ದೇಶದಾದ್ಯಂತ ಎಲ್ಲಾ ಏರ್ ಪೋರ್ಟ್ ಗಳಲ್ಲಿ 1 ವಾರ ಪಾರ್ಕಿಂಗ್ ಫ್ರೀ

Written By: Ramesh
Subscribe to Oneindia Kannada

ನವದೆಹಲಿ, ನವೆಂಬರ್. 15 : ಐನೂರು ಹಾಗೂ ಸಾವಿರ ರು. ನೋಟಿನ ಮೇಲೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಟೋಲ್ಫ್ರೀ ಮಾಡಿದ್ದು. ಈಗ ದೇಶದಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವಾಹನಗಳಿಗೆ ಪಾರ್ಕಿಂಗ್ ಫ್ರೀ ಮಾಡಿದೆ.

ಎಲ್ಲೆಡೆ ಹಣಕಾಸಿನ ತೊಂದರೆ ಹೆಚ್ಚಾಗಿರುವ ಕಾರಣ ಮುಂದಿನ ಸೋಮವಾರ ನವೆಂಬರ್ 21ರ ವರೆಗೆ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವಾಹನಗಳಿಗೆ ಪಾರ್ಕಿಂಗ್ ಫ್ರೀ ಮಾಡಲಾಗಿದೆ ಎಂದು ಕೇಂದ್ರ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ. [ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ : ಚಾಲಕರ ವಿರೋಧ]

Demonetisation effect: Free parking at all Indian airports till November 21

ಸೋಮವಾರ ಮಧ್ಯರಾತ್ರಿಯಿಂದಲೇ ಈ ನಿಯಮ ಜಾರಿಯಾಗಿದ್ದು ನವೆಂಬರ್ 21ರ ಮಧ್ಯರಾತ್ರಿ ವರೆಗೆ ಈ ಉಚಿತ ಪಾರ್ಕಿಂಗ್ ಮುಂದುವರಿಯಲಿದೆ.

ವಿಮಾನ ನಿಲ್ದಾಣಗಳಲ್ಲಿ ಸೇರಿದಂತೆ ದೆಹಲಿ, ಬೆಂಗಳೂರು, ಮುಂಬೈ, ಹೈದರಬಾದ್ ನಗರಗಳಲ್ಲಿ ಮೆಟ್ರೋ ನಿಲ್ದಾಣಗಳಲ್ಲೂ ಸಹ ವಾಹನಗಳಿಗೆ ಉಚಿತ ಪಾರ್ಕಿಂಗ್ ಕಲ್ಪಿಸಲಾಗಿದೆ.

500 ಹಾಗೂ 1000 ರೂ.ನೋಟು ನಿಷೇಧದ ನಂತರ ಜನರು ಹಣ ವಿನಿಮಯಕ್ಕಾಗಿ ಬ್ಯಾಂಕ್‍ ಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಲ್ಲುತ್ತಿದ್ದಾರೆ. ಹಾಗೂ ಎಟಿಎಂಗಳಲ್ಲೂ ಹಣ ಡ್ರಾ ಮಾಡಲು ಪರದಾಡುತ್ತಿದ್ದಾರೆ. ಇದರಿಂದ ಈ ನಿರ್ಧಾರ ಕೈಗೊಳ್ಳಲಾಗಿದ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Amid growing criticism and public inconveniences following the Narendra Modi government's announcement of demonetisation of Rs 500 and Rs 1000 notes, Minister of State for Civil Aviation Jayant Sinha on November 14, said that parking at all Indian airports will be free until November 21.
Please Wait while comments are loading...