ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವಯಾನಿ ಪ್ರಕರಣ; ಕ್ಷಮೆಯಾಚಿಸಲ್ಲ ಎಂದ ಅಮೆರಿಕ

By Mahesh
|
Google Oneindia Kannada News

ವಾಷಿಂಗ್ಟನ್/ನವದೆಹಲಿ, ಡಿ.20: ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರ ಜತೆ ಅಮಾನವೀಯವಾಗಿ ನಡೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿಂದರೆ ಕ್ಷಮೆ ಕೇಳಬೇಕು ಮತ್ತು ಅವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಅಮೆರಿಕಕ್ಕೆ ಭಾರತ ಮಾಡಿದ ಮನವಿ ಕಸದ ಬುಟ್ಟಿಗೆ ಬಿದ್ದಿದೆ.

'ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ದೇವಯಾನಿ ಅವರ ಮೇಲಿನ ಆರೋಪಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇದು ಕಾನೂನಿಗೆ ಸಂಬಂಧಿಸಿದ ವಿಚಾರ' ಎಂದು ಅಮರಿಕ ರಾಜ್ಯ ವಕ್ತಾರ ಮರಿಯಾ ಹರ್ಫ್ ಅವರು ತಿಳಿಸಿದ್ದಾರೆ. ಆದರೆ, ದೇವಯಾನಿ ಅವರಿಗೆ ಶಿಕ್ಷೆಯಿಂದ ವಿನಾಯತಿ ನೀಡುತ್ತಿರಾ ಮತ್ತು ಅಮೆರಿಕ ನ್ಯಾಯಾಲಯದಲ್ಲಿ ಅವರ ಮೇಲಿನ ಆರೋಪಗಳನ್ನು ಕೈ ಬಿಡುತ್ತಿರಾ ಎಂಬ ವರದಿಗಾರರ ಪ್ರಶ್ನೆಗೆ, ಇಲ್ಲ. ಯಾರೂ ಆರೋಪಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಉತ್ತರಿಸಿದ್ದಾರೆ.

Diplomat row updates: US envoy meets MEA officials

ಭಾರತೀಯ ರಾಜತಾಂತ್ರಿಕ ಅಧಿಕಾರಿಯ ವಿರುದ್ಧದ ಆರೋಪಗಳನ್ನು ಕೈಬಿಡಲು ನಿರಾಕರಿಸಿದ ಹರ್ಫ್, ದೇವಯಾನಿ ವಿರುದ್ಧದ ದೂರಿನ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ನಾನು ಆ ಬಗ್ಗೆ ಏನನ್ನು ಹೇಳುವುದಿಲ್ಲ ಎಂದಿದ್ದಾರೆ. ದೇವಯಾನಿ ಪ್ರಕರಣದ ಬೆಳವಣಿಗೆಗಳ ಮುಖ್ಯಾಂಶ ಇಲ್ಲಿ ಓದಿ:

* ಭಾರತಕ್ಕೆ ಯುಎಸ್ ರಾಯಭಾರಿ ನ್ಯಾನ್ಸಿ ಪೊವೆಲ್ ಅವರು ವಿದೇಶಾಂಗ ಖಾತೆ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
* ದೇವಯಾನಿ ಜತೆಗಿನ ಅಮಾನವೀಯ ವರ್ತನೆಗೆ ಅಮೆರಿಕ ವಿಷಾದ ವ್ಯಕ್ತಪಡಿಸಿತ್ತು. ಇದನ್ನು ತಿರಸ್ಕರಿಸಿದ್ದ ಭಾರತ, ವಿಷಾದ ವ್ಯಕ್ತಪಡಿಸಿದರೆ ಸಾಲದು ಅಮೆರಿಕ ತನ್ನ ತಪ್ಪಿಗಾಗಿ ಕ್ಷಮೆ ಕೋರಬೇಕು ಎಂದು ಪಟ್ಟುಹಿಡಿದಿದೆ.
* ದೇವಯಾನಿ ವಿರುದ್ಧ ದಾಖಲಿಸಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು ಹಾಗೂ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಕಮಲ್ ನಾಥ್ ಭಾರತ ಒತ್ತಾಯಿಸಿದೆ. ಆದರೆ, ಕಾನೂನು ಪ್ರಕಾರ ವಿಚಾರಣೆ ನಡೆಯಲೇಬೇಕು ಎಂದು ಅಮೆರಿಕ ಹೇಳಿದೆ.
* ಬಿಜೆಪಿ ವಕ್ತಾರ ಮುಖ್ತಾರ್ ಅಬ್ಬಾಸ್ ನಖ್ವಿ ಮಾತನಾಡಿ, ಅಮೆರಿಕ ಕ್ಷಮೆಯಾಚಿಸಲೆ ಬೇಕು ಎಂದು ಒತ್ತಾಯಿಸಿದ್ದಾರೆ.
* ಈ ನಡುವೆ ದೇವಯಾನಿ ಅವರ ಮನೆ ಕೆಲಸಗಾರ್ತಿ ಸಂಗೀತ ರಿಚರ್ಡ್ ಬಂಧನ ಭೀತಿ ಎದುರಿಸುತ್ತಿದ್ದಾರೆ. ಭಾರತಕ್ಕೆ ಆಕೆ ಕಾಲಿಡುತ್ತಿದ್ದಂತೆ ಬಂಧಿಸುವ ಸಾಧ್ಯತೆಯಿದೆ. ದೆಹಲಿ ಕೋರ್ಟ್ ಸಂಗೀತ ಹಾಗೂ ಆಕೆ ಪತಿ ಫಿಲಿಫ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
* ದೇವಯಾನಿ ತಂದೆ ಉತ್ತಮ್ ಖೋಬ್ರಾಗಡೆ ಅವರು ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ನ್ಯಾಯ ಸಿಗದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಹೂಡುವುದಾಗಿ ಹೇಳಿದ್ದಾರೆ.
* ಈ ನಡುವೆ ಸಂಗೀತ ರಿಚರ್ಡ್ ಒಬ್ಬ ಯುಎಸ್ ಗೂಢಚಾರಿಣಿ ಎಂಬ ಸುದ್ದಿಗಳು ಹಬ್ಬಿವೆ.

English summary
As the row between India and US over the arrest of diplomat Devyani Khobragade is escalating, US refused to accept India's demands on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X