ಹೃದಯಾಘಾತದಿಂದ ಖ್ಯಾತ ಸಿನಿಮಾ ನಿರ್ದೇಶಕ ಸಾವು
ಹಿಂದಿ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ 'ಧೂಮ್' ನಿರ್ದೇಶಕ ಸಂಜಯ್ ಗಧ್ವಿ ಭಾನುವಾರ ಬೆಳಗ್ಗೆ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅವರ ಹಿರಿಯ ಪುತ್ರಿ ಸಂಜಿನಾ ಹೇಳಿದ್ದಾರೆ.
ಸಂಜಯ್ ಗಧ್ವಿ ಅವರಿಗೆ 56 ವರ್ಷ ವರ್ಷ ವಯಸ್ಸಾಗಿತ್ತು, ತಮ್ಮ 57 ನೇ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಇನ್ನೂ ಮೂರು ದಿನ ಇದ್ದಾಗಲೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಪ್ರಮುಖ ನಿರ್ಮಾಣ ಕಂಪನಿ ಯಶ್ ರಾಜ್ ಫಿಲ್ಮ್ಸ್‌ನ "ಧೂಮ್" ಫ್ರ್ಯಾಂಚೈಸ್‌ನಲ್ಲಿ ಎರಡು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ ನಂತರ ಜನಪ್ರಿಯರಾಗಿದ್ದರು.

2004ರಲ್ಲಿ ಬಿಡುಗಡೆಯಾದ ಧೂಮ್ ಮತ್ತು 2006ರಲ್ಲಿ ಬಿಡುಗಡೆಯಾದ ಧೂಮ್ -2 ಚಿತ್ರವನ್ನು ಸಂಜಯ್ ಗಧ್ವಿ ನಿರ್ದೇಶಿಸಿದ್ದರು. ಈ ಎರಡು ಚಿತ್ರಗಳು ಹಿಂದಿ ಚಿತ್ರರಂಗದ ಸೂಪರ್ ಹಿಟ್ ಚಿತ್ರಗಳಾಗಿವೆ.
ಸಂಜಯ್ ಗಧ್ವಿ ಮಗಳು ನೀಡಿರುವ ಮಾಹಿತಿಯ ಪ್ರಕಾರ, ಅವರು ಸಂಪೂರ್ಣ ಆರೋಗ್ಯವಾಗಿದ್ದರು, ಯಾವುದೇ ಕಾಯಿಲೆಯ ಮುನ್ಸೂಚನೆ ಇರಲಿಲ್ಲ ಎಂದು ವರದಿಯಾಗಿದೆ.
"ಭಾನುವಾರ ಬೆಳಿಗ್ಗೆ 9.30 ಕ್ಕೆ ಅವರ ನಿವಾಸದಲ್ಲಿ ನಿಧನರಾದರು. ಅದು ಏನೆಂದು ನಮಗೆ ಖಚಿತವಾಗಿಲ್ಲ, ಆದರೆ ಇದು ಹೃದಯಾಘಾತವಾಗಿದೆ. ಅವರು ಅಸ್ವಸ್ಥರಾಗಿರಲಿಲ್ಲ, ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರು" ಎಂದು ಗಧ್ವಿ ಅವರ ಪುತ್ರಿ ಸಂಜಿನಾ ಪಿಟಿಐಗೆ ತಿಳಿಸಿದ್ದಾರೆ.
ಗಾಧ್ವಿ 2000 ರಲ್ಲಿ "ತೇರೆ ಲಿಯೆ" ಚಿತ್ರದ ಮೂಲದ ಹಿಂದಿ ಚಿತ್ರರಂಗಕ್ಕೆ ಪ್ರವೇಶ ಮಾಡಿದರು, ನಂತರ 2002 ರ "ಮೇರೆ ಯಾರ್ ಕಿ ಶಾದಿ ಹೈ", ಸಿನಿಮಾ ಮೂಲಕ ಯಶ್ ರಾಜ್ ಫಿಲ್ಮ್ಸ್ ಅವರ ಜೊತೆ ಕೆಲಸ ಮಾಡಿದ್ದರು. ಸಂಜಿನಿ ಅಲ್ಲದೆ, ಗಾಧ್ವಿ ಅವರು ಪತ್ನಿ ಮತ್ತು ಇನ್ನೊಬ್ಬ ಮಗಳನ್ನು ಅಗಲಿದ್ದಾರೆ.
ಖ್ಯಾತ ನಿರ್ದೇಶನ ಸಾವಿಗೆ ಹಿಂದಿ ಚಿತ್ರರಂಗ ಕಂಬನಿ ಮಿಡಿದಿದೆ. ಯಶ್‌ರಾಜ್ ಫಿಲಮ್ಸ್ ಕೂಡ ಗಧ್ವಿ ಸಾವಿಗೆ ಆಘಾತ ವ್ಯಕ್ತಪಡಿಸಿದ್ದು, ಹಿಂದಿ ಚಿತ್ರರಂಗ ಅತ್ಯುತ್ತಮ ನಿರ್ದೇಶಕನನ್ನು ಕಳೆದುಕೊಂಡಿದೆ ಎಂದು ಹೇಳಿದೆ.












Click it and Unblock the Notifications