ಕೇರಳಕ್ಕೆ ಹೆಚ್ಚುವರಿ ವಿಮಾನ: ಖಾಸಗಿ ವಿಮಾನ ಕಂಪನಿಗಳಿಗೆ ಸೂಚನೆ

ಬೆಂಗಳೂರು, ಆಗಸ್ಟ್ 18: ಕೇರಳದಲ್ಲಿ ಉಂಟಾಗಿರುವ ಭೀಕರ ಮಳೆ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ ಕೊಚ್ಚಿನ್‌ ವಿಮಾನ ನಿಲ್ದಾಣ ಹೊರತುಪಡಿಸಿ ಕೇರಳದ ವಿವಿಧ ವಿಮಾನನಿಲ್ದಾಣಗಳಿಗೆ ದೇಶದ ನಾನಾ ಕಡೆಯಿಂದ ಖಾಸಗಿ ವಿಮಾನ ಸಂಸ್ಥೆಗಳು ಹೆಚ್ಚುವರಿ ವಿಮಾನಗಳ ಸಂಚಾರ ಕಾರ್ಯಚರಣೆ ನಡೆಸುವಂತೆ ನಾಗರಿಕ ವಿಮಾನಯಾನ ಇಲಾಖೆಯ ಮಹಾಪ್ರಧಾನ ಪ್ರಬಂಧಕರು ನಿರ್ದೇಶನ ನೀಡಿದ್ದಾರೆ.

ಕೊಚ್ಚಿ ವಿಮಾನನಿಲ್ದಾಣಕ್ಕೆ 71 ಆಗಮನ ಮತ್ತು 74 ನಿರ್ಗಮನ ವಿಮಾನಗಳ ಸಂಚಾರ ಕೈಗೊಳ್ಳುತ್ತಿದ್ದು ಮಳೆಯ ಕಾರಣ ಎಲ್ಲ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.ಈ ಪೈಕಿ 23 ಆಗಮನ ಹಾಗೂ 24 ನಿರ್ಗಮನ ವಿಮಾನ ಸಂಚಾರಗಳ ಸಮಯವನ್ನು ಮಾರ್ಪಾಟು ಮಾಡಲಾಗಿದ್ದು ತಿರುವನಂತಪುರಂ, ಕ್ಯಾಲಿಕಟ್‌ ಹಾಗೂ ಕೊಯಮತ್ತೂರ್‌ನಿಂದ ಈ ವಿಮಾನಗಳ ಸಂಚಾರವನ್ನು ನಡೆಸಲಾಗುತ್ತಿದೆ.

DGCA asks private operators for additional flights to Kerala

9 ವಿದೇಶಿ ಏರ್‌ಕ್ರಾಫ್ಟ್‌ ಸಂಸ್ಥೆಗಳಖು ಸೇರಿದಂತೆ ದೇಶೀಯ ಎಲ್ಲಾ ವಿಮಾನ ಸಂಚಾರವನ್ನು ಕೊಚ್ಚಿನ್‌ ನಿಲ್ದಾಕ್ಕೆ ತೆರಳುವುದನ್ನು ರದ್ದುಪಡಿಸಿ ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧಾರ ತೆಗೆದುಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಕೇರಳಕ್ಕೆ ಬರುವ ಹಾಗೂ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸುರಕ್ಷಿತವಾಗಿರುವ ತಿರುವನಂತಪುರಂ, ಕ್ಯಾಲಿಕಟ್‌, ಕೊಯಮತ್ತೂರ್ ವಿಮಾನ ನಿಲ್ದಾಣಗಳಿಗೆ ಹೆಚ್ಚುವರಿಯಾಗಿ ವಿಮಾನ ಸಂಚಾರಕ್ಕೆ ವಿಮಾನಯಾನ ನಿರ್ದೇಶನಾಲಯ ನಿರ್ದೇಶನ ನೀಡಿದೆ.

ಭಾರಿ ಪ್ರವಾಹ, ಮಳೆಯ ಕಾರಣದಿಂದ ಹೆಚ್ಚುವರಿ ಪ್ರಯಾಣ ದರವನ್ನು ವಸೂಲಿ ಮಾಡುತ್ತಿದ್ದ ಖಾಸಗಿ ಕಂಪನಿಗಳಿಗೆ ಕಡಿವಾಣ ಹಾಕಿರುವ ನಾಗರಿಕ ವಿಮಾನಯಾನ ಇಲಾಖೆ ದೂರದ ಪ್ರಯಾಣಕ್ಕೆ ಗರಿಷ್ಠ 10 ಸಾವಿರ ರೂ, ಕನಿಷ್ಠ 8 ಸಾವಿರ ರೂಗಳ ದರ ನಿಗದಿಪಡಿಸಿ ಸೂಚನೆ ಹೊರಡಿಸಿದೆ.

ಪ್ರಯಾಣಿಕರ ಜನಸಂದಣಿ ಅತಿಯಾಗಿರುವ 32 ಮಾರ್ಗಗಳಲ್ಲಿ ತಿರುವನಂತಪುರಂ, ಕ್ಯಾಲಿಕಟ್‌, ಮಂಗಳೂರು ಸೇರಿದಂತೆ 32 ನೇರ ಮಾರ್ಗದಲ್ಲಿ ವಿಮಾನ ಪ್ರಯಾಣ ದರ ವಸೂಲಿ ಕುರಿತಂತೆ ಹದ್ದಿನ ಕಣ್ಣಿರಿಸಿರುವ ನಿರ್ದೇಶನಾಲಯ ಸಂಬಂಧಪಟ್ಟ ಸಂಸ್ಥೆಗಳಿಗೆ ಕಟ್ಟೆಚ್ಚರ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+