Sabarimala: ದೇವಸಂ ಬೋರ್ಡ್-ಪೊಲೀಸ್ ನಡುವೆ ಶೀತಲ ಸಮರ: ಶಬರಿಮಲೆಯಲ್ಲಿ ಭಕ್ತರಿಗೆ ಸಂಕಷ್ಟ
ಶಬರಿಮಲೈ ಜನವರಿ 4: ಶಬರಿಮಲೆಯ ಋತು ಆರಂಭವಾದಾಗಿನಿಂದ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಶಬರಿಮಲೆಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಈ ಸಂಖ್ಯೆ ಮಕರ ಜ್ಯೋತಿ ದರ್ಶನದ ದಿನದಂದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು ಈ ನಡುವೆ ಭಕ್ತರ ನಿರ್ವಹಣೆ ವಿಚಾರವಾಗಿ ದೇವಸಂ ಬೋರ್ಡ್ ಹಾಗೂ ಪೊಲೀಸರ ನಡುವೆ ಮನಸ್ತಾಪ ಆರಂಭವಾಗಿದೆ.
ಹೌದು.. ತಿರುವಾಂಕೂರು ದೇವಸಂ ಬೋರ್ಡ್ ಮತ್ತು ಪೊಲೀಸರ ನಡುವೆ ನಡೆಯುತ್ತಿರುವ ಶೀತಲ ಸಮರದಿಂದಾಗಿ ಶಬರಿಮಲೈನಲ್ಲಿ ಭಕ್ತರ ಸಂಕಷ್ಟ ಮುಂದುವರಿದಿದೆ.

ಕೇರಳದ ಶಬರಿಮಲೆಯಲ್ಲಿ ಮೊದಲು 'ವರ್ಚುವಲ್ ಕ್ಯೂ' ಎಂಬ ಯೋಜನೆಯನ್ನು ಜಾರಿಗೆ ತಂದ ಕೇರಳ ಪೊಲೀಸರು ಅದರ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದರು. ಜೊತೆಗೆ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಜಾಹೀರಾತುಗಳಿಗೆ ಪೊಲೀಸ್ ಇಲಾಖೆ ಹಣ ಪಡೆಯುತ್ತಿತ್ತು. ಕೇರಳ ಹೈಕೋರ್ಟ್ ಆದೇಶದಂತೆ ಕಳೆದ ವರ್ಷ ಈ ಯೋಜನೆಯನ್ನು ದೇವಸಂ ಮಂಡಳಿಗೆ ಹಸ್ತಾಂತರಿಸಲಾಗಿತ್ತು.
ಇದಾದ ನಂತರ ದೇವಸಂ ಬೋರ್ಡ್ ಮತ್ತು ಪೊಲೀಸರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವರದಿಗಳು ಬಂದಿವೆ. 'ಆನ್‌ಲೈನ್ ಸರತಿ ವ್ಯವಸ್ಥೆ' ಜಾರಿಗೆ ಬರುವ ಮುನ್ನ ನಿತ್ಯ ಲಕ್ಷಗಟ್ಟಲೆ ಭಕ್ತರು ಆಗಮಿಸುತ್ತಿದ್ದರೂ ಕೆಲ ಗಂಟೆಗಳ ಕಾಲ ಮಾತ್ರ ದಟ್ಟಣೆ ಉಂಟಾಗುತ್ತಿತ್ತು. ಅದರ ನಂತರ ಅದು ಸರಿಯಾಗುತ್ತಿತ್ತು.

ಕಳೆದ ವರ್ಷದವರೆಗೆ ಪೊಲೀಸರು ವರ್ಚುವಲ್ ಸರತಿ ಯೋಜನೆ ಹೊಂದಿದ್ದಾಗ 18 ಮೆಟ್ಟಿಲುಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರನ್ನು ತಿರುಗಿಸುವ ಮೂಲಕ ಜಾಮ್ ತಪ್ಪಿಸಲು ಪೊಲೀಸರು ಶ್ರದ್ಧೆಯಿಂದ ಕೆಲಸ ಮಾಡಿದರು. ಆದರೆ ಈ ವರ್ಷ ಪೊಲೀಸರು ಪ್ರತಿ ನಿಮಿಷಕ್ಕೆ 60 ಜನರನ್ನು ಮಾತ್ರ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಭಕ್ತರಿಗೆ ಬೇಗ ದೇವರ ದರ್ಶನವಾಗದೆ ಕಷ್ಟವಾಗುತ್ತಿದೆ. ಹಿಂದಿರು ಭಕ್ತರು ಗಂಟೆಗಟ್ಟಲೆ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ನಿಮಿಷಕ್ಕೆ ಕನಿಷ್ಠ 90 ಜನರನ್ನು ಲೋಡ್ ಮಾಡಲು ದೇವಸಂಬೋರ್ಡ್ ಮನವಿ ಮಾಡಿದೆ. ಆದರೆ ಪೊಲೀಸರು ಇದಕ್ಕೆ ಕಿವಿಗೊಟ್ಟಂತೆ ಕಾಣುತ್ತಿಲ್ಲ. ದೇವಸಂ ಬೋರ್ಡ್ ಹಾಗೂ ಪೊಲೀಸ್ ನಡುವಿನ ಈ ಶೀತಲ ಸಮರ ಶಬರಿಮಲೆಯಲ್ಲಿ ಭಕ್ತರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಅದಾಗ್ಯೂ ದೇವಸಂ ಮಂಡಳಿ ಮನಸ್ತಾಪಗಳನ್ನು ನಿರಾಕರಿಸುತ್ತಿದೆ.
ಶೀತಲ ಸಮರ, ಭಕ್ತರಿಗೆ ಸಂಕಷ್ಟ
ಶಬರಿಮಲೆ ಋತು ಆರಂಭವಾಗುತ್ತಿದ್ದಂತೆ ಅಯ್ಯಪ್ಪನ ಸನ್ನಿದಾನದಲ್ಲಿ ಭಕ್ತರ ಉದ್ದನೆಯ ಸರತಿ ಸಾಲು ಕಾಣಬಹುದು. 12 ಗಂಟೆಗಳ ಕಾಲ ಕಾಯುವುದರಿಂದ ಭಕ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಶಬರಿಮಲೆಗೆ ತೆರಳುವ ರಸ್ತೆಗಳಲ್ಲಿ ಅಲ್ಲೊಂದು ಇಲ್ಲೊಂದು ವಾಹನಗಳನ್ನು ನಿಲ್ಲಿಸಿ ವಾಹನಗಳಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿತ್ಯ ಭಕ್ತರಿಗೆ ಉಂಟಾಗಿದೆ.
ದೇವಸಂ ಬೋರ್ಡ್ ಮತ್ತು ಪೊಲೀಸರ ನಡುವಿನ ಭಿನ್ನಾಭಿಪ್ರಾಯವೇ ಇಷ್ಟೆಲ್ಲಾ ತೊಂದರೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಜ.15ರ ಮಕರಜ್ಯೋತಿ ದಿನದಂದು ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗದಂತೆ 10-15ರಿಂದ ಸ್ಪಾಟ್ ಬುಕ್ಕಿಂಗ್ ಸೌಲಭ್ಯವನ್ನು ದೇವಸಂ ಮಂಡಳಿ ಸ್ಥಗಿತಗೊಳಿಸಿದೆ. ಜ್ಯೋತಿ ದರ್ಶನ ದಿನದಂದು ಭಕ್ತಾದಿಗಳ ಸಂಖ್ಯೆಯನ್ನು 20 ಸಾವಿರಕ್ಕೆ ಇಳಿಸುವಂತೆ ಪೊಲೀಸರು ಒತ್ತಾಯಿಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಬ್ಬರ ನಡುವಿನ ಮನಸ್ತಾಪದಲ್ಲಿ ಭಕ್ತರು ತೊಂದರೆ ಅನುಭವಿಸುವಂತಾಗಿದ್ದು ವಿಪರ್ಯಾಸ.
-
Dhurandhar-2: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ












Click it and Unblock the Notifications