ನೋಟು ನಿಷೇಧ ಪರಿಣಾಮ: 3 ದಿನದಲ್ಲಿ 1 ಲಕ್ಷ ಐಫೋನ್ಸ್ ಸೇಲ್

Posted By:
Subscribe to Oneindia Kannada

ಕೊಲ್ಕತ್ತಾ, ನವೆಂಬರ್, 29: ನೋಟು ನಿಷೇಧ ಪರಿಣಾಮದಿಂದ ಪ್ರಸಿದ್ಧ ಮೊಬೈಲ್ ಫೋನ್ ತಯಾರಿಕಾ ಸಂಸ್ಥೆ ಆ್ಯಪಲ್ ಉತ್ಪನ್ನಗಳ ಮಾರಾಟದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.

ನೋಟು ನಿಷೇಧ ಆದೇಶ ಹೊರಡಿಸಿದ ಮೂರು ದಿನಗಳಲ್ಲಿ ದೇಶದಾದ್ಯಂತ ಐಫೋನ್ಸ್ ಮಾರಾಟದಲ್ಲಿ ವಿಪರೀತ ಹೆಚ್ಚಳವಾಗಿದ್ದು, ಹಲವು ಮಂದಿ ಬಿಲ್ ಗಳಲ್ಲಿ ಹಿಂದಿನ ದಿನಾಂಕಗಳನ್ನು ನಮೂದಿಸಿ ಐ ಫೋನ್ ಗಳನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ.

ಕಳೆದ ಮೂರು ದಿನಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಐ ಫೋನ್ ಗಳು ಮಾರಾಟವಾಗಿದ್ದು, ಇದು ಆ್ಯಪಲ್ ನ ಪ್ರತಿ ತಿಂಗಳ ಮಾರಾಟದಲ್ಲಿ ನಾಲ್ಕನೇ ಮೂರರಷ್ಟು ಹೆಚ್ಚು ಎಂದು ಹೇಳಲಾಗಿದೆ.

Rs 500 and Rs 1000 notes ban: Apple sales see huge jump in India

ನವೆಂಬರ್ 8ರಂದು ರೂ.500 ಹಾಗು 1,000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಚಿನ್ನ ಮತ್ತು ದುಬಾರಿ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದರೂ ಹೀಗಾಗಿ ಐ ಫೋನ್ ಖರೀದಿಯಲ್ಲೂ ವಿಪರೀತ ಹೆಚ್ಚಾಳವಾಗಿದೆ ಎಂದು ಹೇಳಲಾಗಿದೆ.

ನೋಟು ನಿಷೇದ ಆದೇಶ ಹೊರಡಿಸಿದ ನವೆಂಬರ್ 8ರಂದು ದೇಶದಾದ್ಯಂತ ಹಲವು ಐ ಫೋನ್ ಮಾರಾಟ ಸ್ಟೋರ್ ಗಳು ಮಧ್ಯರಾತ್ರಿವರೆಗೂ ವಹಿವಾಟು ನಡೆಸಿದ್ದು, ಗಣನೀಯ ಸಂಖ್ಯೆಯಲ್ಲಿ ಐ ಫೋನ್ ಗಳನ್ನು ಮಾರಾಟ ಮಾಡಿವೆ ಎಂದು ನವದೆಹಲಿಯ ಸೆಲ್ ಫೋನ್ ಮಾರಾಟ ಸಂಸ್ಥೆಯ ಮಾಲೀಕರೊಬ್ಬರು ತಿಳಿಸಿದ್ದಾರೆ.

ನವೆಂಬರ್ ತಿಂಗಳಲ್ಲಿ ಶೇ.20ರಿಂದ 30ರಷ್ಟು ಆ್ಯಪಲ್ ಮೊಬೈಲ್ ಫೋನ್ ಮಾರಾಟದಲ್ಲಿ ಹೆಚ್ಚಳವಾಗಿದೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ ಗಣನೀಯ ಎಂದು ಕೈಗಾರಿಕಾ ಕಾರ್ಯನಿರ್ವಾಹಕರು ವಿಶ್ಲೇಷಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
iPhone sales shot up in India in the three days immediately following demonetisation as consumers rushed to buy these devices with their phased out high-denomination notes and stores booked sales through back-dated receipts.
Please Wait while comments are loading...