ಅಸಾರಾಂ ಬಾಪುಗೆ ಭಾರಿ ಗುರುದಕ್ಷಿಣೆ ಸಲ್ಲಿಸಿದ್ದ ದಿಗ್ವಿಜಯ್!
ಇಂದೋರ್,
ಸೆ. 12: ಪೊಲೀಸ್ ಕಂಬಿ ಎಣಿಸುತ್ತಿರುವ ಕುಖ್ಯಾತ ಅಧ್ಯಾತ್ಮ ಗುರು ಅಸಾರಾಂ ಬಾಪು 'ಜೀವನೋಪಾಯಕ್ಕಾಗಿ ಏನೂ ಇಲ್ಲದೆ ಇಂದು ಸಾವಿರಾರು ಕೋಟು ರೂ ಆಸ್ತಿಯ ಒಡೆಯನಾಗಿದ್ದು ಹೇಗೆ!?' ಎಂದು ಜನಸಾಮಾನ್ಯರು ತಲೆಕೆಡಿಸಿಕೊಳ್ಳುತ್ತಿರುವಾಗಲೇ id="toptextpromo"> id='are-slot-1' class='oiad oi-axt oiadv'>ರಾಜಕಾರಣಿಗಳು
ಸಫ ಕಾಲ್ಡ್ ದೇವ ಮಾನವರ ನಡುವಣ 'ಬಾಂಧವ್ಯ' ಮತ್ತೊಮ್ಮೆ ಬೆಳಕಿಗೆ ಬಂದಿದೆ. ಅಸಲಿಗೆ ಖಾದಿ ನೇತಾರರ ಸಂಗವಿಲ್ಲದೆ ಖಾವಿಧಾರಿಗಳು ಪ್ರತಿಷ್ಠಾಪಿಸುವುದಾದರು ಹೇಗೆ ಎಂಬುದಕ್ಕೆ ಮತ್ತೊಂದು ಪುರಾವೆ ಹೊರಬಿದ್ದಿದೆ. id='are-slot-2' class='oiad oi-axt oiadv'>ಏನಪ್ಪಾ
ಅಂದರೆ ಇದೀಗ, ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅಂದರೆ ಬಿಜೆಪಿ ಎಂಬಂತೆ ಬಿಂಬಿಸಲಾಗುತ್ತಿದೆ. ಅದು ಇದ್ದರೂ ಇರಬಹುದು. ಆದರೆ ಅದಕ್ಕೆ ಕಾಂಗ್ರೆಸ್ ನಾಯಕರೂ ಹೇಗೆ ಅಳಿಲು ಕಾಣಿಕೆ ಸಲ್ಲಿಸಿದ್ದಾರೆ ಎಂಬುದು ಬಹಿರಂಗವಾಗಿದೆ.
ಅಸಾರಾಂ ಬಾಪುಗೆ 1998ರಲ್ಲಿ 7 ಹೆಕ್ಟೇರು ಭೂಮಿ ಧಾರೆ
ಈ ಹಿಂದೆ ಮಧ್ಯಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ, ಇಂದಿನ ಕಾಂಗ್ರೆಸ್ ಬಿಗ್ ಮೌತ್ ಪೀಸ್ ದಿಗ್ವಿಜಯ್ ಸಿಂಗ್ ಸಾಹೇಬರು ಮುಖ್ಯಮಂತ್ರಿಯಾಗಿ ತಮ್ಮ ವಿವೇಚನೆ ಬಳಸಿ ಇದೇ ಅಸಾರಾಂ ಬಾಪುಗೆ 1998ರಲ್ಲಿ ಅಮೂಲ್ಯ 7 ಹೆಕ್ಟೇರು ಭೂಮಿಯನ್ನು ಧಾರೆಯೆರೆದುಕೊಟ್ಟಿದ್ದಾರಂತೆ. ಇದು ಈ ಸಂಬಂಧ ಕೋರ್ಟ್ ಕಟಕಟೆಯಲ್ಲಿ ವಿಚಾರಣೆಗೆ ಬಂದಿದೆ.

ಕಾಂಗೈ ಬಿಗ್ ಮೌತ್ ಪೀಸ್ ದಿಗ್ವಿಜಯ್ ಕರಾಮತ್ತು
ಇಂದೋರಿನಲ್ಲಿರುವ ಅಸಾರಾಂ ಬಾಪು ಟ್ರಸ್ಟಿಗೆ ಇದೇ ದಿಗ್ವಿಜಯ್ ಸಿಂಗ್ ವರ್ಷಕ್ಕೆ 1 ರೂಪಾಯಿ ಗುತ್ತಿಗೆ ಆಧಾರದಲ್ಲಿ ಕಾನೂನುಬಾಹಿರವಾಗಿ ಸದರಿ 7 ಹೆಕ್ಟೇರು ಸರಕಾರಿ ಭೂಮಿಯನ್ನು ಅಸಾರಾಂಗೆ ಪರಭಾರೆ ಮಾಡಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಭಂಡಾರಿ ಎಂಬ ಉದ್ಯಮಿಯೊಬ್ಬರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

1998ರಲ್ಲಿ ಮಾರುಕಟ್ಟೆ ಬೆಲೆ ಕೇವಲ 5 ಕೋಟಿ ರೂ
ಈ ಭೂಮಿಯ ಅಂದಿನ (1998ರಲ್ಲಿ) ಮಾರುಕಟ್ಟೆ ಬೆಲೆ ಕೇವಲ 5 ಕೋಟಿ ರೂಪಾಯಿ. ಅಸಾರಾಂ ಬಾಪುವಿನ ಶಿಷ್ಯರಾಗಿದ್ದ ಅಂದಿನ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಈ ಅಮೂಲ್ಯ ಭೂಮಿಯನ್ನು ಗುರುದಕ್ಷಿಣೆಯಾಗಿ ಸಲ್ಲಿಸಿದ್ದರು ಎಂದು ಭಂಡಾರಿ ಆರೋಪಿಸಿದ್ದಾರೆ.

ಅಸಾರಾಂ ಟ್ರಸ್ಟಿಗೆ ನೋಟಿಸ್ ಜಾರಿ
ಅಸಾರಾಂ ಬಾಪುವಿನ ಪುತ್ರ ನಾರಾಯಣ ಸಾಯಿ 1998ರಲ್ಲಿ ಸದರಿ ಟ್ರಸ್ಟಿನ ಅಧ್ಯಕ್ಷರಾಗಿದ್ದರು. ಇಂದೋರ್ ಕೋರ್ಟ್ ಸೆಪ್ಟೆಂಬರ್ 16ರಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಈ ಮಧ್ಯೆ ಜಿಲ್ಲಾಡಳಿತವು ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಅಸಾರಾಂ ಟ್ರಸ್ಟಿಗೆ ನೋಟಿಸ್ ಜಾರಿ ಮಾಡಿದೆ. ಇನ್ನು, 72 ವರ್ಷದ ಅಸಾರಾಂ ಬಾಪು ಪ್ರಸ್ತುತ ಜೋಧಪುರ ಜೈಲಿನಲ್ಲಿದ್ದಾರೆ.












Click it and Unblock the Notifications