ಧಾರಾವಿ ಪುನರ್‌ಅಭಿವೃದ್ಧಿ ಯೋಜನೆ: ಮನೆ ತೆರವು ವಿಳಂಬವಾದರೆ ಬಾಡಿಗೆ ಸಿಗಲ್ಲ! ಎಚ್ಚರಿಸಿದ ANDPL

ಮುಂಬೈ: ದೇಶದ ಅತೀ ದೊಡ್ಡ ಸ್ಲಂ ಪ್ರದೇಶವಾದ ಮುಂಬೈನ ಧಾರಾವಿಯು ಪ್ರಮುಖ ಯೋಜನೆ ಅಡಿಯಲ್ಲಿ ಪುನರ್ ಅಭಿವೃದ್ಧಿಗೊಳ್ಳುತ್ತಿದೆ. ಧಾರಾವಿ ಪುನರಾಭಿವೃದ್ಧಿ ಯೋಜನೆಗೆ (DRP) ಬೇಕಾದ ಗುಡಿಸಲುಗಳನ್ನು ತೆರವು ಮಾಡಲು ಬೇಕು ಅಂತಲೇ ವಿಳಂಬ ಮಾಡುವ ನಿವಾಸಿಗಳಿಗೆ 'ಟ್ರಾನ್ಸಿಟ್ ಬಾಡಿಗೆ' ಕಡಿಮೆ ಮಾಡಲಾಗುವುದು ಎಂದು ಯೋಜನೆಯ ಕೈಗೆತ್ತಿಕೊಂಡ ಉಸ್ತುವಾರಿ ವಿಶೇಷ ಉದ್ದೇಶದ ಸಂಸ್ಥೆ (SPV), 'ಅದಾನಿ ಧಾರಾವಿ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್' (ANDPL) ತಿಳಿಸಿದೆ.

ಯಾರೆಲ್ಲ ಅಭಿವೃದ್ಧಿ ಸಹಕರಿಸಿ ಸ್ವಯಂ ಪ್ರೇರಣೆಯಿಂದ ಮನೆಗಳನ್ನು ಖಾಲಿ ಮಾಡುತ್ತಾರೋ ಅವರಿಗೆಲ್ಲ ಈ ಕ್ರಮ ಅನ್ವಯಿಸುವುದಿಲ್ಲ. ಅವರಿಗೆಲ್ಲ ಪೂರ್ಣ 'ಟ್ರಾನ್ಸಿಟ್ ಬಾಡಿಗೆ' ಸಿಗಲಿದೆ. ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

Dharavi Redevelopment Project

16 ಗುಡಿಸಲುಗಳಿಗೆ ತೆರವಿಗೆ ಸೂಚನೆ ಕೊಟ್ಟ ಬಳಿಕ ಡಿಆರ್ ಪಿ ಅಧಿಕಾರಿಗಳು ಕುಟುಂಬಗಳ ಮನವೊಲಿಸಲು ಯತ್ನಿಸಿದರು. ಆದರೆ ಅವರಲ್ಲಿ ನಾಲ್ವರು ಮಾತ್ರ ಸ್ವಯಂ ಆಗಿ ಮನೆ ಬಿಟ್ಟು ಹೊರ ನಡೆಯಲು ಒಪ್ಪಲಿಲ್ಲ. ಇದರಿಂದ ಪೊಲೀಸರ ಸಹಾಯ ಪಡೆಯಲಾಯಿತು. ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಮನೆ ಖಾಲಿ ಮಾಡಿಸಲು 85 ಗುಡಿಸಲುಗಳನ್ನು ಗುರುತಿಸಲಾಗಿತ್ತು. ಆದರೆ ಅವರೆಲ್ಲ ಪರಿಸ್ಥಿತಿ ಅರ್ಥ ಮಾಡಿಕೊಂಡು ಮನೆ ಖಾಲಿ ಮಾಡಿದರು ANDPL ತಿಳಿಸಿದೆ.

ANDPL ಪ್ರಕಾರ, ಧಾರಾವಿ ನಿವಾಸಿಗಳಲ್ಲಿ ಬಹುಪಾಲು ಮಂದಿ ಮನವೊಲಿಕೆಯಿಂದ ತೆರಳಿದ್ದಾರೆ. ಆದರೆ ಇನ್ನು ಕೆಲವರು ದುರುದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವುದು ಗೊತ್ತಾಗಿದೆ. ಇದರಿಂದ ಅಭಿವೃದ್ಧಿ ಯೋಜನೆಗೆ ತಡೆ ಒಡ್ಡಿದಂತಾಗುತ್ತದೆ. ಮನವೊಲಿಕೆಗೆ ಒಪ್ಪಿದರೆ ಆ ಕುಟುಂಬಗಳು ಸ್ವಯಂಪ್ರೇರಣೆಯಿಂದ ಸ್ಥಳಾಂತರಗೊಳ್ಳಲು ಸಹಾಯ ಮಾಡಲಾಗುವುದು. ಆಗ ನಿಗದಿತ ಸ್ಥಳವು ಭಾಗಶಃ ಆಕ್ರಮಿತವಾಗಿದ್ದಾಗ ಪುನರ್ವಸತಿ ನಿರ್ಮಾಣ ಕಾರ್ಯ ಆರಂಭಿಸಲು ಸಾಧ್ಯವಾಗುವುದಿಲ್ಲ. ಪುನರ್ ಅಭಿವೃದ್ಧಿ ಆಗಿ ಸಾವಿರಾರು ಇತರ ಕುಟುಂಬಗಳು ಹೊಸ ವಸತಿಗೆ ಮರಳಲು ವರ್ಷಗಳ ಕಾಲ ಕಾಯಬೇಕಾಗುತ್ತದೆ. ಆಗ ದೈನಂದಿನ ವೆಚ್ಚ ಹೆಚ್ಚಾಗುತ್ತಲೇ ಹೋಗುತ್ತದೆ ಎಂದು ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.

ಯೋಜನೆಯಿಂದ 10 ಲಕ್ಷ ಜನಜೀವನದ ಮೇಲೆ ಪ್ರಭಾವ

ಹೌದು, ಪ್ರಸ್ತು ಧಾರಾವಿ ಪುನರಾಭಿವೃದ್ಧಿ ಯೋಜನೆಯು ಅಲ್ಲಿ ವಾಸಿಸುವ ಪ್ರಮುಖ 10 ಲಕ್ಷ ಜನರ ಜೀವನದ ಮೇಲೆ ಪ್ರಭಾವ ಉಂಟು ಮಾಡುತ್ತಿದೆ. ಅಂದರೆ ಯೋಜನೆ ವಿಳಂಬವಾದರೆ ಇತರರ ಪುನರ್‌ ವಸತಿಗೆ ತೊಂದರೆ ಆಗುತ್ತದೆ. ಈ ಯೋಜನೆಯ ನಿಯಮಗಳ ಅಡಿಯಲ್ಲಿ ಅರ್ಹ ನಿವಾಸಿಗಳಿಗೆ ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಪ್ರಯೋಜನ ಒದಗಿಸುತ್ತದೆ. 2000 ಜನವರಿ 1 ಇಲ್ಲವೇ ಅದಕ್ಕೂ ಮೊದಲೇ ಈ ಸ್ಲಂ ನಲ್ಲಿದ್ದ ಅರ್ಹ ನೆಲಮಹಡಿಯ ನಿವಾಸಿಗಳಿಗೆ ಧಾರಾವಿಯಲ್ಲೇ 350 ಚದರ ಅಡಿಯ ಮನೆ ಉಚಿತವಾಗಿ ನೀಡಲಾಯಿತು. ನಂತರ 2000 ರಿಂದ 2011 ರ ಅವಧಿಗೆ ಸೇರಿದವರು, 2.5 ಲಕ್ಷ ರೂಪಾಯಿ ಪಾವತಿಸಿ ನಗರ ಭಾಗದಲ್ಲಿ 300 ಚ.ಅ ಮನೆ ಹೊಂದಲು ಅವರು ಅರ್ಹರಾದರು. ನಂತರ 2011ರ ಬಳಿಕ ನೆಲೆಸಿದ ನಿವಾಸಿಗಳು ಹಾಗೂ 2022ರ ನವೆಂಬರ್ 15ರ ವೇಳೆಗೆ ಅಸ್ತಿತ್ವದಲ್ಲಿದ್ದ ಮೇಲಿನ ಮಹಡಿಗಳ ಮನೆಗಳ ನಿವಾಸಿಗಳು, ಧಾರಾವಿಯ ಹೊರಗೆ 300 ಚದರ ಅಡಿಯ ಕೈಗೆಟುಕುವ ಬಾಡಿಗೆ ನೀತಿಯ ವ್ಯಾಪ್ತಿಗೆ ಒಳಪಟ್ಟರು.

ಉದ್ದೇಶಪೂರ್ವಕ ವಿಳಂಬ ವಿರುದ್ಧ ಕಾನೂನು ಅಸ್ತ್ರ

ಸ್ವಾರ್ಥ ಹಿತಾಸಕ್ತಿಗಳಿಂದಾಗಿ ಮನೆ ಖಾಲಿ ಮಾಡಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದರೆ ಅವರ ವಿರುದ್ಧ ದರ ಕಡಿತ ಜೊತೆಗೆ ಕಾನೂನು ಬೆಂಬಲ ಪಡೆದು ಖಾಲಿ ಮಾಡಿಲು ತೀರ್ಮಾನಿಸಲಾಗಿದೆ ಎಂದು ANDPL ತಿಳಿಸಿದೆ. ಮಹಾರಾಷ್ಟ್ರ ಕೊಳೆಗೇರಿ ಪ್ರದೇಶಗಳ ಕಾಯಿದೆ, 1971 ರ ಸೆಕ್ಷನ್ 33 ಮತ್ತು 38 ಹಾಗೂ DCPR 2034 ರ ನಿಯಮಾವಳಿ 33(10A) ರ ಖಂಡ 1.14(iii) ಮತ್ತು (iv) ರ ಅಡಿಯಲ್ಲಿ, ಪ್ರಮುಖ ಸಾರ್ವಜನಿಕ ಮೂಲಸೌಕರ್ಯ ಯೋಜನೆ ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಲು ಪ್ರಯತ್ನಿಸುವ ನಿವಾಸಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅಧಿಕಾರವಿದೆ ಎಂದು ತಿಳಿಸಿದೆ.

ವಿಳಂಬ ಬಳಿಕ ಪರಿಷ್ಕೃತ ಬಾಡಿಗೆ ಪಾವತಿ ಹೀಗಿದೆ

ಯೋಜನೆಗೆ ಸಹಕರಿಸದೇ ಇರುವ ನಿವಾಸಿಗಳಿಗೆ ಅನ್ವಯವಾಗುವ ಪರಿಷ್ಕೃತ ತಾತ್ಕಾಲಿಕ ವಸತಿ ಬಾಡಿಗೆ ಪಟ್ಟಿ

* ನೆಲಮಹಡಿಯ ನಿವಾಸಿಗಳು: ಮಾಸಿಕ 15,000 ರೂ. (ಹಿಂದೆ 18,000 ರೂ. ಇತ್ತು)
* ಮೇಲಿನ ಮಹಡಿಯ ನಿವಾಸಿಗಳು: ಮಾಸಿಕ 12,000 ರೂ. (ಹಿಂದೆ 15,000 ರೂ.)
* ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರು: ಪ್ರತಿ ಚದರ ಅಡಿಗೆ 145 ರೂ. (ಹಿಂದೆ 1ಚ.ಅ.ಗೆ 175 ರೂ. ಇತ್ತು)
* ಸಹಕರಿಸದ ಕುಟುಂಬಗಳು 5,000 ರೂ.ಗಳ ಒಂದು ಬಾರಿಯ ಸ್ಥಳಾಂತರ ಭತ್ಯೆ ಹಕ್ಕು ಕಳೆದುಕೊಳ್ಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+