ದಿಗ್ವಿಜಯ್ ಸಿಂಗ್ ಪ್ರಮಾದಕ್ಕೆ ಟ್ವಿಟರ್ ನಲ್ಲಿ ಅಪಹಾಸ್ಯ
ರಾಜೀವ್ ಗಾಂಧಿ ಕ್ಯಾಬಿನೆಟ್ ಎಂದು ಬರೆಯುವ ಬದಲಿಗೆ ರಾಹುಲ್ ಗಾಂಧಿ ಕ್ಯಾಬಿನೆಟ್ ಎಂದು ಟ್ವೀಟ್ ಮಾಡಿದ್ದಕ್ಕೆ ಟ್ವೀಟರ್ ನಲ್ಲಿ ನಗೆಪಾಟಲಿಗೆ ಈಡಾದ ಹಿರಿಯ ಕಾಂಗ್ರೆಸ್ ನಾಯಕ.
ನವದೆಹಲಿ, ಮಾರ್ಚ್ 28: ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಕಣ್ತಪ್ಪಿನಿಂದ ಆದ ವಿಚಾರಕ್ಕಾಗಿ ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಟ್ವಿಟರ್ ನಲ್ಲಿ ನಗಪಾಟಲಿಗೀಡಾದ ಪ್ರಸಂಗ ನಡೆದಿದೆ.
ಮಾರ್ಚ್ 27ರಂದು ಕಾಂಗ್ರೆಸ್ ಸಂಸದೆ ರಾಜಕುಮಾರಿ ರತ್ನಾ ಸಿಂಗ್ ಅವರ ಬಗ್ಗೆ ಸಂಕ್ಷಿಪ್ತ ವಿವರಣೆಯೊಂದನ್ನು ಕೊಟ್ಟಿದ್ದ ದಿಗ್ವಿಜಯ ಸಿಂಗ್, ರತ್ನಾ ಸಿಂಗ್ ಅವರು, ಇಂದಿರಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ರಾಜಾ ದಿನೇಶ್ ಸಿಂಗ್ ಅವರ ಪುತ್ರಿ ಎಂದು ತಿಳಿಸಿದ್ದರು.

ತಕ್ಷಣವೇ ಅವರ ಟ್ವೀಟ್ ನಲ್ಲಿದ್ದ ತಪ್ಪನ್ನು ಗುರುತಿಸಿದ್ದ ಹಲವಾರು ಮಂದಿ, ಅದು ರಾಹುಲ್ ಗಾಂಧಿಯಲ್ಲ, ರಾಜೀವ್ ಗಾಂಧಿ ಎಂದಿರಬೇಕಿತ್ತು ಎಂದು ತಿಳಿಸಿದ್ದರು.
ದಿಗ್ವಿಜಯ ಸಿಂಗ್ ಅವರಿಗೆ ಅವರ ತಪ್ಪು ತಿಳಿದು ತಕ್ಷಣವೇ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಆದರೆ, ಅಷ್ಟರಲ್ಲಿ ತಡವಾಗಿತ್ತು. ಹಲವಾರು ಮಂದಿ ದಿಗ್ವಿಜಯ್ ಅವರ ಪ್ರಮಾದಕ್ಕೆ ತಮಾಷೆ ಮಾಡಿ, ಕಾಲೆಳೆದು ಆಗಿತ್ತು.












Click it and Unblock the Notifications