ಡ್ ಕಾಪಿ) ಮತ್ತು ಆಧಾರ್ ಕಾರ್ಡ್‍ನ ಮೂಲ ಅಥವಾ ಜೆರಾಕ್ಸ್ ಪ್ರತಿಯನ್ನು ತರಬೇಕು. ಆಯಾ ಸೇವಾ ಟಿಕೆಟ್‍ಗಳನ್ನು ಸ್ಕ್ಯಾನ್ ಮಾಡಿದ ನಂತರ ಮತ್ತು ಆಧಾರ್ ಗುರುತಿನ ಚೀಟಿಯೊಂದಿಗೆ ಆಯಾ ಟಿಕೆಟ್‍ಗಳನ್ನು ಪರಿಶೀಲಿಸಿದ ನಂತರ, ಭಕ್ತರಿಗೆ ಆಯಾ ಸೇವೆಗಳಿಗೆ ಅವಕಾಶ ನೀಡಲಾಗುತ್ತದೆ.

ಆದರೆ ರೂ.150 ತ್ವರಿತ ದರ್ಶನಕ್ಕೆ (ಶ್ರೀ ಸ್ವಾಮಿಯ ಅಲಂಕಾರಿಕ ದರ್ಶನ ಮಾತ್ರ) ಮತ್ತು ರೂ. 300 ಅತಿತ್ವರಿತ ದರ್ಶನ ಟಿಕೆಟ್‍ಗಳನ್ನು (ಶ್ರೀಸ್ವಾಮಿಯ ಅಲಂಕಾರಿಕ ದರ್ಶನ ಮಾತ್ರ) ಆನ್‍ಲೈನ್ ಮತ್ತು ಕರೆಂಟ್ ಬುಕಿಂಗ್ ಮೂಲಕ ಪಡೆಯಬಹುದು. ಈ ಪೈಕಿ ಶೇ.30ರಷ್ಟು ಟಿಕೆಟ್‍ಗಳನ್ನು ಆನ್‍ಲೈನ್‍ನಲ್ಲಿ ನೀಡಲಾಗಿದ್ದು, ಶೇ.70ರಷ್ಟು ಟಿಕೆಟ್‍ಗಳನ್ನು ಕರೆಂಟ್ ಬುಕ್ಕಿಂಗ್ ಮೂಲಕ ನೀಡಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+